ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಲು, ಆಧಾರ್ ಕಾರ್ಡ್ ಮಾಡಿಸಲು ಕೆಲವೊಂದು ಸಮಯಗಳಲ್ಲಿ ಮಾತ್ರ ಇಟ್ಟಿರುತ್ತಾರೆ. ಬಹಳಷ್ಟು ಜನರಿಗೆ ಹೊಸದಾಗಿ ಪಡಿತರ ಚೀಟಿಯನ್ನು ಮಾಡಿಸಬೇಕಾಗುತ್ತದೆ ಹಾಗಾದರೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಹೊಸದಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಆಹಾರ ಕರ್ನಾಟಕ ಎಂದು ಟೈಪ್ ಮಾಡಿ, ನಂತರ ಒಂದು ವಿಂಡೋ ಓಪನ್ ಆಗುತ್ತದೆ ಅಲ್ಲಿ ದ ಡಿಪಾರ್ಟ್ಮೆಂಟ್ ಆಫ್ ಸಿವಿಲ್ ಆಂಡ್ ಫುಡ್ ಸೆಕ್ಷನ್ ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಒಂದು ವೆಬ್ ಸೈಟ್ ಓಪನ್ ಆಗುತ್ತದೆ. ಅದರಲ್ಲಿ ಇ ಸೇವೆಗಳು ಎಂಬ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿದರೆ ಇ ಪಡಿತರ ಚೀಟಿ ಎಂಬ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿದರೆ ನ್ಯೂ ಆನ್ಲೈನ್ ಅಪ್ಲಿಕೇಷನ್ ಫಾರ್ ರೇಷನ್ ಕಾರ್ಡ್ ಎಂಬ ವಿಂಡೋ ಓಪನ್ ಆಗುತ್ತದೆ. ಇಲ್ಲಿ ಅರ್ಜಿಯನ್ನು ಕನ್ನಡದಲ್ಲಿ ಸಲ್ಲಿಸಬೇಕೊ ಅಥವಾ ಇಂಗ್ಲೀಷ್ ನಲ್ಲಿ ಸಲ್ಲಿಸಬೇಕೊ ಎಂದು ಕೇಳುತ್ತದೆ. ಕನ್ನಡದಲ್ಲಿ ಬೇಕಾದರೆ ಕನ್ನಡ ಎಂದು ಸೆಲೆಕ್ಟ್ ಮಾಡಿ, ಇಂಗ್ಲೀಷ್ ಬೇಕಾದರೆ ಇಂಗ್ಲೀಷ್ ಎಂದು ಸೆಲೆಕ್ಟ್ ಮಾಡಿ, ಸೆಲೆಕ್ಟ್ ಮಾಡಿದ ನಂತರ ಹೊಸ ಪಡಿತರ ಚೀಟಿ ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಆದ್ಯತಾ ಕುಟುಂಬ ಮತ್ತು ಆದ್ಯೇತರ ಕುಟುಂಬ ಎಂದು ಬರುತ್ತದೆ. ಆದ್ಯತಾ ಕುಟುಂಬ ಎಂದರೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು, ಆದ್ಯೇತರ ಕುಟುಂಬ ಎಂದರೆ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು. ಯಾವುದು ಬೇಕೋ ಅದನ್ನು ಸೆಲೆಕ್ಟ್ ಮಾಡಿ ನಂತರ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಾದರೆ ಕೆಲವು ಮಾಹಿತಿಯನ್ನು ಓದಿ ಸೆಲೆಕ್ಟ್ ಮಾಡಬೇಕು ನೀವು ಸರ್ಕಾರಿ ನೌಕರರಾಗಿದ್ದರೆ, ಖಾಸಗಿ ನೌಕರರಾಗಿದ್ದರೆ, ಕಾರ್ಪೊರೇಟ್ ನೌಕರರಾಗಿದ್ದರೆ ಅಥವಾ ಇನಕಮ್ ಟ್ಯಾಕ್ಸ್ ಪೆ ಮಾಡುತ್ತಿದ್ದರೆ ಹೌದು ಎಂದು ಇಲ್ಲದಿದ್ದರೆ ಇಲ್ಲ ಎಂದು ಸೆಲೆಕ್ಟ್ ಮಾಡಬೇಕು. ನಂತರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಭೂಮಿ ಮತ್ತು ಮನೆ ಹೊಂದಿದ್ದರೆ ಹೌದು ಇಲ್ಲದಿದ್ದರೆ ಇಲ್ಲ ಎಂದು ಸೆಲೆಕ್ಟ್ ಮಾಡಿ ನಂತರ ಸ್ವಂತ ವಾಹನವಿದ್ದರೆ ಹೌದು ಎಂದು, ಇಲ್ಲದಿದ್ದರೆ ಇಲ್ಲ ಎಂದು ಸೆಲೆಕ್ಟ್ ಮಾಡಿ, ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ಆದರೆ ಹೌದು ಎಂದು, ಇಲ್ಲ ಎಂದರೆ ಇಲ್ಲ ಎಂದು ಸೆಲೆಕ್ಟ್ ಮಾಡಿ. ನಂತರ ಮುಂದುವರೆಯಲು ಎಂದು ಬರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಹಿಂದೊಮ್ಮೆ ಅರ್ಜಿ ಸಲ್ಲಿಸಿದ್ದು ಅದನ್ನು ಲಿಂಕ್ ಮಾಡಲು ಬಯಸುವಿರಾ ಎಂದು ಕೇಳುತ್ತದೆ ಹೌದು ಎಂದರೆ ಹೌದು ಎಂದು, ಇಲ್ಲ ಎಂದರೆ ಇಲ್ಲ ಎಂದು ಸೆಲೆಕ್ಟ್ ಮಾಡಿದ ನಂತರ ಆಧಾರ ನಂಬರ್ ಅನ್ನು ಹಾಕಿ, ಮೊಬೈಲ್ ನಂಬರ್ ಅನ್ನು ಹಾಕಿ ನಂತರ ಮುಂದೆ ಎಂದು ಕ್ಲಿಕ್ ಮಾಡಿ.
ನಂತರ ಒಂದು ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಕೈ ಬೆರಳಿನ ಗುರುತು ಕೇಳುತ್ತದೆ ಆಗ ಬಟನ್ ಮೇಲೆ ಕ್ಲಿಕ್ ಮಾಡಿದರೆ, ಫಿಂಗರ್ ಪ್ರಿಂಟ್ ಡಿವೈಸ್ ಕಂಪ್ಯೂಟರ್ ಗೆ, ಲ್ಯಾಪ್ಟಾಪ್ ಗೆ ಲಿಂಕ್ ಇದ್ದರೆ ಅಟ್ಯಾಚ್ ಆಗುತ್ತದೆ. ನಂತರ ಕ್ಯಾಪ್ಷನ್ ಕೋಡ್ ಎಂಟ್ರಿ ಮಾಡಿ ಕ್ಯಾಪ್ಚರ್ ಎಂದು ಕ್ಲಿಕ್ ಮಾಡಿದರೆ ಫಿಂಗರ್ ಯಶಸ್ವಿಯಾಗಿ ವೆರಿಫೈ ಆಗುತ್ತದೆ. ನಂತರ ಅಪ್ಲಿಕೇಷನ್ ಪ್ರೊಸೆಸ್ ಸ್ಟಾರ್ಟ್ ಆಗುತ್ತದೆ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರಿಸಿಕೊಳ್ಳಬಹುದು, ನೆಕ್ಸ್ಟ್ ಎಂದು ಕ್ಲಿಕ್ ಮಾಡುತ್ತಾ ಹೋದಾಗ ಒಂದು ನಂಬರ್ ಜನರೇಟ್ ಆಗುತ್ತದೆ. ಆ ನಂಬರನ್ನು ಬರೆದಿಟ್ಟುಕೊಳ್ಳಬೇಕು ನಂತರ ಆ ನಂಬರ್ ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.