ಕಿವಿ ಹಣ್ಣನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಹಾಗೂ ಕಿವಿ ಹಣ್ಣು ತಿನ್ನುವ ವಿಧಾನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಕಿವಿ ಹಣ್ಣು ನೋಡಲು ಚಿಕ್ಕು ಹಣ್ಣಿನ ಹಾಗೆ ಇರುತ್ತದೆ ಒಳಗೆ ಹಸಿರು ಕಲರ್ ಇರುತ್ತದೆ. ಈ ಹಣ್ಣು ಸ್ವಲ್ಪ ಹುಳಿ, ಸಿಹಿಯಿಂದ ಕೂಡಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಎ, ವಿಟಮಿನ್ ಸಿಕ್ಸ್ ಅಲ್ಲದೇ ಆಂಟಿ ಆಕ್ಸಿಡೆಂಟ್ ಇರುತ್ತದೆ. ಈ ಹಣ್ಣಿನ ಸೇವನೆಯಿಂದ ಆರೋಗ್ಯದ ಜೊತೆಗೆ ಸೌಂದರ್ಯವು ಹೆಚ್ಚುತ್ತದೆ.
ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಗುಡ್ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಿ ಬ್ಯಾಡ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ ಅಲ್ಲದೇ ಹೃದಯ ಸಂಬಂಧಿ ಖಾಯಿಲೆಯನ್ನು ತಡೆಯುತ್ತದೆ. ಇದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಕೈ ಕಾಲು ನೋವಿರುವವರು ಕಿವಿ ಹಣ್ಣನ್ನು ತಪ್ಪದೇ ಸೇವಿಸಬೇಕು. ಕಿವಿ ಹಣ್ಣನ್ನು ತಿನ್ನುವುದರಿಂದ ನಿದ್ರಾ ಸಮಸ್ಯೆ ನಿವಾರಣೆಯಾಗುತ್ತದೆ. ಕಿವಿ ಹಣ್ಣು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಜರ ಬಂದಾಗ ಕಿವಿ ಹಣ್ಣನ್ನು ತಿನ್ನಬಹುದು ಏಕೆಂದರೆ ಜ್ವರದಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಕಿವಿ ಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ಬರದಂತೆ ತಡೆಯುತ್ತದೆ. ಡೆಂಗ್ಯೂ, ಚಿಕನ್ ಗುನ್ಯಾ ಖಾಯಿಲೆ ಬಂದವರು ಕಿವಿ ಹಣ್ಣನ್ನು ಸೇವಿಸಬೇಕು ಡೆಂಗ್ಯೂ, ಚಿಕನ್ ಗುನ್ಯಾ ಬಂದಾಗ ದೇಹದಲ್ಲಿ ವೈಟ್ ಬ್ಲಡ್ ಸೆಲ್ಸ್ ಕಡಿಮೆಯಾಗುತ್ತದೆ ಆಗ ಕಿವಿ ಹಣ್ಣು ತಿನ್ನುವುದರಿಂದ ವೈಟ್ ಬ್ಲಡ್ ಸೆಲ್ಸ್ ಹೆಚ್ಚಾಗುತ್ತದೆ.
ಕಿವಿ ಹಣ್ಣು ಬಹಳ ಕಾಸ್ಟ್ಲಿ ಆಗಿರುತ್ತದೆ ಈ ಹಣ್ಣನ್ನು ಕೆಲವರು ಸ್ಲೈಸ್ ಮಾಡಿಕೊಂಡು ತಿನ್ನುತ್ತಾರೆ ಇದರಿಂದ ಬಹಳಷ್ಟು ವೇಸ್ಟ್ ಆಗುತ್ತದೆ. ಆದ್ದರಿಂದ ಕಿವಿ ಹಣ್ಣನ್ನು ಮಧ್ಯದಲ್ಲಿ ಕಟ್ ಮಾಡಿಕೊಂಡು ಸ್ಪೂನ್ ನಿಂದ ತೆಗೆದುಕೊಂಡು ತಿನ್ನಬಹುದು ಹೀಗೆ ತಿನ್ನುವುದರಿಂದ ಹಣ್ಣು ವೇಸ್ಟಾಗುವುದಿಲ್ಲ. ಈ ಹಣ್ಣು ಬಹಳ ರುಚಿಯಾಗಿರುತ್ತದೆ. ಈ ಹಣ್ಣು ದುಬಾರಿಯಾದರೂ ಆಗಾಗ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.