ಆರೋಗ್ಯದ ವಿಚಾರ ಬಂದಾಗ ಯಾರು ಕೂಡ ಹಣದ ಮುಖ ನೋಡುವುದಿಲ್ಲ ಎನ್ನುವುದು ಎಲ್ಲಾ ವ್ಯಾಪಾರಿಗಳಿಗೂ ತಿಳಿದ ವಿಷಯವೇ. ಅದರಲ್ಲಿಯೂ ಮಕ್ಕಳ ಆರೋಗ್ಯದ ವಿಚಾರದಲ್ಲಿ ಹಣ ಎಷ್ಟೊಂದು ಯಾರೊಬ್ಬರೂ ಸಹ ಹೆಚ್ಚಾಗಿ ಕೇಳಲು ಹೋಗುವುದಿಲ್ಲ. ಈ ಕೆಲವು ಅಗತ್ಯತೆಗಳನ್ನು ಮನಗೊಂಡಂತಹ ಬಹುರಾಷ್ಟ್ರೀಯ ಕಂಪನಿಗಳು ಮಕ್ಕಳ ಹಾಗೂ ಹಿರಿಯರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪಾನೀಯಗಳನ್ನು ಅಥವಾ ಪೇಯಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಯಲ್ಲಿ ಸಾಕಷ್ಟು ವ್ಯಾಪಾರ ಮಾಡುತ್ತಿವೆ. ಅಷ್ಟೇ ಅಲ್ಲದೆ ತಮ್ಮ ತಮ್ಮ ಕಂಪನಿಯ ಆರೋಗ್ಯಕರ ಪೇಯಗಳನ್ನು ಪ್ರಚಾರಮಾಡಲುಹೇಳುವುದರ ಮೂಲಕ ಜನರನ್ನು ಆಕರ್ಷಣೆ ಮಾಡುತ್ತಾರೆ. ಇದರ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಆರೋಗ್ಯಕರ ಪೇಯಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದಷ್ಟೇ ಅಲ್ಲದೆ ದಿನೇ ದಿನೇ ಬೇಡಿಕೆ ಕೂಡ ಹೆಚ್ಚುತ್ತಿದೆ. ಜನಪ್ರಿಯವಾಗಿರುವ ಬೋರ್ನ್ವಿಟ ಹೋರ್ಲಿಕ್ಸ್ ಮುಂತಾದವುಗಳು ಇವುಗಳು ಪೌಡರ್ ರೂಪದಲ್ಲಿ ದೊರೆಯುತ್ತಿದ್ದು ಹಾಲಿನ ಜೊತೆಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯದಿಂದಿರುತ್ತಾರೆ ಎಂದು ಆನಂದವಾಗಿ ಕುಡಿಯುತ್ತಾರೆ. ಆದರೆ ಶುದ್ಧವಾಗಿರುತ್ತದೆ ಎನ್ನುವುದು ನಮಗೆ ಅರಿವು ಇರುವುದಿಲ್ಲ. ಸಾಧ್ಯವಾದಷ್ಟು ಮನೆಯಲ್ಲಿ ಸ್ವತಹ ಸ್ವಚ್ಛವಾಗಿ ಮಾಡಿಕೊಂಡು ಕುಡಿಯಬಹುದು. ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ನಾವು ಮನೆಯಲ್ಲಿಯೇ ಹಾರ್ಲಿಕ್ಸ್ ಪೌಡರ್ ಮಾಡಿಕೊಳ್ಳಲು ಬೇಕಾಗುವ ಪದಾರ್ಥಗಳು ಈ ರೀತಿಯಾಗಿದೆ. ಒಂದು ಕಪ್ ಗೋಧಿ ಅರ್ಧ ಕಪ್ ಬಾದಾಮಿ ಕಾಲು ಕಪ್ ಕಡ್ಲೆಬೀಜ ಅರ್ಧ ಕಪ್ ಕಲ್ಲು ಸಕ್ಕರೆ, ಅರ್ಧ ಕಪ್ ಹಾಲಿನ ಪುಡಿ. ಇದಿಷ್ಟು ಪದಾರ್ಥಗಳು ಇದ್ದರೆ ಮನೆಯಲ್ಲಿಯೇ ಸುಲಭವಾಗಿ ಹಾರ್ಲಿಕ್ಸ್ ಪೌಡರ್ ತಯಾರಿಸಬಹುದು.
ಇನ್ನು ಈ ಹಾರ್ಲಿಕ್ಸ್ ಪೌಡರ್ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ ಮೊದಲಿಗೆ ಒಂದು ಪಾತ್ರೆಗೆ ಗೋಧಿಯನ್ನು ಹಾಕಿ ಚೆನ್ನಾಗಿ ಎರಡರಿಂದ ಮೂರು ಬಾರಿ ತೊಳೆದುಕೊಂಡು ಸ್ವಲ್ಪ ನೀರು ಹಾಕಿ ರಾತ್ರಿ ಪೂರ್ತಿ ಅದನ್ನು ನೆನೆಸಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಮತ್ತೆ ಎರಡರಿಂದ ಮೂರು ಬಾರಿ ಗೋಧಿಯನ್ನು ತೊಳೆದುಕೊಂಡು ಅದರಲ್ಲಿರುವ ನೀರನ್ನು ಚೆಲ್ಲಿ ಗೋಧಿಯನ್ನು ಒಂದು ಕಾಟನ್ ಬಟ್ಟೆಗೆ ಹಾಕಿ ಎರಡು ದಿನಗಳ ಕಾಲ ಅದನ್ನು ಹಾಗೆಯೇ ಬಿಡಬೇಕು. ಹೀಗೆ ಬಿಟ್ಟರೆ ಗೋಧಿಯಲ್ಲಿ ಮೊಳಕೆ ಬರುತ್ತದೆ ನಂತರ ಅದನ್ನು ನೀವು ಚೆನ್ನಾಗಿ ಒಣಗಿಸಿ ಒಂದು ಫ್ರೈಯಿಂಗ್ ಪ್ಯಾನ್ ಗೆ ಹಾಕಿ 20 ರಿಂದ 30 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು.
ನಂತರ ಅದನ್ನು ಒಂದು ಪಾತ್ರೆಗೆ ತೆಗೆದು ಹಾಕಿ ಅದೇ ಪ್ಯಾನ್ ಗೆ ಕಾಲು ಕಪ್ ಕಡಲೆ ಬೀಜವನ್ನು ಹಾಕಿ ಎರಡರಿಂದ ಮೂರು ನಿಮಿಷಗಳವರೆಗೆ ಮಾಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ನಂತರ ಒಂದು ತಟ್ಟೆಗೆ ತೆಗೆದಿಟ್ಟು ಅದೇ ಪ್ಯಾನ್ ಗೆ ಅರ್ಧ ಕಪ್ ಬಾದಾಮಿಯನ್ನು ಹಾಕಿ ಅದನ್ನು ಕೂಡ ಚೆನ್ನಾಗಿ ನಾಲ್ಕು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ಈಗ ಫ್ರೈ ಮಾಡಿಟ್ಟುಕೊಂಡಿರುವ ಗೋಧಿ, ಬಾದಾಮಿ ಕಡಲೇ ಬೀಜ ಇವೆಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಇದನ್ನು ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು. ನಂತರ ಅದನ್ನು ಶೋಧಿಸಿಕೊಂಡ ನಂತರ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಅದನ್ನು ಸಹ ಸೋಸಿಕೊಳ್ಳಬೇಕು. ನಂತರ ಅದಕ್ಕೆ ಅರ್ಧ ಕಪ್ ಹಾಲಿನ ಪುಡಿಯನ್ನು ಹಾಕಿ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಹಾರ್ಲಿಕ್ಸ್ ಸಿದ್ದವಾಗುತ್ತದೆ.