ಒಂದು ಕಡೆ ಶಿವನ ದೇವಸ್ಥಾನ ಇದೆ. ಆದರೆ ಪೂಜೆ ನಡೆಯುವುದಿಲ್ಲ. ಅಲ್ಲಿ ಅರ್ಚಕರು ಕೂಡ ಇಲ್ಲ. ಶ್ರದ್ಧೆ ಮತ್ತು ಭಕ್ತಿಯಿಂದ ತುಂಬಬೇಕಿತ್ತು ಈ ದೇವಾಲಯ. ಆದರೆ ಅಲ್ಲಿ ಭಯ ತುಂಬಿಕೊಂಡಿದೆ. ಒಂದು ವೇಳೆ ಇಲ್ಲಿಗೆ ರಾತ್ರಿ ಯಾರಾದರೂ ಬಂದರೆ ಅವರು ಕಲ್ಲಾಗುತ್ತಾರೆ ಎಂಬ ನಂಬಿಕೆ ಇಲ್ಲಿಯ ಜನರಿಗೆ ಇದೆ. ಈ ನಿಗೂಢತೆಯನ್ನು ಸೃಷ್ಟಿಸುವ ಆ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದೇವಾಲಯ ಎಂದರೆ ಜನರು ಪ್ರೀತಿಯಿಂದ ಭೇಟಿ ಕೊಡುತ್ತಾರೆ. ಆದರೆ ಈ ದೇವಾಲಯದ ಹೆಸರು ಕೇಳಿದರೆ ಭಯ ಬೀಳುತ್ತಾರೆ. ಸೂರ್ಯ ಮುಳುಗುವ ಸಮಯ ಹತ್ತಿರವಾಗುತ್ತಿದ್ದಂತೆ ಭಯ ಹುಟ್ಟಿಕೊಳ್ಳುತ್ತದೆ. ಈ ದೇವಸ್ಥಾನ ಇರುವುದು ರಾಜಸ್ಥಾನದಿಂದ 35ಕಿಲೋಮೀಟರ್ ದೂರ ಇರುವ ಹಾತ್ಮಾ ಎಂಬ ಗ್ರಾಮದ ಕಿರಾಡು ಎಂಬ ಪ್ರದೇಶದಲ್ಲಿ ಇದೆ. ಈ ದೇವಸ್ಥಾನಕ್ಕೆ ಬಂದವರನ್ನು ಕತ್ತಲಾಗುವ ಹೊತ್ತಿಗೆ ಹೊರಗೆ ಹೋಗುವಂತೆ ಹೇಳಲಾಗುತ್ತದೆ. ಕತ್ತಲಾದ ಮೇಲೆ ಆ ಪ್ರಾಂತ್ಯದ ಜನ ಕೂಡ ಆ ದೇವಸ್ಥಾನದಲ್ಲಿ ಇರುವುದಿಲ್ಲ.
ಐದು ದೇವಾಲಯಗಳ ಸಮೂಹವಾದ ಸೋಮೇಶ್ವರಗುಡಿ ಒಂದು ಆಕರ್ಷಣೀಯ ಕೇಂದ್ರವಾಗಿದೆ. ಇಲ್ಲಿ ಪ್ರಸ್ತುತವಾಗಿ ವಿಷ್ಣುವಿನ ಗುಡಿಯನ್ನು ಮಾತ್ರ ನೋಡಲು ಅವಕಾಶವಿದೆ. ಸಾವಿರಾರು ವರ್ಷ ಹಳೆಯ ದೇವಾಲಯ ಇದಾದರೂ ಇದು ಮೂಲೆಗುಂಪು ಆಗಿರುವ ದೇವಸ್ಥಾನ ಆಗಿದೆ. ಇದಕ್ಕಿರುವ ಒಂದು ವಿಶೇಷತೆ ಎಂದರೆ ಇದು ಪ್ರವಾಸಿತಾಣ ಆಗಿದೆ. ಆದರೆ ರಾತ್ರಿ ವೇಳೆ ಚಿತ್ರ ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತವೆ ಎಂದು ಹೇಳುತ್ತಾರೆ. ಆದರೆ ಅದು ಎಲ್ಲಿಂದ ಹೇಗೆ ಬರುತ್ತದೆ ಎನ್ನುವ ವಿಷಯ ಮಾತ್ರ ರಹಸ್ಯವಾಗಿ ಉಳಿದಿದೆ. ಇದೇ ಕಾರಣಕ್ಕೆ ಹಾಳು ಬಿದ್ದ ಈ ಶಿವನ ಮಂದಿರಕ್ಕೆ ಬರಲು ಭಯಪಡುತ್ತಾರೆ.
ಈ ದೇವಾಲಯವು ಅತ್ಯಂತ ಸುಂದರವಾಗಿದೆ. ಈ ದೇವಾಲಯಕ್ಕೆ ರಾತ್ರಿ ಯಾರಾದರೂ ಬಂದರೆ ಅವರು ಕಲ್ಲಾಗುತ್ತಾರೆ ಎನ್ನುವ ಶಾಪವಿದೆ. ಈ ಶಾಪಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಯಾವುದೇ ಶಾಸ್ತ್ರದಲ್ಲಿ ಅಥವಾ ಗ್ರಂಥದಲ್ಲಿ ಉಲ್ಲೇಖವಿಲ್ಲ. ಆದರೆ ಭಯ ಮಾತ್ರ ಇನ್ನೂ ಇಲ್ಲಿ ಕಾಣುತ್ತಲೇ ಇದೆ. ಈ ದೇವಾಲಯಗಳಲ್ಲಿನ ಕಲ್ಲುಗಳು ಬಹಳಷ್ಟು ಸುಂದರವಾಗಿದೆ. ಇಲ್ಲಿ ಬಂದವರು ಇನ್ನೂ ಹೆಚ್ಚು ಕಾಲ ಇರಲು ಬಯಸುತ್ತಾರೆ. ಆದರೆ ರಾತ್ರಿಯ ವಿಷಯ ಕೇಳಿದರೆ ಇಲ್ಲಿ ಯಾರೂ ಕೂಡ ಇರಲು ಮನಸ್ಸು ಮಾಡುವುದಿಲ್ಲ.
ಈ ದೇವಾಲಯವನ್ನು ಶತಮಾನಗಳ ಹಿಂದೆ ಸ್ಥಾಪಿಸಿದ್ದರೂ ಕೂಡ ಇದರ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ. ಇದಕ್ಕೆ ಹೋಗುವ ಬಯಸುವವರು ಪಕ್ಕದ ಚಿಕ್ಕ ಬಾಗಿಲಿಗೆ ಹೋಗಿ ಒಬ್ಬೊಬ್ಬರೇ ಪ್ರವೇಶಿಸಬೇಕು. ಅಷ್ಟು ಭಯವಿದ್ದರೂ ಕೂಡ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕೆಲವು ರಹಸ್ಯಗಳು ನಂಬಲಾಗದಿದ್ದರೂ ತಳ್ಳಿ ಹಾಕುವಂತಿಲ್ಲ ಎನ್ನುವ ನಾಣ್ಣುಡಿಗೆ ಈ ದೇವಾಲಯ ಸಾಕ್ಷಿಯಾಗಿದೆ.