ಮಾಸ್ಟರ್ ಮಂಜುನಾಥ್ ಅವರನ್ನು ಯಾರು ನೋಡಿಲ್ಲ. ಅವರು ಚಿಕ್ಕ ವಯಸ್ಸಿನಲ್ಲಿ ಇರುವಾಗ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಟನೆ ಅತ್ಯಂತ ಅದ್ಭುತ. ಅವರು ದೊಡ್ಡವರಾದ ಮೇಲೆ ತಮ್ಮ ನಟನೆಯನ್ನು ಕಡಿಮೆ ಮಾಡಿದರು. ನಾವು ಇಲ್ಲಿ ಮಾಸ್ಟರ್ ಮಂಜುನಾಥ್ ಹಾಗೂ ಶಂಕರ್ ನಾಗ್ ಅವರ ಸಂಬಂಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಶಂಕರ್ ನಾಗ್ ಅವರು ಬಹಳ ಸಿಂಪಲ್ ವ್ಯಕ್ತಿಯಾಗಿದ್ದರು. ಮಾಸ್ಟರ್ ಮಂಜುನಾಥ್ ಅವರು 2 ಸಿನೆಮಾವನ್ನು ಮಾಡಿದ್ದರು. ಒಂದು ಬಾರಿ ಮಾಸ್ಟರ್ ಮಂಜುನಾಥ್ ಅವರು ಶಾಲೆಯಲ್ಲಿ ಇದ್ದಾಗ ಶಂಕರ್ ನಾಗ್ ಅವರು ಕ್ಲಾಸಿಗೆ ಬಂದು ಒಂದು ಸೀನ್ ಬಿಟ್ಟು ಹೋಗಿದೆ ಎಂದು ಅವರನ್ನು ಕರೆದುಕೊಂಡು ಹೋದರು. ಆದರೆ ಅವರು ಐಸ್ಕ್ರೀಮ್ ಅಂಗಡಿಗೆ ಕರೆದುಕೊಂಡು ಹೋಗಿದ್ದರು. ಶಂಕರ್ ನಾಗ್ ಅವರ ಸಿನೆಮಾ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಎಲ್ಲೋ ಹೋಗಲು ಇಷ್ಟವಿರದೆ ಇವರನ್ನು ಕರೆದುಕೊಂಡು ಹೋಗಿ ಐಸ್ಕ್ರೀಮ್ ತಿನ್ನಿಸಿ ಹರಟೆ ಹೊಡೆದು ತಾವು ತಿಂದು ಖುಷಿಪಟ್ಟರು.
ಶಂಕರ್ ನಾಗ್ ಅವರ ಹೆಸರು ಕೇಳಿದಾಗ ಒಬ್ಬ ಎಕ್ಸ್ಟ್ರಾರ್ಡಿನರಿ ಜಿನಿಯಸ್ ಪರ್ಸನ್ ಮತ್ತು ಆಯ್ ಎಂ ಲಕ್ಕಿ ಎಂಬ ಎರಡು ಶಬ್ದಗಳು ಮಾಸ್ಟರ್ ಮಂಜುನಾಥ್ ಅವರಿಗೆ ನೆನಪಾಗುತ್ತದೆ. ಅವರು ಕೇವಲ ಸಿನೆಮಾ ಅಥವಾ ನಾಟಕೀಯ ರಂಗಗಳನ್ನು ಮುಟ್ಟಿರಲಿಲ್ಲ. ಹಲವಾರು ಜನರ ಹೃದಯಗಳನ್ನು ಸಹ ಮುಟ್ಟಿದ್ದರು. ಈಗಿನ ಯುವ ಪ್ರತಿಭೆಗಳು ಸಹ ಅವರನ್ನು ಇಷ್ಟಪಡುತ್ತಾರೆ. ಇನ್ನು 10ವರ್ಷಗಳ ಕಾಲ ಅವರು ಇದ್ದಿದ್ದರೆ ಕನ್ನಡ ಚಿತ್ರರಂಗ ಎಲ್ಲಿಯೋ ಹೋಗಿ ಮುಟ್ಟುತ್ತಿತ್ತು. ಉಳಿದ ಪ್ರತಿಭೆಗಳನ್ನು ಸಹ ಎತ್ತರಕ್ಕೆ ಕರೆದೊಯ್ಯುತ್ತಿದ್ದರು. ಯಾವುದೂ ಸಾಧ್ಯವಿಲ್ಲ ಎನ್ನುವ ಪದ ಅವರ ಕೈಯಲ್ಲಿ ಇರುತ್ತಿರಲಿಲ್ಲ.
ಯಾವಾಗಲೂ ಶೂಟಿಂಗ್ ನಡೆಯುತ್ತಲೇ ಇರಬೇಕು ಯಾವಾಗಲೂ ನಿಲ್ಲಬಾರದು ಎನ್ನುವುದು ಅವರ ಆಲೋಚನೆ ಆಗಿತ್ತು. ಮಾಲ್ಗುಡಿ ಡೇಸ್ ಸಿನೆಮಾ ಮಾಡುವಾಗ ಅವರಿಗೆ ತುಂಬಾ ಜ್ವರ ಬಂದಿತ್ತು. ಆದರೂ ಕೂಡ ಶೂಟಿಂಗ್ ನಿಲ್ಲಿಸಬಾರದು ಎಂದು ಹೇಳುತ್ತಿದ್ದರು. ಶಂಕರ್ ನಾಗ್ ಅವರ ತಲೆಯಲ್ಲಿ ಒಂದೇ ಬಾರಿ 12 ಪ್ರೊಜೆಕ್ಟ್ ಗಳು ಓಡುತ್ತಿದ್ದವು. ಹಾಗಾಗಿ ಶಂಕರ್ ನಾಗ್ ಅಂತಹವರು ಹಿಂದೂ ಹುಟ್ಟಿಲ್ಲ. ಹಾಗೆಯೇ ಮುಂದೂ ಕೂಡ ಹುಟ್ಟಲು ಸಾಧ್ಯವಿಲ್ಲ.