ಹೆಚ್ಚಿನ ಜನರು ಮುಖದ ಸೌಂದರ್ಯವನ್ನು ಹೆಚ್ಚಿಸಲು ಕೆಮಿಕಲ್ ಯುಕ್ತ ಸ್ಕ್ರಬ್ಬರ್ ಬಳಸುತ್ತಾರೆ ಆದರೆ ಅದು ಮುಖಕ್ಕೆ ಅ ಪಾ ಯಕಾರಿ. ಹಾಗಾಗಿ ಮನೆಯಲ್ಲೇ ನ್ಯಾಚುರಲ್ ಸ್ಕ್ರಬ್ಬರ್ ಮಾಡುವುದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮನೆಯಲ್ಲಿ ಅಕ್ಕಿ ಹಿಟ್ಟಿನ ಸ್ಕ್ರಬ್ಬರ್ ಮಾಡಿಕೊಳ್ಳಬಹುದು. 90% ಎಲ್ಲರ ಮನೆಗಳಲ್ಲಿ ಅಕ್ಕಿ ಹಿಟ್ಟು ಇರುತ್ತದೆ. ಅಕ್ಕಿ ಹಿಟ್ಟನ್ನು ಬಳಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮುಖಕ್ಕೆ ಅಕ್ಕಿ ಹಿಟ್ಟಿನ ಮಸಾಜ್ ಮಾಡುವುದರಿಂದ ಆಯ್ಲಿ ಸ್ಕಿನ್ ಕಡಿಮೆಯಾಗುತ್ತದೆ, ಪಿಂಪಲ್ಸ್ ಕಡಿಮೆಯಾಗುತ್ತದೆ, ಕಲೆಗಳು ಹೋಗುತ್ತದೆ. ಅಕ್ಕಿ ಹಿಟ್ಟು ಮುಖದ ಗ್ಲೋ ಹೆಚ್ಚಿಸುತ್ತದೆ ಮತ್ತು ವೈಟ್ ಹೆಡ್ಸ್ ಮತ್ತು ಬ್ಲಾಕ್ ಹೆಡ್ಸ್ ಹೋಗುತ್ತದೆ. ಬೆಳಗ್ಗೆ ಮತ್ತು ರಾತ್ರಿ ಅಕ್ಕಿ ಹಿಟ್ಟಿನ ಸ್ಕ್ರಬ್ಬರ್ ಮಾಡಿಕೊಳ್ಳಬೇಕು. ಯಾವುದೇ ಸೋಪ್, ಫೇಸ್ ವಾಶ್ ಬಳಸಿದರು ಈ ಸ್ಕ್ರಬ್ಬರ್ ಮಾಡಿಕೊಳ್ಳಬಹುದು.
ಯಾವುದೇ ಸೋಪ್ ಅಥವಾ ಫೇಸ್ ವಾಶ ಮುಖಕ್ಕೆ ಅಪ್ಲೈ ಮಾಡಿ ಅದರ ನೊರೆಯ ಮೇಲೆ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಡಿಪ್ ಮಾಡಿಕೊಳ್ಳಬೇಕು ಮೂಗು, ತುಟಿ ಮೇಲ್ಗಡೆ, ಬಾಯಿಯ ಕೆಳಗಡೆ ಸರಿಯಾಗಿ 5 ನಿಮಿಷ ಮುಖಕ್ಕೆ ಸ್ಕ್ರಬ್ ಮಾಡಿ ಫೇಸ್ ವಾಶ್ ನಿಂದ ವಾಷ್ ಮಾಡಬೇಕು ನಂತರ ಸೋಪು ಅಥವಾ ಫೇಸ್ ವಾಶ್ ನಿಂದ ಮುಖವನ್ನು ತೊಳೆಯಬೇಕು. ಪಿಂಪಲ್ಸ್ ಜಾಸ್ತಿ ಇರುವವರು ನಿಧಾನವಾಗಿ ಸ್ಕ್ರಬ್ ಮಾಡಬೇಕು. ಅಕ್ಕಿ ಹಿಟ್ಟು ತರಿ ತರಿಯಾಗಿರಬೇಕು.
ಅಕ್ಕಿ ಹಿಟ್ಟು ಮಾಡಿಕೊಳ್ಳುವುದಾದರೆ ಅಕ್ಕಿಯನ್ನು ನೆನೆಸಿ ಒಳ್ಳೆ ಕಾಟನ್ ಬಟ್ಟೆಯಲ್ಲಿ ಒಣಗಿಸಿ ಒಣಗಿದ ನಂತರ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪೌಡರ್ ಮಾಡಿಕೊಳ್ಳಬೇಕು. ಇದನ್ನು ಬಾಯ್ಸ್ ಮತ್ತು ಗರ್ಲ್ಸ್ ಇಬ್ಬರು ಬಳಸಬಹುದು. ಇದನ್ನು ವರ್ಷಾನುಗಟ್ಟಲೆ ಪ್ರತಿದಿನ ಬಳಸಬಹುದು. ಮುಖದ ಮೇಲಿನ ಪಿಂಪಲ್ಸ್ ಜೊತೆಗೆ ಬ್ಲಾಕ್ ಮತ್ತು ವೈಟ್ ಹೆಡ್ಸ್ ಕೂಡ ಹೋಗುತ್ತದೆ.