ಕೆಲವು ವಿಷಯಗಳನ್ನು ನಾವು ಹೆಚ್ಚಾಗಿ ನೋಡಿದ ಹಾಗೆ ಒಂದೇ ರೀತಿಯಲ್ಲಿ ಇರುತ್ತವೆ. ಹಿರಿಯರು ಹೇಳಿದ್ದಾರೆ ಎಂದು ಕೆಲವುಗಳನ್ನು ಅನುಸರಿಸಿಕೊಂಡು ಹೋಗುತ್ತಾರೆ. ಆದರೆ ಅಂತಹವುಗಳ ಕಾರಣಗಳನ್ನು ಯಾರೂ ಕೂಡ ಪ್ರಶ್ನೆ ಮಾಡುವುದಿಲ್ಲ. ನಾವು ಇಲ್ಲಿ ಕೆಲವು ಹಿಸ್ಟೊರಿಕಲ್ ಫ್ಯಾಕ್ಟ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದು ಮಧ್ಯಕಾಲೀನ ಯುಗದಲ್ಲಿ ಮತ್ತು ಅಮೆರಿಕ ದೇಶದಲ್ಲಿ ಕತ್ತೆ, ನಾಯಿ, ಹಂದಿ ಮುಂತಾದ ಪ್ರಾಣಿಗಳ ಮೇಲೆ ಕೇಸ್ ನಡೆಸಲಾಗುತ್ತಿತ್ತು. ಅಷ್ಟೇ ಅಲ್ಲ ಕೆಲವೊಂದು ಕೇಸ್ ಗಳಲ್ಲಿ ಜಡ್ಜ್ ಆ ಪ್ರಾಣಿಗಳಿಗೆ ಮರಣದಂಡನೆಯನ್ನು ಕೂಡ ವಿಧಿಸಿದ್ದರು. ಎರಡನೆಯದು ಮದುವೆಗಳಲ್ಲಿ ವಧು ವರನ ಎಡಗಡೆ ಇರುತ್ತಾರೆ. ಏಕೆಂದರೆ ವಧುವಿನ ಮೇಲೆ ಯಾರಾದರೂ ಬೇರೆ ವ್ಯಕ್ತಿ ಅಟ್ಯಾಕ್ ಮಾಡಲು ಪ್ರಯತ್ನ ಮಾಡಿದರೆ ವರನಿಗೆ ಬಲ ಕೈಯಿಂದ ಕತ್ತಿಯನ್ನು ತೆಗೆದು ಎದುರಿಸಲು ಸಹಾಯವಾಗುತ್ತಿತ್ತು.ಅದು ಈಗ ಒಂದು ಆಚರಣೆ ಆಗಿ ನಡೆಯುತ್ತಿದೆ. ಮೂರನೆಯದು ಕ್ರಿ.ಪೂ.500ವರ್ಷಗಳ ಹಿಂದೆ ಈಜಿಪ್ಟ್ನಲ್ಲಿ ಪಿರಾಮಿಡ್ ಮಾಡಲಾಯಿತು. ಅದರ ನಂತರ ವೂಲಿ ಮೆಮಂತ್ ಸಂತತಿ ನಶಿಸಿ ಹೋಗುತ್ತದೆ.
ನಾಲ್ಕನೆಯದು 1666 ಸೆಪ್ಟೆಂಬರ್ 2ರಂದು ಲಂಡನ್ ನಲ್ಲಿ ಒಂದು ಭಯಂಕರ ಬೆಂಕಿ ಅವಘಡ ಸಂಭವಿಸುತ್ತದೆ. ನಗರದ 13000 ಮನೆಗಳು ಸುಟ್ಟು ಬೂದಿಯಾಗುತ್ತವೆ. ಆದರೆ 8 ಜನ ಸತ್ತಿದ್ದಾರೆ ಎಂಬ ಸುದ್ದಿ ಬರುತ್ತದೆ. ಐದನೆಯದು 19ನೇ ಶತಮಾನದಲ್ಲಿ ಒಬ್ಬ ವ್ಯಕ್ತಿ ಸತ್ತು ಹೋಗಿದ್ದಾನೆ ಎನ್ನುವುದನ್ನು ನಂಬಿ ಬದುಕಿದ್ದ ವ್ಯಕ್ತಿಯನ್ನು ಪೆಟ್ಟಿಗೆಯಲ್ಲಿ ಇಟ್ಟು ಮಣ್ಣಿನಲ್ಲಿ ಹೂಳುತ್ತಿದ್ದರು. ಆರನೆಯದು 19ನೇ ಶತಮಾನದಲ್ಲಿ ಲಂಡನ್ನಲ್ಲಿ ಒಬ್ಬ ವ್ಯಕ್ತಿ ಸತ್ತ ಎಂದರೆ ಆ ವ್ಯಕ್ತಿಗೆ ಅಲಂಕಾರ ಮಾಡಿ ಸಂಬಂಧಿಕರು ಫೋಟೋವನ್ನು ತೆಗೆಸಿಕೊಳ್ಳುತ್ತಿದ್ದರು. ಏಳನೆಯದು ಸಂಟಾಅನ್ನ ಎನ್ನುವವರು ಮೆಕ್ಸಿಕೋದ ರಾಜಕಾರಣಿ ಆಗಿದ್ದರು. 1836ರ ಯುದ್ಧದಲ್ಲಿ ತನ್ನ ಕಾಲನ್ನು ಕಳೆದುಕೊಂಡು ಸಿಟ್ಟು ಬಂದು ಎಲ್ಲರೂ ನನ್ನ ಕಾಲಿಗೆ ನಮಸ್ಕಾರ ಮಾಡಿ ಎಂದು ಹೇಳುತ್ತಾರೆ.
ಎಂಟನೆಯದು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಹಾಗೂ ಚಂದ್ರನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮೊದಲ ವ್ಯಕ್ತಿ. ಒಂಭತ್ತನೆಯದು ಚಾರ್ಲಿ ಚಾಪ್ಲಿನ್ ತುಂಬಾ ಜನಪ್ರಿಯ ಆದಮೇಲೆ ಒಂದು ಕಡೆ ಚಾರ್ಲಿ ಚಾಪ್ಲಿನ್ ವೇಷ ಭೂಷಣ ಮಾಡುವ ಸ್ಪರ್ಧೆ ನಡೆಸಲಾಗಿತ್ತು. ಆಗ ಇವರೂ ಕೂಡ ವೇಷ ಭೂಷಣ ಮಾಡಿಕೊಂಡು ಹೋದಾಗ ಇವರಿಗೆ 7ನೇ ಸ್ಥಾನ ಸಿಗುತ್ತದೆ. ಹತ್ತನೆಯದು ನಾವು ಬಳಸುವ ನಂಬರ್ ಗಳನ್ನು ಅರೇಬಿಯನ್ನರು ಕಂಡು ಹಿಡಿಯಲಿಲ್ಲ. ನಮ್ಮ ಭಾರತದ 6ನೇ ಶತಮಾನದ ಗಣಿತ ಶಾಸ್ತ್ರಜ್ಞರು ಆವಿಷ್ಕಾರ ಮಾಡಿದ್ದರು. ಹನ್ನೊಂದನೆಯದು ಏಷಿಯಂಟ್ ಗ್ರೇಸ್ ನಲ್ಲಿ ಹುಡುಗರು ಸೇಬುಹಣ್ಣು ಎಸೆಯುವ ಮೂಲಕ ಪ್ರಪೋಸ್ ಮಾಡುತ್ತಿದ್ದರು. ಹುಡುಗಿ ಹಣ್ಣನ್ನು ಎತ್ತಿಕೊಂಡರೆ ಒಪ್ಪಿಕೊಳ್ಳುತ್ತಾಳೆ ಎಂಬ ಅರ್ಥವಾಗಿತ್ತು.