ಎಷ್ಟು ಬಾರಿ ಕೆಲವೊಂದು ವಸ್ತುಗಳನ್ನು ನಮಗೆ ಬೇಡವಾದ ವಸ್ತು ತ್ಯಾಜ್ಯ ಎಂದು ಹೊರಗೆ ಬಿಸಾಡುತ್ತೇವೆ. ಆದರೆ ಅಂತಹ ವಸ್ತುಗಳಿಂದಲೂ ಸಹ ನಮಗೆ ಸಾಕಷ್ಟು ಪ್ರಯೋಜನಗಳು ಉಂಟಾಗುತ್ತವೆ. ಅಂಥ ವಸ್ತುಗಳಲ್ಲಿ ನಾವು ತಿಂದು ಒಗೆಯುವ ಶೇಂಗಾ ಸಿಪ್ಪೆ ಕೂಡ ಒಂದು. ಶೇಂಗಾ ಸಿಪ್ಪೆಯಿಂದ ಬೆಂಗಳೂರಿನ ವಿಜ್ಞಾನಿಗಳು ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಶೇಂಗಾ ಸಿಪ್ಪೆಯಿಂದ ಮಾಡಿರುವ ಆವಿಷ್ಕಾರದ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಶೇಂಗಾ ಸಿಪ್ಪೆಯ ಮೂಲಕ ಜಗತ್ತಿನ ಅತ್ಯಧಿಕ ಸ್ಮಾರ್ಟ್ ಸ್ಕ್ರೀನನ್ನು ಬೆಂಗಳೂರಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಬೇರೆ ಬೇರೆ ರೀತಿಯ ರಾಸಾಯನಿಕಗಳನ್ನು ಬಳಕೆ ಮಾಡುವುದರ ಬದಲು ಶೇಂಗಾ ಸಿಪ್ಪೆ ಬಳಕೆ ಮಾಡಿಕೊಂಡು ಹೊಸ ಡಿವೈಸ್ ಒಂದನ್ನು ಆವಿಷ್ಕಾರ ಮಾಡಿದ್ದಾರೆ. ಈ ಮೂಲಕ ಕನ್ನಡದ ವಿಜ್ಞಾನಿಗಳಿಂದ ವಿಶ್ವವೆ ಬೆರಗಾಗುವಂಥ ಸಾಧನೆಯನ್ನು ಮಾಡಲಾಗಿದೆ ಎಂದರು ತಪ್ಪಾಗಲಾರದು. ತ್ಯಾಜ್ಯವಾಗಿ ವ್ಯರ್ಥವಾಗುತ್ತಿದ್ದ ಶೇಂಗಾ ಸಿಪ್ಪೆಯಿಂದ ಈ ಒಂದು ಆವಿಷ್ಕಾರವನ್ನು ಮಾಡಿರುವುದು ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಇದು ಪ್ರಯೋಗ ನಡೆಸಿದ ಕೇಂದ್ರ ಸರ್ಕಾರದ ತಂತ್ರಜ್ಞಾನ ಮತ್ತು ವಿಜ್ಞಾನ ಇಲಾಖೆಯ ಸ್ವಾಯುಕ್ತ ಸಂಸ್ಥೆ ಇದಾಗಿದ್ದು ಪ್ರೊಫೆಸರ್ ಕೃಷ್ಣಪ್ರಸಾದ್ ನೇತೃತ್ವ ತಂಡದಿಂದ ಈ ಸಾಧನೆಯನ್ನು ಮಾಡಲಾಗಿದೆ.
ಶೇಂಗಾ ಸಿಪ್ಪೆ ಬಳಸಿಕೊಂಡು ತಯಾರಿಸಿದ್ದ ಸ್ಮಾರ್ಟ್ ಸ್ಕ್ರೀನ್ ಡಿವೈಸ್ ಬಗ್ಗೆ ಇದರ ತಯಾರಕರು ಆದಂತಹ ಪ್ರೊಫೆಸರ್ ಎಸ್ ಕೃಷ್ಣಪ್ರಸಾದ್ ಅವರು ಈ ರೀತಿಯಾಗಿ ಹೇಳಿದ್ದಾರೆ. ಕೇವಲ ಎರಡು ವಸ್ತುಗಳನ್ನು ಬಳಸಿಕೊಂಡು ನಾವು ಈ ಸ್ಮಾರ್ಟ್ ಸ್ಕ್ರೀನ್ ಡಿವೈಸ್ ಅನ್ನು ತಯಾರಿಸಬಹುದು. ಪಾಲಿಮರ್ ಮತ್ತು ಲಿಕೋ ಕ್ರಿಸ್ಟನ್ ಈ ಎರಡು ವಸ್ತುಗಳಿಗೆ ಮುಖ್ಯವಾಗಿ ಇರಬೇಕಾಗಿರುವುದು ವಸ್ತುಗಳ ವಕ್ರೀಭವನ ಸೂಚ್ಯಂಕ. ಎರಡು ವಸ್ತುಗಳು ಒಂದಕ್ಕೊಂದು ಪರಸ್ಪರ ಹೊಂದಿಕೊಂಡು ಇರಬೇಕು ಹಾಗೂ ಎರಡು ವಸ್ತುಗಳ ವಕ್ರೀಭವನ ಸೂಚ್ಯಂಕ ಬೇರೆ ಯಾಗಿರಬೇಕು. ಈ ಎರಡು ಪದಾರ್ಥಗಳನ್ನು ಬಳಸಿಕೊಂಡು ಸ್ಮಾರ್ಟ್ ಸ್ಕ್ರೀನ್ ಡಿವೈಸ್ ಅನ್ನು ತಯಾರಿಸಲಾಗುತ್ತದೆ. ಆದರೆ ಇಲ್ಲಿವರೆಗೂ ಬಳಸಿದ ಪಾಲಿಮಾರ್ ಇದು ಮಣ್ಣಿನಲ್ಲಿ ಸೇರಿ ಹೋಗುವ ವಸ್ತುವಾಗಿರದೆ ಇದುವರೆಗೂ ತಯಾರಿಸಲಾದ ಸ್ಮಾರ್ಟ್ ಸ್ಕ್ರೀನ್ ಗಳಲ್ಲಿ ಬಳಸಲಾದ ಪಾಲಿಮರ್ಗಳು ಪರಿಸರಸ್ನೇಹಿ ಆಗಿರಲಿಲ್ಲ. ಹಾಗಾಗಿ ಪರಿಸರ ಸ್ನೇಹಿಯಾದ ಮಣ್ಣಿನಲ್ಲಿ ಸುಲಭವಾಗುವಂತಹ ಶೇಂಗಾ ಬೀಜದ ಸಿಪ್ಪೆ ಯಿಂದ ಸ್ಮಾರ್ಟ್ ಸ್ಕ್ರೀನ್ ಡಿವೈಸ್ ಅನ್ನು ತಯಾರಿಸುವುದನ್ನು ಕಂಡುಹಿಡಿದಿದ್ದಾರೆ.
ಯಾವುದೊಂದು ಹೊಸ ಆವಿಷ್ಕಾರವನ್ನು ಮಾಡಬೇಕಾದರೆ ಈಗಾಗಲೇ ಮಾಡಿರುವ ಯಾವುದೇ ಒಂದು ಆವಿಷ್ಕಾರ ಅಥವಾ ಈಗ ತಯಾರಿಸುತ್ತಿರುವ ಆವಿಷ್ಕಾರ ಇವೆರಡರ ನಡುವೆ ಹೋಲಿಕೆ ಅಥವಾ ಬೆಲೆಗಳ ನಡುವಿನ ಸಾಮ್ಯತೆಯನ್ನು ನೋಡುವುದಾದರೆ ಸ್ಮಾರ್ಟ್ ಸ್ಕ್ರೀನ್ ಡಿವೈಸ್ ಇದಿನ್ನು ಸಂಪೂರ್ಣವಾಗದ ಹೊಸ ಆವಿಷ್ಕಾರ ಹಾಗಾಗಿ ಇದರ ಬೆಲೆಯನ್ನು ಈಗಲೇ ಸಂಪೂರ್ಣವಾಗಿ ನಿರ್ಧರಿಸುವುದು ಕಷ್ಟ ಎಂದು ಹೇಳುತ್ತಾರೆ ಪ್ರೊಫೆಸರ್ ಎಸ್ ಕೃಷ್ಣಪ್ರಸಾದ್ ಅವರು. ಆದರೂ ಈ ಸ್ಮಾರ್ಟ್ ಸ್ಕ್ರೀನ್ ತಯಾರಿಸುವುದು ಬೇಡವಾದ ವಸ್ತು , ತ್ಯಾಜ್ಯ ವಸ್ತು ಎಂದು ನಾವು ಎಸೆಯುವ ಶೇಂಗಾ ಸಿಪ್ಪೆಯಿಂದ ಆಗಿರುವುದರಿಂದ ಒಂದು ಬೆಲೆಯಲ್ಲಿಯೂ ಕಡಿಮೆ ಆಗಬಹುದು ಹಾಗೂ ಎರಡನೆಯದಾಗಿ ಪರಿಸರ ಸ್ನೇಹಿಯೂ ಆಗಿರುತ್ತದೆ. ಪರಿಸರ ಸ್ನೇಹಿಯಾಗಿ ಶೇಂಗಾ ಸಿಪ್ಪೆಯಿಂದ ಬಳಸಿಕೊಂಡು ಸ್ಮಾರ್ಟ್ ಸ್ಕ್ರೀನ್ ಡಿವೈಸ್ ತಯಾರಿಸಿದ ಪ್ರೊಫೆಸರ್ ಎಸ್ ಕೃಷ್ಣಪ್ರಸಾದ್ ಹಾಗೂ ಅವರ ತಂಡಕ್ಕೆ ಯಶಸ್ಸು ಸಿಗಲಿ ಎಂದು ಕನ್ನಡಿಗರೆಲ್ಲರೂ ಆಶಿಸೋಣ.