ಸುಂದರವಾದ ಹೆಣ್ಣು ಮಗುವನ್ನು ಜಗತ್ತಿಗೆ ಸ್ವಾಗತಿಸಿ, ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಆರ್‌ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್!
ಐಪಿಎಲ್ 13ನೇ ಆವೃತ್ತಿಯ ಟೂರ್ನಿ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಆರ್‌ಸಿಬಿ ಸ್ಟಾರ್ ಆಟಗಾರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕೇಪ್‌ಟೌನ್ , ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮತ್ತು ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಡಿವಿಲಿಯರ್ಸ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಈ ವಿಷಯ ಹಂಚಿಕೊಂಡು ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಎಬಿ ಡಿವಿಲಿಯರ್ಸ್ ದಂಪತಿಗೆ ಇದೇ ತಿಂಗಳು 11ರಂದು ಹೆಣ್ಣು ಮಗುವಿನ ಜನನವಾಗಿದ್ದು ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ಲೇ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲು ಎಬಿಡಿಗೆ ಅಬ್ರಹಾಂ ಡಿವಿಲಿಯರ್ಸ್ ಹಾಗೂ ಜಾನ್ ಡಿವಿಲಿಯರ್ಸ್ ಎನ್ನುವ ಗಂಡು ಮಕ್ಕಳಿದ್ದರು. ಇದೀಗ ಎಬಿಡಿ ಕುಟುಂಬ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಹೆಣ್ಣು ಮಗುವಿಗೆ ಯೆಂಟೆ ಡಿವಿಲಿಯರ್ಸ್ ಎಂದು ಹೆಸರಿಟ್ಟಿದ್ದಾರೆ.
ಈ ವಿಚಾರವಾಗಿ ಪತ್ನಿ ಮತ್ತು ಮಗುವಿನ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ವಿಲಿಯರ್ಸ್, ನವೆಂಬರ್ 11 ರಂದು ನಾವು ಸುಂದರವಾದ ಹೆಣ್ಣು ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಯೆಂಟೆ ಡಿವಿಲಿಯರ್ಸ್, ನೀನು ನಮ್ಮ ಮನೆಗೆ ಪರ್ಫೆಕ್ಟ್ ಅಡಿಷನ್. ನೀನು ಹುಟ್ಟಿದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಮಗುವಿನ ಹೆಸರನ್ನು ಯೆಂಟೆ ಡಿವಿಲಿಯರ್ಸ್ ಎಂದು ತಿಳಿಸಿದ್ದಾರೆ ಹಾಗೂ ನಮ್ಮ ಸಂತೋಷವನ್ನು ಬಣ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಎಬಿ ಡಿವಿಲಿಯರ್ಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ಬಾರಿ ಐಪಿಎಲ್ ನಡೆದಾಗ ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಕುಟುಂಬ ಸಮೇತ ಮೈದಾನಕ್ಕೆ ಬಂದು ಆರ್‌ಸಿಬಿ ತಂಡಕ್ಕೆ ಚೀಯರ್ ಮಾಡುತ್ತಿದ್ದರು. ಈ ಬಾರಿ ಡೇನಿಯಲ್ ತುಂಬು ಗರ್ಭಿಣಿಯಾದ ಕಾರಣ ಯುಎಇಗೆ ಬಂದಿರಲ್ಲ. ಈ ಹಿಂದೆ ಡೇನಿಯಲ್ ಹಾಕಿದ್ದ ಗರ್ಭಿಣಿಯ ಫೋಟೋವೊಂದಕ್ಕೆ ಕಮೆಂಟ್ ಮಾಡಿದ್ದ ಅನುಷ್ಕಾ ಶರ್ಮಾ ಒಳ್ಳೆಯ ಸುದ್ದಿ ನಿಮಗೆ ಶುಭಾಶಯ ಎಬಿಡಿ ಮತ್ತು ಡೇನಿಯಲ್ ಎಂದು ಕಮೆಂಟ್ ಮಾಡಿದ್ದರು.
2007ರಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಎಬಿಡಿ ಮತ್ತು ಡೇನಿಯಲ್ ಬಹುಕಾಲದ ಡೇಟಿಂಗ್ ಬಳಿಕ 2013 ಮಾಚ್ 30ರಂದು ಮದುವೆಯಾಗಿದ್ದರು.2015ರಲ್ಲಿ ಮೊದಲ ಮಗು ಅಬ್ರಹಂ ಡಿವಿಲಿಯರ್ಸ್ ಜನಿಸಿದರೆ, 2017ರಲ್ಲಿ ಜಾನ್ ಡಿವಿಲಿಯರ್ಸ್ ಎಬಿಡಿ ಕುಟುಂಬ ಕೂಡಿಕೊಂಡಿದ್ದರು. ಇದೀಗ ಯೆಂಟೆ ಸೇರ್ಪಡೆ ಎಬಿಡಿ ಕುಟುಂಬವನ್ನು ಮತ್ತಷ್ಟು ಖುಷಿಯಿಂದ ತೇಲುವಂತೆ ಮಾಡಿದೆ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಐಪಿಎಲ್-2020ಯಲ್ಲಿ 15 ಪಂದ್ಯಗಳನ್ನಾಡಿ ಎಬಿಡಿ ಐದು ಅರ್ಧಶತಕದ ನೆರವಿನಿಂದ 454 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಇದ್ದಾರೆ. ಇನ್ನು ಕುಟುಂಬದೊಟ್ಟಿಗೆ ಕಾಲಕಳೆಯುವ ಉದ್ದೇಶದಿಂದ 2020ನೇ ಸಾಲಿನ ಬಿಗ್ ಬ್ಯಾಶ್ ಟೂರ್ನಿಯಿಂದ ಎಬಿ ಡಿವಿಲಿಯರ್ಸ್ ಹಿಂದೆ ಸರಿದಿದ್ದಾರೆ.