ಕ್ರಿಕೆಟ್ ಮಾಂತ್ರಿಕ ಎಂದೇ ಹೇಳಲಾಗುವ ಕ್ರಿಕೆಟ್ ಪ್ರಪಂಚದಲ್ಲಿ ಬಹಳ ಫೇಮಸ್ ಆಗಿರುವ ಸಚಿನ್ ತೆಂಡೂಲ್ಕರ್ ಅವರ ಜೀವನ ಹಾಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಭಾರತದ ಟಾಪ್ ಮೋಸ್ಟ್ ಕ್ರಿಕೆಟಿಗ ಅಂದರೆ ಸಚಿನ್ ತೆಂಡೂಲ್ಕರ್. ಸಚಿನ್ ರಮೇಶ್ ತೆಂಡೂಲ್ಕರ್ ಅವರು 24 ಏಪ್ರಿಲ್ 1973 ರಲ್ಲಿ ಮುಂಬೈನಲ್ಲಿ ಜನಿಸಿದರು. ತಂದೆ ರಮೇಶ್ ತೆಂಡೂಲ್ಕರ್ ತಾಯಿ ರಜನಿ ತೆಂಡೂಲ್ಕರ್. ಇವರ ತಂದೆ ನೊವೆಲಿಸ್ಟ ಆಗಿದ್ದರು. ಸಚಿನ್ ತೆಂಡೂಲ್ಕರ್ ಅವರ ತಂದೆಯ ಎರಡನೇ ಹೆಂಡತಿಯ ಮಗನಾಗಿದ್ದಾರೆ. ಅವರು ಇಂಡಿಯನ್ ಟೀಮ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ್ದಾರೆ. ನಮ್ಮ ಇಂಡಿಯನ್ ಟೀಮ್ ನಲ್ಲಿ ಇಲ್ಲಿವರೆಗೂ ಅವರಷ್ಟು ಶತಕ ಯಾರೂ ಬಾರಿಸಿಲ್ಲ. ಸಚಿನ್ 24 ಮೇ 1995 ರಂದು ಅಂಜಲಿ ಎಂಬುವವರನ್ನು ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ಮಗಳು ಸಾರಾ ತೆಂಡೂಲ್ಕರ್ ಮತ್ತು ಮಗ ಅರ್ಜುನ್ ತೆಂಡೂಲ್ಕರ್.
ಸಾರಾ ತೆಂಡೂಲ್ಕರ್ ಅವರು ನೋಡಲು ಮುದ್ದಾಗಿ ಹಾಗೂ ಸುಂದರವಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೆ ಮಗಳು ಸಾರಾ ಎಂದರೆ ಬಹಳ ಪ್ರೀತಿ ಬಹಳಷ್ಟು ಇವೆಂಟ್ ಗಳಿಗೆ ಮಗಳೊಂದಿಗೆ ಸಚಿನ್ ಹೋಗುತ್ತಾರೆ. ಸಚಿನ್ ಅವರ ಮಗಳ ಸುಂದರವಾದ ಫೋಟೋಗಳು ಹಾಗೂ ಸಚಿನ್ ಅವರ ಫ್ಯಾಮಿಲಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಸಚಿನ್ ಅವರದು ಚಿಕ್ಕ ಕುಟುಂಬ ಸಂತೋಷದ ಕುಟುಂಬವಾಗಿದೆ. ಆಟದ ಮೈದಾನದಲ್ಲಿ ಎದುರಾಳಿಯು ಸಚಿನ್ ಅವರಿಗೆ ಎಷ್ಟೇ ಕೋಪ ಬರುವಂತೆ ಮಾಡಿದರು ಸಚಿನ್ ತೆಂಡೂಲ್ಕರ್ ಅವರು ತಾಳ್ಮೆಯಿಂದಲೇ ಬ್ಯಾಟಿಂಗ್ ಮೂಲಕ ಉತ್ತರ ಕೊಡುತ್ತಾರೆ. ಸಚಿನ್ ಅವರು ಅವರ ಕುಟುಂಬದವರೊಂದಿಗೆ ಸಂತೋಷವಾಗಿರಲಿ ಎಂದು ಆಶಿಸೋಣ.