ಕ್ರಿಕೆಟ್ ಪ್ರಪಂಚದಲ್ಲಿ ಬಹಳ ಫೇಮಸ್ ಆಗಿರುವ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಹಾಗೂ ಅವರ ಕ್ರಿಕೆಟ್ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭಾರತದಲ್ಲಿ ಹೆಚ್ಚಾಗಿ ನೋಡಲ್ಪಡುವ ಆಟವೆಂದರೆ ಅದು ಕ್ರಿಕೆಟ್. 1983 ರಲ್ಲಿ ಭಾರತ ವರ್ಲ್ಡ್ ಕಪ್ ಗೆಲ್ಲುತ್ತದೆ ಆದರೆ ನಂತರದ 20 ವರ್ಷಗಳ ಕಾಲ ವರ್ಲ್ಡ್ ಕಪ್ ಗೆಲ್ಲಲಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ 2011 ರಲ್ಲಿ ವರ್ಲ್ಡ್ ಕಪ್ ಗೆಲ್ಲಲಾಗುತ್ತದೆ. ಮಹೇಂದ್ರ ಸಿಂಗ್ ಧೋನಿ 1981 ಜುಲೈ 7 ರಂದು ಜಾರ್ಖಂಡನ ರಾಂಚಿಯಲ್ಲಿ ಜನಿಸಿದರು. ಇವರ ತಂದೆ ಪಾನ್ ಸಿಂಗ್ ಅವರು ಮೇಕಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಒಬ್ಬ ಅಕ್ಕ ಮತ್ತು ಅಣ್ಣನಿದ್ದಾನೆ. ಇವರು ಸಣ್ಣ ವಯಸ್ಸಿನಲ್ಲಿ ಫುಟ್ಬಾಲ್ ಆಟಗಾರರಾಗಿರುತ್ತಾರೆ. ಇವರ ಸ್ಪೋರ್ಟ್ಸ್ ಆಸಕ್ತಿ ನೋಡಿ ಇವರ ಕೋಚ್ ಕ್ರಿಕೆಟ್ ಆಡಲು ತಿಳಿಸುತ್ತಾರೆ. ನಂತರ ಕ್ರಿಕೆಟನಲ್ಲಿ ವಿಕೆಟ್ ಕೀಪರ್ ಆಗಿರುತ್ತಾರೆ. 10 ನೇ ಕ್ಲಾಸ್ ವರೆಗೆ ಕ್ರಿಕೆಟ್ ನ್ನು ಹೆಚ್ಚು ಆಡುವುದಿಲ್ಲ ನಂತರ ಹೆಚ್ಚು ಕ್ರಿಕೆಟ್ ಆಡುತ್ತಾರೆ. ಇವರಿಗೆ ರೇಲ್ವೆಯ ಟಿಟಿಎ ಉದ್ಯೋಗ ಸಿಗುತ್ತದೆ 2001-2003 ರವರೆಗೆ ಕೆಲಸ ಮಾಡಿದರು. ಈ ಕೆಲಸದಿಂದ ಕ್ರಿಕೆಟ್ ಕಡೆ ಹೆಚ್ಚು ಸಮಯ ಕೊಡಲು ಆಗುವುದಿಲ್ಲ ಇದರಿಂದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಕ್ರಿಕೆಟ್ ಆಡಲು ಆರಂಭಿಸುತ್ತಾರೆ. ನಂತರ ಅವರನ್ನು ನ್ಯಾಷನಲ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಕೀನ್ಯಾದಲ್ಲಿ ಹೆಚ್ಚು ರನ್ ಬಾರಿಸುತ್ತಾರೆ ಪಾಕಿಸ್ತಾನದ ವಿರುದ್ಧ ಆಡುತ್ತಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಆಡುತ್ತಾರೆ.

ರಾಹುಲ್ ದ್ರಾವಿಡ್ ಅವರು ಒನಡೆ ಮತ್ತು ಟೆಸ್ಟ್ ಮ್ಯಾಚ್ ಗಳ ಕ್ಯಾಪ್ಟನ್ಸಿಗೆ ರಾಜೀನಾಮೆ ಕೊಟ್ಟರು ಸಚಿನ್ ತೆಂಡೂಲ್ಕರ್ ಕ್ಯಾಪ್ಟನ್ ಆಗಲೂ ನಿರಾಕರಿಸಿದರು ಆಗ ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಪ್ಟನ್ ಆದರು. ಇವರ ಕ್ಯಾಪ್ಟನ್ಸಿಯಲ್ಲಿ ಐಸಿಸಿ ಟಿಟ್ವೆಂಟಿ ಕಪ್ ಗೆಲ್ಲುತ್ತದೆ. ಇವರಿಗೆ ಪ್ಲೇಯರ್ ಆಫ್ ದೀ ಇಯರ್ ಅವಾರ್ಡ್ ದೊರೆಯಿತು. ಇವರ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತು. ಐಸಿಸಿ ಮೂರು ಟ್ರೋಫಿ ಗೆದ್ದ ವಿಶ್ವದ ಏಕಮಾತ್ರ ಕ್ಯಾಪ್ಟನ್ ಆದರು. ಇವರು 2017 ರಲ್ಲಿ ಕ್ಯಾಪ್ಟನ್ಸಿಯನ್ನು ಬಿಟ್ಟು ಕೊಡುತ್ತಾರೆ . 2010 ಜುಲೈ 10 ರಂದು ಮಹೇಂದ್ರ ಸಿಂಗ್ ಧೋನಿ ಅವರು ಸಾಕ್ಷಿ ಎನ್ನುವವರೊಂದಿಗೆ ಮದುವೆಯಾಗುತ್ತಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ ಇವಳ ಹೆಸರು ಜೀವ. ಇವರ ಬಳಿ ಲಕ್ಸ್ಯುರಿ ಕಾರು, ಬೈಕ್ ಗಳಿವೆ. ಇವರ ಆಸ್ತಿಯ ಮೌಲ್ಯ 710 ಕೋಟಿ. ಇವರು ಸಂತೋಷವಾಗಿರಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!