ಇಂದಿನ ತಂತ್ರಜ್ಞಾನದಿಂದ ಜನರು ಕುಳಿತ್ತಲ್ಲಿಂದಲೇ ಏನೆನೆಲ್ಲ ಹೊಸ ಮಾರ್ಗಗಳಿಂದ ತಮ್ಮ ದೈನಂದಿನ ಚಟುವಟಿಕೆಗಳಿಗೆ ಉಪಯುಕ್ತವಾದ ಆಧಾರ್ ಕಾರ್ಡ್ ನ ನವೀಕರಣವನ್ನು ಅಂದರೆ ಮೊಬೈಲ್ ನಂಬರನ್ನು ಹೊಸದಾಗಿ ಸೇರಿಸುವುದು ಅಥವಾ ಹೀಗಾಗಲೇ ಸೇರಿಸಿರುವ ನಂಬರನ್ನು ಬದಲಾಯಿಸುವ ಕಾರ್ಯವನ್ನು ಹೇಗೆ ಮಾಡಿಕೊಂಡು ಸಮಯವನ್ನು ಉಳಿಸುವುದು ಮತ್ತು ಕಾರ್ಯ ಪೂರ್ಣಗೊಳಿಸುವುದು ಎಂಬ ಮಾಹಿತಿಯನ್ನು ಈ ಬರಹದಿಂದ ಪಡೆದುಕೊಳ್ಳೋಣ.
ಮೊದಲಿಗೆ ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರನ್ನು ಸೇರಿಸುವುದಕ್ಕೆ ಅಂತರ್ಜಾಲದ ಮುಖಪುಟವನ್ನು ತೆರೆದು ಅಲ್ಲಿ uida i.gov.in ಗೆ ಲಿಂಕ್ ಮಾಡಿದಾಗ ನಿಮಗೆ ಬೇಕಾಗುವ ಮುಖಪುಟ ತೆರೆದುಕೊಳ್ಳುತ್ತದೆ, ನಂತರ ನೀವು ಅಲ್ಲಿ ಕಾಣ ಸಿಗುವ ಪದಗಳ ( Add/update your mobile number in Adhar card) ಕೆಳಗೆ ಕಾಣುವ ಅಕ್ಷರದ ಮೇಲೆ ಕ್ಲಿಕ್ಕಿಸಿದಾಗ ನೀವು ಆಯ್ಕೆ ಮಾಡಬೇಕಾದ ಅಂಶ ರಾಜ್ಯ ( state) ನಂತರ ನಿಮ್ಮ ರಾಜ್ಯವನ್ನು, ಜಿಲ್ಲೆಯನ್ನು, ಉಪ ಜಿಲ್ಲೆಯನ್ನು ನಮೂದಿಸಿ, ನಂತರ ಅಲ್ಲಿ ತೋರಿಸುವ ಕ್ಯಾಪ್ಚರ್ ಹಾಕಿದ ನಂತರ ನಿಮಗೆ ಬೇಕಾಗಿರುವಂತಹ ಅನೇಕ ರೀತಿಯ ಆಯ್ಕೆಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ ಅದರಲ್ಲಿ ನಿಮ್ಮ ಸುತ್ತ ಮುತ್ತಲಿನ ಹತ್ತಿರದ ಕೇಂದ್ರವನ್ನು ಆರಿಸಿಕೊಳ್ಳಬಹುದು.
ಹಾಗೆಯೇ ನೀವು ಒಂದು ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿದ್ದೀರಾ ಆಗಿದ್ದಲ್ಲಿ, ನಿಮ್ಮ ಅಲ್ಲಿನ ಸ್ಥಳದ ವಿವರಗಳೊಂದಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ನವೀಕರಿಸಿಕೊಳ್ಳಿ. ನಂತರ ನಿಮ್ಮ ಮನೆಯಲ್ಲಿ ನವ ಶಿಶುವಿನ ಜನನವಾಗಿದ್ದಲ್ಲಿ ಅಂತಹ ಮಗುವಿನ ವಿವರಗಳೊಂದಿಗೆ ನಿಮ್ಮ ಹತ್ತಿರದ ಕೇಂದ್ರದಲ್ಲಿ ನೊಂದಾಯಿಸಬಹುದು. ” ಹೊಸದಾಗಿ ಹುಟ್ಟಿದ ಮಗುವಿನಿಂದ ಹಿರಿಯ ನಾಗರಿಕರವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಎಲ್ಲರು ತಪ್ಪದೆ ನಮೂದಿಸಿಕೊಳ್ಳುವುದು ಹಾಗೂ ಯಾವುದೇ ಇನ್ನಿತರ ಅಂಶಗಳ ನವೀಕರಣ ಅನಿವಾರ್ಯ” .
ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಈ ರೀತಿಯ ಕೆಲಸಗಳನ್ನು ಮಾಡುವುದರಿಂದ ಯಾವುದೇ ರೀತಿಯ ದುಂದು ವೆಚ್ಚ ಮಾಡುವಂತಿಲ್ಲ ಹಾಗೂ ನಮ್ಮ ಸುತ್ತ ಮುತ್ತಲಿನ ಕೇಂದ್ರಗಳಲ್ಲಿ ಯಾವ ದಿನದಲ್ಲಿ ಆಧಾರ್ ಕಾರ್ಡ್ ನವೀಕರಿಸುತ್ತಾರೆ ಎಂದು ಕುಳಿತ್ತಲ್ಲಿಂದಲೇ ತಿಳಿದುಕೊಂಡು ನಂತರ ಹೋಗಿ ಸರಿಪಡಿಸಬೇಕಾದ ವಿಷಯಗಳನ್ನು ಮುಗಿಸಿ ಸಮಯ ಉಳಿಸಬಹುದು.