ಭಗವಾನ್ ಬುದ್ಧ ಜಗತ್ತು ಕಂಡ ಅದ್ಭುತ ವ್ಯಕ್ತಿ. ಬುದ್ಧನ ಬಗ್ಗೆ ಹಿಂದೂ ಧರ್ಮದಲ್ಲಿ ಎಲ್ಲರಿಗೂ ತಿಳಿದಿದೆ. ಇವನ ತತ್ವಗಳು, ಬೋಧನೆಗಳನ್ನು ಮತ್ಯಾರೂ ಮಾಡಲು ಸಾಧ್ಯವಿಲ್ಲ. ಆದರೆ ಇವರ ಜನನ ಮತ್ತು ಬಾಲ್ಯಜೀವನದ ಬಗ್ಗೆ ಹೆಚ್ಚಾಗಿ ಇತಿಹಾಸದಲ್ಲಿ ಓದಿರುತ್ತಾರೆ. ಆದರೆ ಅವನ ಕೊನೆಯ ದಿನಗಳ ಬಗ್ಗೆ ತಿಳಿದಿರುವವರು ಬಹಳ ಕಡಿಮೆ. ಆದ್ದರಿಂದ ನಾವು ಇಲ್ಲಿ ಬುದ್ಧನ ಕೊನೆಯ ದಿನಗಳು ಮತ್ತು ಕೊನೆಯ ಮಾತುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬುದ್ಧನ 80ನೇ ವಯಸ್ಸಿನಲ್ಲಿ ವೈಶಾಖದ ಪೌರ್ಣಮಿಯ ದಿನ ಖಂಡ ಎಂಬ ವ್ಯಕ್ತಿ ಬುದ್ಧನನ್ನು ಭೇಟಿಯಾಗಲು ಬಂದು ಮೊದಲು ಆಶೀರ್ವಾದವನ್ನು ಪಡೆಯುತ್ತಾನೆ. ನಂತರ ” ಬುದ್ಧರೇ ನಾನೊಂದು ಊಟವನ್ನು ತಂದಿದ್ದೇನೆ. ನೀವು ಅದನ್ನು ಸ್ವೀಕಾರ ಮಾಡಬೇಕು” ಎಂದು ಆ ವ್ಯಕ್ತಿ ಹೇಳುತ್ತಾನೆ. ಬುದ್ಧ ಅದನ್ನು ಸ್ವೀಕರಿಸಿ “ಮಾರನೆಯ ದಿನವೂ ತಿನ್ನುತ್ತೇನೆ.” ಎಂದು ಹೇಳುತ್ತಾನೆ. ಶಿಷ್ಯರಿಗೆ ಊಟವನ್ನು ನಾಳೆಗೆ ಸರಿಯಾಗಿ ಇಡಲು ಹೇಳುತ್ತಾನೆ. ಆದರೆ ಮಾರನೆಯ ದಿನ ಊಟದಲ್ಲಿ ವಿಷ ಇರುವುದನ್ನು ತಿಳಿದು ಶಿಷ್ಯರಿಗೆ “ನೀವು ತಿನ್ನಬೇಡಿ ನನಗೊಂದೇ ಬಡಿಸಿ” ಎಂದು ಹೇಳುತ್ತಾನೆ.

ಹಾಗೆಯೇ ಶಿಷ್ಯರು ಬುದ್ಧನಿಗೆ ಬಡಿಸಿ ಉಳಿದದ್ದನ್ನು ಮಣ್ಣಲ್ಲಿ ಮುಚ್ಚುತ್ತಾರೆ. ಆಗ ಶಿಷ್ಯರಿಗೆ ವಿಷ ಇರುವುದು ತಿಳಿಯುತ್ತದೆ. ಕೆಲವರ ಪ್ರಕಾರ ಅದು ವಿಷಭರಿತ ಅಣಬೆಯಾಗಿತ್ತು. ಇನ್ನೂ ಕೆಲವರ ಪ್ರಕಾರ ಅವರೇ ನಿರ್ವಾಣ ಹೊಂದಿದರು. ನಂತರ ಶಿಷ್ಯರು ಬಂದು ” ನೀವು ಅದನ್ನು ಏಕೆ ತಿಂದಿರಿ. ತಿರಸ್ಕರಿಸಬೇಕಿತ್ತು” ಎಂದರು. ಆಗ ಬುದ್ಧ ನಗುತ್ತಾ ” ಖಂಡ ನನಗೆ ಊಟ ಕೊಡುವಾಗ ಅವನ ಕಣ್ಣು ಮತ್ತು ಮನಸ್ಸಿನಲ್ಲಿ ಯಾವ ರೀತಿಯ ಕಲ್ಮಶವೂ ಇರಲಿಲ್ಲ. ಆತ ಪ್ರೀತಿಯಿಂದ ನನಗಾಗಿ ತಂದಿದ್ದ. ಅದಕ್ಕಾಗಿ ನಾನು ಅದನ್ನು ಸ್ವೀಕಾರ ಮಾಡಿದೆ. ನನ್ನ ಜೀವನದ ರುಚಿಕರ ಊಟ ನೀನು ಕೊಟ್ಟಿದ್ದು ಎಂದು ಆ ಖಂಡನಿಗೆ ಹೇಳಿ ” ಎಂದ.

ಬುದ್ಧನು ಶಿಷ್ಯರನ್ನು ಕರೆದು “ನಿಮಗೆ ಏನಾದರೂ ಸಂದೇಹ ಇದ್ದರೆ ನನ್ನನ್ನು ಕೇಳಿ” ಎಂದ. ಆಗ ಯಾರೂ ಏನೂ ಕೇಳುವುದಿಲ್ಲ. ಆಗ ಆನಂದ “ತಮ್ಮ ಸಾವಿನ ನಂತರ ದೇಹವನ್ನು ಯಾವ ರೀತಿ ಗೌರವಿಸಬೇಕು” ಎಂದು ಪ್ರಶ್ನಿಸಿದ. ಆಗ ಬುದ್ಧ” ನಾನಿರದ ಎಂದರೆ ಚೈತನ್ಯ ಇರದ ನನ್ನ ದೇಹ ಹೇಗೆ ಇರಲು ಸಾಧ್ಯ. ಹಾಗಾಗಿ ಅದಕ್ಕೆ ಯಾವ ರೀತಿಯ ಗೌರವ ಕೊಟ್ಟರೂ ನನಗೆ ಸಲ್ಲುವುದಿಲ್ಲ. ನನ್ನ ದೇಹಕ್ಕೆ ಗೌರವ ಕೊಡುವುದನ್ನು ಬಿಟ್ಟು ನಿನ್ನೊಳಗೆ ಜ್ಞಾನವನ್ನು ತುಂಬುವ ಕೆಲಸ ಮಾಡು ನಿನ್ನನ್ನು ಖುಷಿಯಾಗಿ ಇಡುವ ದಾರಿಗೆ ಕೈ ಹಾಕು. ಯಾವುದೇ ಕಲ್ಮಶಗಳನ್ನು ಮನಸಿಗೆ ತುಂಬಿಕೊಳ್ಳದೇ ಎಲ್ಲರಿಗೂ ಪ್ರೀತಿಯನ್ನು ನೀಡು. ಆಸೆಯೇ ದುಃಖಕ್ಕೆ ಮೂಲ ಕಾರಣ.” ಎಂದು ಹೇಳಿಭೂಮಿಯ ಕೆಲಸ ಮುಗಿಸಿ ಹೊರಡುತ್ತಾರೆ. ಅಲ್ಲಿಗೆ ಈ ಜಗತ್ತು ಕಂಡ ಮಹಾನ್ ಚೇತನಗಳಲ್ಲಿ ಒಬ್ಬರು ಆದ ಜ್ಞಾನವೆಂಬ ದಾರಿ, ಜ್ಞಾನವೆಂಬ ಬೆಳಕು ಚೆಲ್ಲಿದ ಒಂದು ಮಹಾನ್ ಚೇತನ ಭೂ ಮಾತೆಯ ತಪಸ್ಸಿನ ಕೊನೆಯ ಕ್ಷಣ ಇದಾಗಿತ್ತು. ಕೊನೆಯ ಮಾತು ಇದಾಗಿತ್ತು ಯಾರನ್ನೂ ಕೂಡ ಹಿಂಬಾಲಿಸಬೇಡಿ. ಎಲ್ಲವನ್ನು ಪ್ರಶ್ನೆ ಮಾಡಿ. ಎಲ್ಲವನ್ನು ನಿಮ್ಮೊಳಗೆ ತಿಳಿದುಕೊಳ್ಳಿ. ಜ್ಞಾನದಿಂದ ನಿಮ್ಮ ದುಃಖವನ್ನು ಹೊರಗೆ ತನ್ನಿ. ನೀವು ಪರಿಪೂರ್ಣ ಆಗಿರಿ” ಎಂದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!