ಕೆಲವು ಪ್ರಶ್ನೆಗಳು ಮನುಷ್ಯನ ತಲೆಯನ್ನು ಕೊರೆಯುತ್ತವೆ. ಆದರೆ ಅದಕ್ಕೆ ಉತ್ತರಗಳು ಸಿಗುವುದಿಲ್ಲ. ಏಕೆಂದರೆ ಉತ್ತರಕ್ಕಾಗಿ ಹುಡುಕಾಟ ಮಾಡುವವರು ಬಹಳ ಕಡಿಮೆ. ಹಾಗಾಗಿ ನಾವು ಇಲ್ಲಿ ಕೆಲವು ಆಸಕ್ತಿಕರ ಪ್ರಶ್ನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇಬೇಕು. ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ? ಏಕೆಂದರೆ ಮನುಷ್ಯ ಸತ್ತ ನಂತರ ಪ್ರೋಟೋ ಬ್ಯಾಕ್ಟೀರಿಯಾಗಳು ಒಂದು ತರಹದ ಲಿಕ್ವಿಡ್ ತಯಾರಿ ಮಾಡುತ್ತವೆ. ಇವು ಮನುಷ್ಯನ ರಂಧ್ರಗಳ ಮೂಲಕ ಹೊರ ಬರುತ್ತವೆ. ಇದು ಕೆಟ್ಟ ಪರಿಮಳ ಹೊಂದಿರುತ್ತದೆ. ಹಾಗೆಯೇ ಇನ್ನೊಂದು ಕಾರಣವೆಂದರೆ ದೇಹದ ಉಸಿರು ನಿಂತ ಮೇಲೆ ಗಾಳಿಯಲ್ಲಿ ಇರುವ ಸೂಕ್ಷ್ಮ ಜೀವಿಗಳು ಮೂಗು ಅಥವಾ ಯಾವುದೇ ರಂಧ್ರದ ಮೂಲಕ ದೇಹದ ಒಳಗಡೆ ಹೋಗುವುದರಿಂದ ಶರೀರ ಬೇಗ ಕೆಡಲು ಸಾಧ್ಯವಾಗುತ್ತದೆ.
ದೇವಸ್ಥಾನದಲ್ಲಿ ಗಂಟೆಗಳನ್ನು ಏಕೆ ಇಟ್ಟಿರುತ್ತಾರೆ? ನಮ್ಮ ಹಿಂದೂ ಧರ್ಮದ ಆಚರಣೆಯ ಪ್ರಕಾರ ಗಂಟೆಗಳನ್ನು ದೇವಸ್ಥಾನದಲ್ಲಿ ಇಟ್ಟಿರುತ್ತಾರೆ. ಸ್ಕಂದ ಪುರಾಣದ ಪ್ರಕಾರ ದೇವಸ್ಥಾನದಲ್ಲಿ ಇರುವ ಗಂಟೆಗಳನ್ನು ಹೊಡೆದಾಗ ಮನುಷ್ಯರಲ್ಲಿರುವ ಪಾಪಗಳು ತೊಲಗುತ್ತವೆ. ಗಂಟೆಯನ್ನು ಹೊಡೆಯುವುದರಿಂದ ಅದರ ವೈಬ್ರೇಷನ್ ಗಾಳಿಯ ಪ್ರಮಾಣದಿಂದ ದೂರದವೆರೆಗೂ ಸಾಗಿ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ. ಇದರಿಂದ ನಮ್ಮ ಮೆದುಳಿನಲ್ಲಿ ಒಂದು ರೀತಿಯ ಪ್ರಶಾಂತತೆಯ ಭಾವ ಮೂಡುತ್ತದೆ. 7 ಸೆಕೆಂಡ್ ಬರುವ ಈ ಶಬ್ದ ನಮ್ಮ ದೇಹದ 7 ಶಕ್ತಿಗಳನ್ನು ಮುಟ್ಟುತ್ತದೆ.
ಎಕ್ಸರೆ ಹೇಗೆ ಕೆಲಸ ಮಾಡುತ್ತದೆ? 1895ರಲ್ಲಿ ಒಬ್ಬ ವಿಜ್ಞಾನಿ ಈ ಎಕ್ಸರೆಯನ್ನು ಕಂಡು ಹಿಡಿಯುತ್ತಾರೆ. ಎಕ್ಸರ್ ಒಂದು ವಿಧವಾದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಂಗ. ಇದು ನೋಡುವ ಲೈಟ್ ಗಿಂತ ಕಡಿಮೆ ತರಂಗ ಹೊಂದಿರುತ್ತದೆ. ಇವು ಕಡಿಮೆ ತರಂಗಾಂತರಗಳನ್ನು ಹೊಂದಿರುವುದರಿಂದ ದೇಹದ ಒಳಗಡೆ ಪ್ರವೇಶ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಲೈಟ್ ಕಿರಣಗಳು ಯಾವುದಾದರೂ ವಸ್ತು ಅಡ್ಡವಾದರೆ ಅಲ್ಲೇ ನಿಲ್ಲುತ್ತವೆ. ಆದರೆ ಎಕ್ಸರೆ ಕಿರಣಗಳು ವಸ್ತುವನ್ನು ದಾಟಿ ಮುಂದೆ ಹೋಗುತ್ತವೆ. ಮನುಷ್ಯನ ದೇಹ ಕಡಿಮೆ ಸಾಂದ್ರತೆ ಹೊಂದಿರುವುದರಿಂದ ಎಕ್ಸರೆ ಕಿರಣಗಳು ಕೆಲಸ ಮಾಡುತ್ತವೆ.
ಮನುಷ್ಯನನ್ನು ನುಂಗಿದ ಹಾವು ಹೇಗೆ ಜೀರ್ಣಿಸಿಕೊಳ್ಳುತ್ತದೆ?
ಅನಕೊಂಡ ಹಾವುಗಳು ತುಂಬಾ ದೊಡ್ಡದಾಗಿರುತ್ತವೆ. ಇವು ಮನುಷ್ಯ ಮತ್ತು ಪ್ರಾಣಿಗಳನ್ನು ತಿನ್ನುತ್ತವೆ. ಇವು ಮನುಷ್ಯನನ್ನು ಮೊದಲು ಬಿಗಿಯಾಗಿ ಹಿಡಿಯುತ್ತವೆ. ಆಗ ಮನುಷ್ಯನ ಮೂಳೆಗಳು ಮುರಿದು ಹೋಗುತ್ತವೆ. ಮೂಲೆ ಮುರಿದ ನಂತರ ರಕ್ತ ಸಂಚಾರ ನಿಂತು ಸ್ಥಳದಲ್ಲೇ ಸತ್ತು ಹೋಗುತ್ತಾರೆ. ಜಿಂಕೆ ಅಥವಾ ಇತರ ಪ್ರಾಣಿಗಳನ್ನು ನುಂಗಿದರೆ ಜೀರ್ಣ ಆಗಲು ಒಂದು ವಾರ ಬೇಕು. ಅದೇ ಮನುಷ್ಯನನ್ನು ನುಂಗಿದರೆ ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಇದು ಒಂದು ರೀತಿಯ ವಿಷವನ್ನು ಹೊಂದಿರುತ್ತದೆ. ಇದರಿಂದ ಮನುಷ್ಯರು ಅಥವಾ ಪ್ರಾಣಿಗಳು ಬೇಗ ಪ್ರಜ್ಞೆ ತಪ್ಪುತ್ತವೆ.