RCB ತಂಡದ ನಾಯಕತ್ವದಿಂದ ವಿರಾಟ್ ಕೋಹ್ಲಿ ಅವರನ್ನು ತೆಗೆದುಹಾಕಿ ಎಂದು ಹೇಳಿದ ಗೌತಮ್ ಗಂಭೀರ್ ಅವರಿಗೆ ವೀರೇಂದ್ರ ಸೆಹ್ವಾಗ್ ಅವರು ಯಾವರೀತಿ ಉತ್ತರ ನೀಡಿದ್ದಾರೆ ಎನ್ನುವುದರ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಸಲದ ಐಪಿಎಲ್ ನಲ್ಲಿ ಭಾರತೀಯ ಪ್ರತಿಭೆಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು , ಇದೀಗ ಹೈದ್ರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ತಂಡದ ವೇಗಿ ಭಾರತೀಯ ಪ್ರತಿಭೆ ಟಿ ನಟರಾಜನ್ ಅವರ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೈದ್ರಾಬಾದ್ ಪರ ಬೌಲಿಂಗ್ ಮಾಡಿರುವ ಟಿ ನಟರಾಜನ್ ಸಧ್ಯ ಐಪಿಎಲ್ ನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅಂತಲೇ ಹೇಳಬಹುದು. ಇವರ ಬಗ್ಗೆ ಡೇವಿಡ್ ವಾರ್ನರ್ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದು , ಆ ಆವೃತ್ತಿಯ ಅನ್ವೇಷಣೆ ಆಗಿದ್ದಾರೆ. ನಟರಾಜನ್ ಈ ಬಾರಿ ನೂರಕ್ಕೂ ಹೆಚ್ಚು ಯಾರ್ಕರ್ ಗಳನ್ನು ಎಸೆದು ಯಾರ್ಕರ್ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಸಲುವಾಗಿ ಬಿಸಿಸಿಐ ಬಾಗಿಲು ತಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಐಪಿಎಲ್ ೨೦೨೦ ರಲ್ಲಿ RCB ಟೀಮ್ ನಿಂದ ಹೊರ ಬಂದ ಮೇಲೆ RCB ಟೀಮ್ ನ ಪ್ಲಸ್ ಮತ್ತು ಮೈನಸ್ ವಿಚಾರಗಳ ಕುರಿತಾಗಿ ಮಾತನಾಡುತ್ತಿದ್ದಾರೆ.

ಇದಾಗಲೇ ವಿರಾಟ್ ಕೋಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು , ಕೆಲವರು ವಿರಾಟ್ ಕೋಹ್ಲಿ ನಾಯಕನಾಗಿ ಮುಂದುವರಿಯಬಾರದು ಎಂದರೆ ಇನ್ನು ಕೆಲವರು ವಿರಾಟ್ ಜೊತೆಗೆ ಉತ್ತಮ ಗುಣಮಟ್ಟದ ಆಟಗಾರರು ಇರಬೇಕು ಎಂದು ಮ್ಯಾನೇಜ್ಮೆಂಟ್ ಗೆ ಸಲಹೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಲೇಜೇಂಡರಿ ಆಟಗಾರ ಸುನೀಲ್ ಗವಾಸ್ಕರ್ ಅವರು RCB ತಂಡಕ್ಕೆ ಒಂದು ಸಲಹೆಯನ್ನು ನೀಡಿದ್ದಾರೆ. RCB ತಂಡವು ಬ್ಯಾಟಿಂಗ್ ಲೈನ್ ಅಫ್ ನಲ್ಲಿ ಎಡವುತ್ತಾ ಇದ್ದು , ಬೆಸ್ಟ್ ಫಿನಿಶರ್ ಯಾರೂ ಎನ್ನುವುದರ ಕುರಿತು ಚರ್ಚೆ ಆಗಿತ್ತು. ಇದರ ಕುರಿತಾಗಿ ಗವಾಸ್ಕರ್ ಸಲಹೆ ನೀಡಿದ್ದು ಬೆಸ್ಟ್ ಫಿನಿಶರ್ ಯಾರೂ ಎನ್ನುವುದನ್ನು ಸೂಚಿಸಿದ್ದಾರೆ. ಸುನೀಲ್ ಗವಾಸ್ಕರ್ ಅವರ ಪ್ರಕಾರ RCB ತಂಡದಲ್ಲಿ ಬೆಸ್ಟ್ ಫಿನಿಶರ್ ಅಂದರೆ ಅದು ಶಿವಂ ದುಬೇ ಅವರಿಗೆ ತಂಡದಲ್ಲಿ ಸರಿಯಾದ ಸ್ಥಾನ ನೀಡುವ ಬಗ್ಗೆ ಯೋಚಿಸಬೇಕು. ದುಬೆ ಲೈನ್ ಅಪ್ ನಲ್ಲಿ ಆಟ ಆಡುತ್ತಾ ಇದ್ದು , ಅವರಿಗೆ ಸರಿಯಾಗಿ ಒಂದು ಕ್ರಮಾಂಕದಲ್ಲಿ ಆಟ ಆಡಲು ಅವಕಾಶ ಕೊಡಬೇಕು , ಬಿಗ್ ಹಿಟ್ ಗಳನ್ನು ಆಡಲು ಹೇಳಬೇಕು. ಶಿವಂ ದುಬೆ ಗೊಂದಲದಲ್ಲಿದ್ದು ಅವರನ್ನು ಐದನೇ ಕ್ರಮಾಂಕದಲ್ಲಿ ಕಳುಹಿಸಿ ಬಿಗ್ ಹಿಟ್ಟರ್ ಆಗಿ ಮಾಡಬೇಕು ಹೀಗೆ ಮಾಡುವುದರಿಂದ ಕೊಹ್ಲಿ ಮತ್ತು ABD ಇವರ ಮೇಲೆ ಇರುವ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ. ಮುಂದಿನ ಸೀಸನ್ ನಲ್ಲಿ ದುಬೆ ಅವರನ್ನು ಫಿನಿಶರ್ ಆಗಿ ತಂಡ ಬಳಸಿಕೊಳ್ಳಬೇಕು. ಅವರ ಮೇಲೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗವನ್ನು ಮಾಡಬಾರದು ಒಂದೇ ಕ್ರಮಾಂಕದಲ್ಲಿ ಆಡಿಸಿ ರನ್ ಗಳಿಸಲು ಅವಕಾಶ ಮಾಡಿಕೊಡಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ಮುಂದಿನ ಸೀಸನ್ ನಲ್ಲಿ ದುಬೆ RCB ಟೀಮ್ ಪಾಲಿನ ಉತ್ತಮ ಫಿನಿಶರ್ ಆಗಲಿದ್ದಾರೆ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ವಿರಾಟ್ ಕೋಹ್ಲಿ ಅವರನ್ನು RCB ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಗೌತಮ್ ಗಂಭೀರ್ ಅವರು ನೀಡಿದ ಹೇಳಿಕೆಗೆ ವಿರಾಟ್ ಕೋಹ್ಲಿ ಪರವಾಗಿ ಮಾತನಾಡಿದ ವೀರೇಂದ್ರ ಸೆಹ್ವಾಗ್ ತಂಡ ಉತ್ತಮವಾಗಿ ಇದ್ದರೆ ನಾಯಕ ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ವಿರಾಟ್ ಕೋಹ್ಲಿ ಭಾರತ ತಂಡವನ್ನು ಮುನ್ನಡೆಸಿ ಅನೇಕ ಗೆಲುವುಗಳನ್ನು ಪಡೆದಿದ್ದಾರೆ. ಅವರು ಟೆಸ್ಟ್, ಟಿ ಟ್ವೆಂಟಿ , ಏಕದಿನ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ RCB ಟೀಮ್ ನಾಯಕನಾಗಿ ಅವರು ವಿಫಲರಾಗಿದ್ದಾರೆ ಇದಕ್ಕೆ ಕಾರಣ ಅವರ ಟೀಮ್ ಉತ್ತಮ ಪ್ರದರ್ಶನವನ್ನು ನೀಡುತ್ತಾ ಇಲ್ಲ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!