ಗೌತಮಬುದ್ಧನನ್ನು ‘ಏಷ್ಯಾದ ಬೆಳಕು’ ಎಂದು ಕರೆಯಲಾಗುತ್ತದೆ. ಇವನ ಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ತನ್ನ ಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಕರ್ಮದ ಬಗ್ಗೆ ಗೌತಮ ಬುದ್ಧ ನೀಡಿದ ಸಂದೇಶವನ್ನು ನಾವು ಇಲ್ಲಿ ತಿಳಿಯೋಣ.
ಒಂದು ದಿನ ಗೌತಮ ಬುದ್ಧನಿಗೆ ಅವನ ಶಿಷ್ಯ ಕರ್ಮ ಎಂದರೆ ಏನು ಎಂದು ಕೇಳಿದನು. ಆಗ ಬುದ್ಧನು “ಕರ್ಮದ ಬಗ್ಗೆ ತಿಳಿದುಕೊಳ್ಳಲು ನಾನು ಒಂದು ಕಥೆಯನ್ನು ಹೇಳುತ್ತೇನೆ. ಎಂದನು. ಬುಲನ್ ನಗರದ ರಾಜ ಒಂದು ದಿನ ಕುದುರೆಯನ್ನು ಏರಿ ತನ್ನ ರಾಜ್ಯವನ್ನು ನೋಡಲು ಹೊರಟನು. ಪೂರ್ತಿ ರಾಜ್ಯವನ್ನು ನೋಡಿದ ಮೇಲೆ ರಾಜ ಒಂದು ಅಂಗಡಿಯ ಮುಂದೆ ಬಂದು ನಿಂತು ಮಂತ್ರಿಯ ಹತ್ತಿರ ಮಂತ್ರಿಗಳೇ ನನಗೇಕೋ ಈ ಅಂಗಡಿಯವನಿಗೆ ಮರಣದಂಡನೆ ವಿಧಿಸಬೇಕು ಎನಿಸುತ್ತಿದೆ ಎಂದನು. ಮಂತ್ರಿ ಕಾರಣ ಕೇಳುವಷ್ಟರಲ್ಲಿ ರಾಜ ಮುಂದೆ ಹೋಗಿದ್ದನು. ಮರುದಿನ ಮಂತ್ರಿಯು ಮಾರುವೇಶದಲ್ಲಿ ಆ ಅಂಗಡಿಗೆ ಬಂದಾಗ ಅಂಗಡಿಯವನು ಚಂದನ ಮರದ ಕಟ್ಟಿಗೆಗಳನ್ನು ಮಾರುತ್ತಿದ್ದನು.
ಆಗ ಮಂತ್ರಿ ಅಂಗಡಿಯವನ ಬಳಿ ಏನಪ್ಪಾ ವ್ಯಾಪಾರ ಹೇಗೆ ನಡೆಯುತ್ತಿದೆ? ಎಂದು ಕೇಳಿದಾಗ ಅಂಗಡಿಯವನು ಏನು ಹೇಳಲಿ ಎಲ್ಲರೂ ಬರುತ್ತಾರೆ. ಚಂದನದ ತುಂಡಿನ ಪರಿಮಳ ನೋಡುತ್ತಾರೆ. ಆದರೆ ಖರೀದಿಸುವುದಿಲ್ಲ. ನಾನು ಯಾವಾಗ ರಾಜ ಸಾ’ಯುತ್ತಾನೆ ಎಂದು ಕಾಯುತ್ತಿದ್ದೇನೆ. ಆಗ ನನಗೆ ಇವೆಲ್ಲ ಮಾರಾಟವಾಗುತ್ತದೆ ಎಂದ. ಆಗ ಮಂತ್ರಿಯು ಕೆಲವು ಕಟ್ಟಿಗೆಗಳನ್ನು ಖರೀದಿಸಿದಾಗ ಅಂಗಡಿಯವನಿಗೆ ಖುಷಿಯಾಗುತ್ತದೆ. ಮರುದಿನ ಮಂತ್ರಿಯು ರಾಜನಲ್ಲಿ ಹೋಗಿ ಅಂಗಡಿಯವನು ನಿಮಗೆ ಕೊಡುಗೆ ಕೊಟ್ಟಿದ್ದಾನೆ ಎಂದು ಹೇಳಿ ಕಟ್ಟಿಗೆಯನ್ನು ಕೊಟ್ಟ. ಆಗ ರಾಜ ಖುಷಿಯಾಗಿ ಚಂದನದ ಪರಿಮಳವನ್ನು ತೆಗೆದುಕೊಂಡನು. ಅಂಗಡಿಯವನಿಗೆ ಒಂದು ಚೀಲ ಚಿನ್ನದ ನಾಣ್ಯವನ್ನು ಕೊಡಲು ಆಜ್ಞೆ ಮಾಡಿದನು.
ಆಗ ಮಂತ್ರಿ ಮಾರುವೇಶದಲ್ಲಿ ಹೋಗಿ ಅಂಗಡಿಯವನಿಗೆ ನಾಣ್ಯದ ಚೀಲವನ್ನು ಕೊಟ್ಟಾಗ ಅಂಗಡಿಯವನಿಗೆ ಸಂತೋಷವಾಗಿ ರಾಜನ ಬಗ್ಗೆ ಮಾಡಿದ ಕೆಟ್ಟ ಆಲೋಚನೆಗಾಗಿ ಪ’ಶ್ಚಾತ್ತಾಪಪಟ್ಟನು. ಈ ಕಥೆ ಮುಗಿಸಿದ ನಂತರ ಬುದ್ಧನು ಅವರವರ ವಿಚಾರಗಳೇ ಕರ್ಮವಾಗಿದೆ. ಯೋಚನೆಯ ಮೇಲೆ ನಿಯಂತ್ರಣ ಮಾಡುವುದನ್ನು ಕಲಿತರೆ ಆಗ ಒಬ್ಬ ಮಹಾನ್ ವ್ಯಕ್ತಿ ಆಗಲು ಸಾಧ್ಯ. ಇನ್ನೂ ಒಳ್ಳೆಯ ಆಲೋಚನೆ ಮಾಡಲು ಸಾಧ್ಯ ಇದು ಶಿಷ್ಯರ ಪ್ರಶ್ನೆಗೆ ಬುದ್ಧನ ಉತ್ತರವಾಗಿದೆ.