ಚೇಳು ಇದು ಬಹಳ ವಿ’ಷಕಾರಿ. ಇದು ಮನುಷ್ಯನನ್ನು ಕ’ಚ್ಚಿದರೆ ಮನುಷ್ಯ ಸಾ’ಯುವ ಸಂಭವವೂ ಇದೆ. ಆದ್ದರಿಂದ ಚೇಳನ್ನು ಕಂಡಲ್ಲಿ ಜನರು ಹೊಡೆದು ಸಾ’ಯಿಸುತ್ತಾರೆ. ಚೇಳು ಕ’ಚ್ಚಿದಾಗ ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚೇಳು ಕಚ್ಚಿದಾಗ ವಿ’ಷ ಹೆಚ್ಚಾದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಒಂದು ವೇಳೆ ವಿಷದ ತೀವ್ರತೆ ಹೆಚ್ಚಾಗಿ ಇದ್ದರೆ ಚೇಳು ಕಚ್ಚಿದಾಗ ಜನರು ಸತ್ತೇ ಹೋಗುತ್ತಾರೆ. ಈ ಅಪಾಯವನ್ನು ತಡೆಯಬೇಕಾದರೆ ಕೆಲವು ನೈಸರ್ಗಿಕ ನಿಯಮಗಳನ್ನು ಅನುಸರಿಸಬೇಕು. ಮೈಲುತುತ್ತವನ್ನು ಅಂಗಡಿಯಿಂದ ತೆಗೆದುಕೊಂಡುಬಂದು ಸುಟ್ಟ ಭಸ್ಮವನ್ನು ತಯಾರಿಸಬೇಕು. ಇದರಿಂದ ಚೇಳಿನ ವಿಷವು ಹೊರಬರುತ್ತದೆ. ಮೈಲುತುತ್ತ ಹಾಗೂ ಸ್ಫಟಿಕವನ್ನು ಸೇರಿಸಿ ಮೇಣದ ಜೊತೆ ಬೆರೆಸಿ ಚೇಳು ಕಚ್ಚಿದ ಭಾಗದಲ್ಲಿ ಹಚ್ಚಬೇಕು. ಇದೂ ಸಹ ಚೇಳಿನ ವಿಷವನ್ನು ಆದಷ್ಟು ಬೇಗ ಕಡಿಮೆ ಮಾಡುತ್ತದೆ.
ಈರುಳ್ಳಿ ರಸದಲ್ಲಿ ಒಂದು ಹರಳು ಉಪ್ಪನ್ನು ಸೇರಿಸಿ ಚೇಳು ಕಚ್ಚಿದ ಭಾಗಕ್ಕೆ ಹಚ್ಚಬೇಕು. ಈರುಳ್ಳಿಯನ್ನು ಕತ್ತರಿಸಿ ಅದನ್ನು ಚೇಳು ಕಚ್ಚಿದ ಭಾಗಕ್ಕೆ ಹಚ್ಚಲೂಬಹುದು. ಇದು ಚೇಳಿನ ವಿಷವನ್ನು ಕಡಿಮೆ ಮಾಡಿ ಜೀವಕ್ಕೆ ಅಪಾಯ ಆಗದಂತೆ ನೋಡಿಕೊಳ್ಳುತ್ತದೆ. ಉತ್ತರಾಣಿ ಸೊಪ್ಪನ್ನು ನೀರು ಸೇರಿಸಿ ಚೆನ್ನಾಗಿ ಜಜ್ಜಿ ಚೇಳು ಕಚ್ಚಿದ ಜಾಗಕ್ಕೆ ಹಚ್ಚಬೇಕು. ಹುಣಸೇಹಣ್ಣಿನ ಬೀಜವನ್ನು ಎರಡು ಭಾಗವಾಗಿ ಮಾಡಿ ಅದನ್ನು ಕಲ್ಲಿನ ಮೇಲೆ ಉಜ್ಜಿ ಬಿಸಿಯಾದ ಮೇಲೆ ಚೇಳು ಕಚ್ಚಿದ ಜಾಗಕ್ಕೆ ಇಡಬೇಕು. ಈ ರೀತಿ ಮಾಡಿ ನಂತರ ವೈದ್ಯರನ್ನು ಭೇಟಿ ಮಾಡಬೇಕು.