ಒಬ್ಬ ವ್ಯಕ್ತಿಯ ಜೀವನ, ಅವನ ಸ್ವಭಾವ ತಿಳಿಯಬೇಕಾದರೆ ಅವನು ಹುಟ್ಟಿದ ದಿನಾಂಕದ ಜೊತೆಗೆ ಆತನ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎನ್ನುವುದು ಮುಖ್ಯ. ಮ ಅಥವಾ M ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವ ಹಾಗೂ ಅವರ ಲವ್ ಲೈಪ್ ಹೇಗಿರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಮ ಅಕ್ಷರದ ಹೆಸರುಳ್ಳ ವ್ಯಕ್ತಿಗಳು ಸ್ಪುರದ್ರೂಪಿಗಳಾಗಿರುತ್ತಾರೆ. ನೋಡಲು ಇವರು ಆಕರ್ಷಕರಾಗಿ, ಸುಂದರವಾಗಿ ಕಾಣುತ್ತಾರೆ. ಇವರ ವ್ಯಕ್ತಿತ್ವವು ಆಕರ್ಷಣೀಯ ಹಾಗೂ ಸ್ನೇಹಪರವಾಗಿ ಇರುತ್ತದೆ. ಯಾರಾದರೂ ಇವರನ್ನು ಹಚ್ಚಿಕೊಂಡರೆ ಅವರನ್ನು ನಡು ನೀರಿನಲ್ಲಿ ಕೈ ಬಿಡುವ ವ್ಯಕ್ತಿತ್ವ ಇವರದಲ್ಲ. ಇವರು ತಮ್ಮ ಪ್ರೀತಿಯನ್ನು ಹೆಚ್ಚು ಯಾರ ಮುಂದೆಯೂ ತೋರಿಸುವುದಿಲ್ಲ ಆದರೆ ಇವರು ತಾವು ಪ್ರೀತಿಸುವ ವ್ಯಕ್ತಿಯನ್ನು ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ. ಇವರಿಗೆ ಹೆಚ್ಚು ಸ್ನೇಹಿತರಿದ್ದು ಸ್ನೇಹಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಸ್ನೇಹಿತರಿಗೆ ಪ್ರಾಣ ಬೇಕಾದರೂ ಕೊಡುವಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಇವರು ಇಷ್ಟಪಡುತ್ತಾರೆ.
ಇವರು ತಮ್ಮ ಸಂಗಾತಿಯ ಬಳಿ ಎಲ್ಲ ವಿಷಯವನ್ನು ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ ಅಲ್ಲದೇ ಸಂಗಾತಿಯನ್ನು ಹೆಚ್ಚು ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದ್ದರಿಂದ ಇವರ ಸಂಸಾರ ಜೀವನ ಸುಖವಾಗಿರುತ್ತದೆ. ಇವರು ಸಂಗಾತಿಯ ಪೂರ್ಣ ಸಹಕಾರದಿಂದ ಉನ್ನತ ಮಟ್ಟಕ್ಕೆ ಏರುತ್ತಾರೆ. ಇವರಲ್ಲಿ ಹೆಚ್ಚು ಹಠ, ಛಲ ಇದ್ದು ತಾವು ಅಂದುಕೊಂಡಿರುವುದನ್ನು ಸಾಧಿಸಿಯೇ ತೀರುತ್ತಾರೆ ಇವರ ಮೇಲೆ ಇವರಿಗೆ ನಂಬಿಕೆ ಇರುತ್ತದೆ. ಇವರು ಪ್ರೀತಿ ವಿಶ್ವಾಸದಿಂದ ಎಲ್ಲರನ್ನು ಗೆದ್ದು ಹೆಚ್ಚು ಸಂತೋಷದಿಂದ ಜೀವನ ನಡೆಸುತ್ತಾರೆ. ಇವರು ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಹಾಗೆಯೇ ಎಲ್ಲರೊಂದಿಗೂ ನಗು ನಗುತ್ತಿರುತ್ತಾರೆ. ಈ ಮಾಹಿತಿಯನ್ನು M ಅಕ್ಷರದ ಹೆಸರು ಹೊಂದಿರುವವರಿಗೆ ತಿಳಿಸಿ.