ಶಿವನಾಗದ ಬೇರು ಎಂದು ಇರುತ್ತದೆ. ಇದನ್ನು ಕಿತ್ತ ನಂತರ ಸುಮಾರು15 ದಿನಗಳ ಕಾಲ ಸಾಯುವವರೆಗೂ ಒದ್ದಾಡುತ್ತಿರುತ್ತದೆ. ಈ ಬೇರನ್ನು ದಾಟಿದರೆ ನೆನಪಿನ ಶಕ್ತಿ ಮರೆತು ಹೋಗುತ್ತದೆ. ಇದನ್ನು ಹಳ್ಳಿ ಕಡೆ ದಾಟುಬಳ್ಳಿ ಎಂದು ಕರೆಯಲಾಗುತ್ತದೆ ಎಂಬ ಸುದ್ದಿ ಸತ್ಯವೋ ಸುಳ್ಳೋ?. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನುಷ್ಯ ಈ ಬಳ್ಳಿಯನ್ನು ದಾಟಿದರೆ ತಾನು ಬಂದ ದಾರಿಯನ್ನು ಕೂಡ ಮರೆಯುತ್ತಾನೆ. ಇದರ ಬಗ್ಗೆ ಫೇಸ್ಬುಕ್ ನಲ್ಲಿ ಒಬ್ಬರು ಹಾಕಿದ್ದರು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಹರಿದಾಡುತ್ತಿದೆ. ಇದನ್ನು ತಿರುಕನಬಳ್ಳಿ ಎಂದು ಕರೆಯುತ್ತಾರೆ. ಯಾವ ವ್ಯಕ್ತಿ ಇದನ್ನು ದಾಟುತ್ತಾನೋ ಅವನು ತಲೆ ತಿರುಗಿ ದಾರಿ ಮರೆಯುತ್ತಾನೆ ಎಂಬ ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದರ ಬಗ್ಗೆ ಸುವರ್ಣ ನ್ಯೂಸ್ ಅವರು ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.ಅದೇನೆಂದರೆ ಇದು ಬಳ್ಳಿ ಅಲ್ಲ. ಕಿತ್ತ 15ದಿನಗಳ ಕಾಲ ಯಾವ ಬಳ್ಳಿಯೂ ಬದುಕುವುದಿಲ್ಲ.ವಿಡಿಯೋ ಕೃಪೆ ಹುಲಿಕಲ್ ನಟರಾಜ್
ಇದು ನೆಮೆಟೋರ್ ಜಾತಿಗೆ ಸೇರಿದ ಹುಳು ಆಗಿದೆ. ಇದು18 ರಿಂದ 20 ಸೆಂಟಿಮೀಟರ್ ಉದ್ದ ಇರುತ್ತದೆ. ಇವು ಹೆಚ್ಚಾಗಿ ಸಿಹಿನೀರು ಮತ್ತು ಉಪ್ಪುನೀರಿನಲ್ಲಿ ವಾಸಿಸುತ್ತವೆ. ಮಲೆನಾಡಿನ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಕುದುರೆಯ ಕುರ್ಚಿ ಎಂತಲೂ ಕರೆಯುತ್ತಾರೆ. ಇವು ಮಾನಸಿಕವಾಗಿ ಮನುಷ್ಯನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಹೊಂದುವುದಿಲ್ಲ. ಇವುಗಳು ಗಂಟು ಗಂಟಾಗಿ ಇರುವುದರಿಂದ ಗಂಟುಹುಳು ಎಂದು ಕೂಡ ಕರೆಯುತ್ತಾರೆ. ಇದರ ಗಂಟನ್ನು ಬಿಚ್ಚುವುದು ಬಹಳ ಕಷ್ಟ.
ಗ್ರೀಕ್ ತಜ್ಞರ ಕಥೆಯ ಪ್ರಕಾರ ವಿಜಯದ ರಾಜ ಗೋರ್ಡಿಯಸ್ ಒಂದು ಸಂಕೀರ್ಣವಾದ ಗಂಟು ಕಟ್ಟಿದ್ದರು. ಅದನ್ನು ಬಿಚ್ಚಿದ ಮೊದಲ ವ್ಯಕ್ತಿ ಏಷ್ಯಾದ ಭವಿಷ್ಯದ ಆಡಳಿತಗಾರ ಎಂದು ಹೇಳಲಾಗಿತ್ತು. ಅಲೆಗ್ಸಾಂಡರ್ ಗಂಟನ್ನು ಬಿಚ್ಚಲಾಗದೆ ತನ್ನ ಕತ್ತಿಯಿಂದ ಕತ್ತ,ರಿಸಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಯಾವುದೇ ಊಹಾಪೋಹಗಳಿಗೆ ಕಿವಿ ಒಡ್ಡಬಾರದು. ಕೊರೊನ ಮಹಾಮಾರಿಯಿಂದ ಸಾಯುವವರಿಗಿಂತ ಅದರ ಸುಳ್ಳು ಸುದ್ದಿ ಕೇಳಿ ಸಾಯುವವರೇ ಜಾಸ್ತಿ ಆಗಿದ್ದಾರೆ. ಆದ್ದರಿಂದ ಫೇಸ್ಬುಕ್ ಮತ್ತು ವಾಟ್ಸಾಪ್ ನಲ್ಲಿ ಬರುವ ಸುದ್ದಿಗಳನ್ನು ಎಲ್ಲವನ್ನೂ ನಂಬಬಾರದು.