ಮೈಸೂರು ಒಡೆಯರ್ ಮನೆತನದ ಕುಡಿ ಆದ್ಯವೀರ ಒಡೆಯರ್ ಹುಟ್ಟಿದ ದಿನವನ್ನು ಬರ್ತ್‌ಡೇ ಆಚರಿಸುವುದಿಲ್ಲವಂತೆ!. ಇದರ ಹಿಂದೆ ಇವರ ಮನೆಯಲ್ಲಿ ಒಂದು ವಿಶೇಷ ನಂಬಿಕೆ ಇದೆಯಂತೆ ಹಾಗಾದರೆ ಆದ್ಯವೀರ ಒಡೆಯರ್ ಹುಟ್ಟಿದ ದಿನದ ಬರ್ತಡೇ ಸಂಭ್ರಮವನ್ನು ಆಚರಿಸದೆ ಇರಲು ಕಾರಣ ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಇದೇ ಬರುವ ಡಿಸೆಂಬರ್ 26ಕ್ಕೆ ಮೈಸೂರಿನ ಯುವರಾಜ ಆದ್ಯವೀರ ನರಸಿಂಹರಾಜ ಒಡೆಯರ್‌ಗೆ ಮೂರು ವರ್ಷಗಳು ತುಂಬುತ್ತವೆ. ಅದೇ ಹೊತ್ತಿಗೆ ನವರಾತ್ರಿ ದಸರಾ ಸಂಭ್ರಮ ಕೂಡಾ ಮುಗಿದಿರುವುದರಿಂದ ಮೈಸೂರಿನ ಅರಮನೆಯಲ್ಲಿ ಉಲ್ಲಾಸ ಉತ್ಸಾಹಗಳು ತುಂಬಿರುತ್ತವೆ. ಮೈಸೂರಿನ ಅರಮನೆಯಲ್ಲಿ ಇರುವ ಒಂದು ವಿಶಿಷ್ಟ ಪದ್ಧತಿ ಎಂದರೆ, ಯುವರಾಜನ ಹುಟ್ಟುಹಬ್ಬವನ್ನು ಅಂದೇ ಆಚರಿಸುವ ರೂಢಿ ಇಲ್ಲ. ಅದನ್ನು ಮುಂದೂಡಿ, ಬೇರೊಂದು ದಿನ ಆಚರಿಸಲಾಗುತ್ತದೆ. ಯುವರಾಜನ ಆಯುಷ್ಯ ವರ್ಧನೆಗಾಗಿ ಹೀಗೆ ಮಾಡಲಾಗುತ್ತದಂತೆ. ಇದು ತಲೆಮಾರುಗಳಿಂದ ನಡೆದು ಬಂದಿರುವ ರೂಢಿ. ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಿಗೆ ಹೋಗಿ ನೋಡಿದರೆ ಮಗನ ಫೋಟೋಗಳೇ ಹೆಚ್ಚಾಗಿ ಕಾಣಿಸುತ್ತವೆ. ಮೈಸೂರಿನ ಮಹಾರಾಜರು ತಮ್ಮ ಮಹಾರಾಣಿ ಹಾಗೂ ಯುವರಾಜನ ಜೊತೆ ಉಲ್ಲಾಸದಿಂದ ಇರುವ ಕ್ಷಣಗಳ ಫೋಟೋಗಳನ್ನು ಅದರಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ.
ಇದಕ್ಕೆ ಉದಾಹರಣೆ ಎಂದರೆ ಕಳೆದ ವರ್ಷದ ಯುವರಾಜನ ವರ್ಧಂತಿಯಂದು ಯದುವೀರ್ ಮಗ ಅರಮನೆಯೊಳಗೆ ತಮ್ಮ ಕೈಹಿಡಿದು ನಡೆಯುತ್ತಿರುವ ರಾಜಮಾತೆ ಮತ್ತು ಅಜ್ಜಿ ಪ್ರಮೋದಾದೇವಿ ಒಡೆಯರ್ ಅವರ ಕೈಗಳ ಆಸರೆಯಲ್ಲಿ ಮನೆದೇವರ ಮುಂದೆ ನಿಂತಿರುವ ಕಾವಿ ಬಟ್ಟೆ ತೊಟ್ಟ ತಮ್ಮ ಮತ್ತು ಮಹಾರಾಣಿಯ ಮಡಿಲ ಮೇಲೆ ಯುವರಾಜ ಪವಡಿಸಿರುವ, ಯುವರಾಜ ಮೆತ್ತೆಯ ಮೇಲೆ ಕೂತು ಮಂಗಳಾರತಿ ಪೂಜೆ ಮಾಡಿಸಿಕೊಳ್ಳುತ್ತಿರುವ, ಫೋಟೋಗಳನ್ನು ಹಾಕಿದ್ದರು. ಈ ಫೋಟೋಗಳಿಗೆ ಹದಿಮೂರು ಸಾವಿರಕ್ಕೂ ಹೆಚ್ಚು ಲೈಕುಗಳು ಹಾಗೂ ಕಾಮೆಂಟ್‌ಗಳು ಬಂದಿದ್ದವು. ಹೆಚ್ಚಿನದರಲ್ಲಿ ಯುವರಾಜನಿಗೆ ಆಯುಷ್ಯ ಆರೋಗ್ಯಗಳನ್ನು ಕೋರಿ ಶುಭ ಹಾರೈಸಲಾಗಿತ್ತು.
ಮೈಸೂರು ಅರಮನೆಯಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈಗಂತೂ ಪುಟ್ಟ ಮುದ್ದು ಕೃಷ್ಣ ಅರಮನೆಯಲ್ಲಿ ಇರುವುದರಿಂದ ಅದಕ್ಕೆ ವಿಶೇಷ ಮಹತ್ವ. ಆದ್ಯವೀರನಿಗೆ ಶ್ರೀಕೃಷ್ಣದ ವೇಷ ತೊಡಿಸಿ ನೋಡಿ ನಲಿಯುವ ಪರಿಪಾಠ ಬೆಳೆದುಬಂದಿದೆ. ಇತ್ತೀಚೆಗೆ ಯದುವೀರ ಒಡೆಯರ್ ಹಾಕಿದ ಫೋಟೋಗಳಲ್ಲಿ ಆದ್ಯವೀರ ಕೃಷ್ಣ ಬಟ್ಟೆ ತೊಟ್ಟು ಆಸನದಲ್ಲಿ ವಿರಾಜಮಾನ ಆಗಿರುವ, ಅಜ್ಜಿಯ ಕೈಹಿಡಿದು ಕೆತ್ತನೆಯ ಕಂಬದ ಬಳಿ ನಿಂತಿರುವ ಫೋಟೋ, ಎತ್ತಿನ ಗಾಡಿಯ ಮೆರವಣಿಗೆಯ ಮುಂದೆ ಪ್ರಮೋದಾದೇವಿ ಸಹಿತ ಯದುವೀರ್ ಫ್ಯಾಮಿಲಿ ರಾಜಪೋಷಾಕಿನಲ್ಲಿ ಕೊಳಲು ಹಿಡಿದ ಆದ್ಯವೀರನ ಸಹಿತ ನಿಂತಿರುವ, ಆದ್ಯವೀರ ಗೋಪೂಜೆ ಮಾಡುತ್ತಿರುವ ಚಿತ್ರಗಳನ್ನು ಹಾಕಿದ್ದಾರೆ. ಕೃಷ್ಣನ ಪೋಷಾಕಿನಲ್ಲಿ ಆದ್ಯವೀರ ಮುದ್ದಾಗಿ ಕಾಣುತ್ತಾನೆ.