ಉತ್ತರಪ್ರದೇಶದ ಐಎಎಸ್ ಅಧಿಕಾರಿ ಡೆಲಿವರಿಯಾಗಿ 14 ದಿನಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮಹಿಳೆಯರಿಗೆ ಮಗು ಹಾಗೂ ತಾಯಿಯ ಆರೋಗ್ಯಕ್ಕಾಗಿ ಹಾಗೂ ಮಗುವಿನ ಲಾಲನೆ ಪಾಲನೆಗಾಗಿ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ಘಾಜಿಯಾಬಾದನಲ್ಲಿ ಸದ್ಯ ಕೋವಿಡ್ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೆ ಕೆಲಸಕ್ಕೆ ಹಾಜರಾಗಿದ್ದಾರೆ. ಇದಲ್ಲದೇ ತಮ್ಮ ನವಜಾತ ಶಿಶುವನ್ನು ತಮ್ಮೊಂದಿಗೆ ಕಚೇರಿಗೆ ಕರೆತಂದಿದ್ದಾರೆ.
ಈ ಬಗ್ಗೆ ಅವರು ನಾನೊಬ್ಬ ಐಎಎಸ್ ಅಧಿಕಾರಿ ಹಾಗಾಗಿ ನನ್ನ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿ ತಾಯಿಗೂ ತನ್ನ ಮಗುವಿನ ಲಾಲನೆ ಪಾಲನೆ ಮಾಡಲು ದೇವರು ಶಕ್ತಿ ಕೊಟ್ಟಿರುತ್ತಾನೆ. ಗ್ರಾಮಗಳಲ್ಲಿ ಮಹಿಳೆಯರು ಗರ್ಭಿಣಿ ಆಗಿದ್ದಾಗಲೂ ಮನೆ ಕೆಲಸ ಮಾಡುತ್ತಾರೆ ನಂತರ ಹೆರಿಗೆ ಬಳಿಕವೂ ಮಗು ಮತ್ತು ಕುಟುಂಬವನ್ನು ನಿಭಾಯಿಸುತ್ತಾರೆ. ಹಾಗೆಯೇ ನನಗೂ ದೇವರು ನಿಭಾಯಿಸಲು ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು. ಆದರೂ ಸೌಮ್ಯ ಅವರ ಕರ್ತವ್ಯ ಪ್ರಜ್ಞೆಯನ್ನು ಎಲ್ಲರೂ ಮೆಚ್ಚಲೇಬೇಕು.