ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧವಿದೆ, ಯಾರಿಗೆ ಯಾವ ರೀತಿ ಸಂಬಂಧವಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿ ಬಳಗವೇ ಬೇರೆ ರೀತಿ. ಪ್ರತಿ ಸಾರಿ ಐಪಿಎಲ್ ಶುರುವಾದಾಗಲೂ ಈ ಸಲ ಕಪ್ ನಮ್ಮದೇ ಅಂತ ಹೇಳುತ್ತಲೇ ತಮ್ಮ ತಂಡವನ್ನು ಬೆಂಬಲಿಸುತ್ತಾರೆ. ಅಭಿಮಾನಿಗಳು ಆರಸಿಬಿ ತಂಡವನ್ನು ಪ್ರೀತಿಸುವಂತೆ ತಂಡದ ಕೆಲವು ಆಟಗಾರರನ್ನು ಆರಸಿಬಿ ಅಭಿಮಾನಿಗಳು ಹೆಚ್ಚಾಗಿ ಪ್ರೀತಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ವಿರಾಟ್ ಹಾಗೂ ಎಬಿಡಿ. ವಿರಾಟ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಐಪಿಎಲ್ ನಲ್ಲಿ ಕೊನೆವರೆಗೂ ನಾನು ಆರಸಿಬಿ ಪರ ಆಡುತ್ತೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಆರಸಿಬಿ ತಂಡದ ಪರವಾಗಿ ಓಪನರ್ ಆಗಿ ಬಂದ ಅರಿಯೋನ್ ಪಿಂಚ್ ಕೂಡ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿಗೆ ಹೃದಯದಲ್ಲಿ ವಿಶೇಷ ಸ್ಥಾನವನ್ನು ನೀಡಿದ್ದೇನೆ ಎನ್ನುವ ಮೂಲಕ ಬೆಂಗಳೂರಿಗರ ಹಾಗೂ ಆರಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಅರುಣ್ ಪಿಂಚ್ ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಹುಡುಗಿಯ ಬಳಿ ಹೇಳಿಕೊಂಡಿದ್ದು ಬೆಂಗಳೂರಿನಲ್ಲಿ ಹಾಗಾಗಿ ಬೆಂಗಳೂರು ಎಂದರೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದಿದ್ದಾರೆ. ಕಾಮಂಟೇಟರ್ ಹರ್ಷ ಬೊಗಳೆ ಇತ್ತೀಚೆಗೆ ಮಾತನಾಡುತ್ತಾ ಆರಸಿಬಿ ಪರ ಆಡುತ್ತಿರುವ ಎಬಿಡಿ ವಿಲ್ಲರ್ಸ್ ಬಗ್ಗೆ ಬೆಂಗಳೂರಿನ ಜನರ ಹತ್ತಿರ ಎಬಿಡಿ ಎಲ್ಲಿಯವರು ಎಂದು ಕೇಳಿದರೆ ಅವರು ಬೆಂಗಳೂರಿನವರು ಎಂದು ಹೇಳುತ್ತಾರೆ ಅಷ್ಟು ಪ್ರೀತಿಸುತ್ತಾರೆ ಕರ್ನಾಟಕದ ಜನ ಅವರನ್ನು. ಎಬಿಡಿ ಅವರು ಫ್ಯಾಮಿಲಿ ಜೊತೆ ಆಟೋದಲ್ಲಿ ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ ಇದು ಅವರು ಬೆಂಗಳೂರನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಆರಸಿಬಿ ಅಭಿಮಾನಿಗಳಿಗೆ ಹಾಗೂ ಆರಸಿಬಿ ತಂಡದ ಆಟಗಾರರಿಗೆ ಬೆಂಗಳೂರು ಅಂದರೆ ಪ್ರೀತಿ