ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕೆ ಯಾವ ರೀತಿ ಪ್ರಯೋಜನವಿದೆ ಹಾಗೂ ಯಾವ ರೀತಿಯಲ್ಲಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬೆಳ್ಳುಳ್ಳಿ ಒಂದು ಮಸಾಲೆ ಪದಾರ್ಥವಾಗಿದ್ದು ಇದರಲ್ಲಿ ಸಾರಜನಕ, ರಂಜಕ, ಪಿಸ್ಟ್, ಮೇದಸ್ಸು, ಕಬ್ಬಿಣ, ಸುಣ್ಣದ ಅಂಶಗಳನ್ನು ಒಳಗೊಂಡಿದೆ. ಇದು ಔಷಧೀಯ ಗುಣವನ್ನು ಹೊಂದಿದ್ದು ಪ್ರತಿದಿನ ಅಡುಗೆಗೆ ಬಳಸುವುದು ಒಳ್ಳೆಯದು. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯ ಸಂಬಂಧಿ, ಪಚವಾಯು, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟಬಹುದು. ಅಲ್ಲದೇ ಬೆಳ್ಳುಳ್ಳಿ ಸೇವನೆಯಿಂದ ಅಸ್ತಮಾ ಸಮಸ್ಯೆ ದೂರವಾಗುತ್ತದೆ. ರಕ್ತದೊತ್ತಡ, ಕೆಮ್ಮು, ಕಫ ಈ ಎಲ್ಲ ಸಮಸ್ಯೆಗಳಿಗೆ ಬೆಳ್ಳುಳ್ಳಿ ಔಷಧಿಯಾಗಿದೆ. ಬೆಳ್ಳುಳ್ಳಿ ಎಸಳನ್ನು ಹಾಲಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಬಹಳ ಪ್ರಯೋಜನ ಪಡೆಯಬಹುದು, ಕ್ಯಾನ್ಸರ್ ಗುಣಪಡಿಸುವ ಶಕ್ತಿ ಬೆಳ್ಳುಳ್ಳಿ ಮತ್ತು ಹಾಲಿಗಿದೆ. ಅದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಬೆಳ್ಳುಳ್ಳಿ ಸೇವಿಸುವುದರಿಂದ ವಯಸ್ಸು ಹೆಚ್ಚಾದರೂ ಯೌವ್ವನದಂತೆ ಕಾಣಬಹುದು. ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಬೆಳ್ಳುಳ್ಳಿ ಸೇವನೆಯಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಲಿವರ್ ಸಮಸ್ಯೆ ದೂರವಾಗುತ್ತದೆ. ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಅದರಲ್ಲಿ ಆಂಟಿ ಬಯೋಟಿಕ್ ಅಂಶವಿದ್ದು ಗಾಯಗಳಾದರೆ ಬೇಗ ವಾಸಿಯಾಗುತ್ತದೆ. ಚರ್ಮದ ಸೌಂದರ್ಯ ಹೆಚ್ಚಾಗುತ್ತದೆ, ಮೊಡವೆಗಳು, ಕಲೆಗಳು ಇರುವುದಿಲ್ಲ. ಮೂಳೆಗಳು ಗಟ್ಟಿಯಾಗುತ್ತದೆ. ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ರಕ್ತನಾಳಗಳಲ್ಲಿ ಸೇರಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ಅನಾವಶ್ಯಕ ಬೊಜ್ಜನ್ನು ಬೆಳ್ಳುಳ್ಳಿ ಮತ್ತು ಹಾಲು ಕರಗಿಸುತ್ತದೆ. ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಲು ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಕುಡಿಯಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!