ಕರೋನಾ ವೈರಸ್ ಹರಡುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ದಿನಕ್ಕೆ ನೂರಾರು ಮಂದಿಗೆ ಸೊಂಕು ತಗುಲುವುದು, ನೂರಾರು ಮಂದಿ ಸಾವನ್ನಪ್ಪುವುದು ಕೂಡಾ ಹೆಚ್ಚುತ್ತಲೆ ಇದೆ. ಅದಕ್ಕಾಗಿಯೇ ಸರಕಾರ ಮಾಸ್ಕ್ ಕಡ್ಡಾಯ ಮಾಡಿದೆ ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಲು ತಿಳಿಸಿದೆ. ಸ್ಯಾನಿಟೈಸರ್ ಉಪಯೋಗಿಸಿ, ಗಂಟೆಗೆ ಒಮ್ಮೆ ಕೈ ತೊಳೆದುಕೊಳ್ಳಿ ಎಂದು ತಿಳಿಸಿದೆ. ಅಂತೆಯೆ ಲಾಕ್ಡೌನ್, ಒಂದು ದಿನದ ಕರ್ಪ್ಯೂದಂತಹ ಕಾನೂನುಗಳನ್ನು ಕೂಡಾ ಜಾರಿಗೆ ತಂದಿದೆ. ಅದರ ಜೊತೆಗೆ ಜನರು ಸಭೆ ಸಮಾರಂಭಗಳಲ್ಲಿ ಸೇರುವುದಕ್ಕೆ ಕೂಡ ಕಡಿವಾಣ ಹಾಕಿದೆ. ಅದಕ್ಕಾಗಿಯೆ ಬೇರೆ ಬೇರೆ ರೀತಿಯ ಕಾನೂನು ಕ್ರಮಗಳನ್ನು ಸಹ ಕೈಗೊಂಡಿದೆ. ಜನರ ಹಿತಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಈ ವಿಷಯದ ಕುರಿತಾಗಿ ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ ಮದುವೆಯ ಸಂದರ್ಭಗಳಲ್ಲಿ ಕೇವಲ ಐವತ್ತು ಜನರು ಸೇರಲು ಮಾತ್ರ ಅವಕಾಶ. ಯಾರೆ ಆಗಿದ್ದರೂ, ದೊಡ್ಡ ರಾಜಕಾರಣಿಗಳು ಆಗಿದ್ದರೂ ಮದುವೆ ಸಮಾರಂಭದಲ್ಲಿ ಐವತ್ತು ಜನರಿಗಿಂತ ಹೆಚ್ಚಿಗೆ ಜನರು ಸೇರುವುದಕ್ಕೆ ಅವಕಾಶ ಇರುವುದಿಲ್ಲ. ಮೊದಲು ಲಾಕ್ಡೌನ್ ಸಡಿಲಿಕೆ ಮಾಡಿದ ಸಂದರ್ಭದಲ್ಲಿ ನೂರು ಜನಕ್ಕೆ ಸೇರುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಕೇವಲ ಐವತ್ತು ಜನರಿಗೆ ಮಾತ್ರ ಆಸ್ಪದ ನೀಡಲಾಗಿದೆ. ಅದರಂತಯೆ ಅಂತ್ಯಕ್ರಿಯೆ ಆದಲ್ಲಿ ಇಪ್ಪತ್ತು ಜನರಿಗೆ ಮಾತ್ರ ಆ ಸಮಾರಂಭದಲ್ಲಿ ಸೇರಲು ಅವಕಾಶವಿದೆ ಎಂಬ ಕಾನೂನನ್ನು ಜಾರಿಗೆ ತರಲಾಗಿದೆ. ಕರೋನಾ ವೈರಸ್ ಹರಡುವಿಕೆ ಬೆಂಗಳೂರಿನಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕಾರಣದಿಂದ ಸರಕಾರ ಮತ್ತೆ ಹಳೆಯ ನಿಯಮಗಳಿಗೆ ಮೊರೆ ಹೋಗುತ್ತಿದೆ. ಹೀಗಿದ್ದೂ ಸಹ ಮದುವೆ ಹಾಗೂ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಹೆಚ್ಚು ಜನರು ನೆರೆದರೆ ಅದಕ್ಕೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಇಪ್ಪತ್ಮೂರು ಗ್ರಾಮ ಪಂಚಾಯತಿಗಳಿಗೆ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಇನ್ನೂ ಎರಡು ದಿನಗಳಲ್ಲಿ ಬೆಂಗಳೂರು ನಗರ ಪ್ರದೇಶಗಳಲ್ಲಿ ಈ ಹೊಸ ಕಾನೂನು ಜಾರಿಗೆ ಬರುವುದು ಎಂದು ಹೇಳಲಾಗಿದೆ. ಅದರ ಜೊತೆಯಲ್ಲಿಯೆ ಇಡೀ ರಾಜ್ಯಾದ್ಯಂತ ಮಾಸ್ಕ್ ಧರಿಸುವುದು, ಕಡಿಮೆ ಜನ ಸೇರುವಂತಹ ಹೊಸ ನಿಯಮಗಳನ್ನು ಜಾರಿಗೆ ತರುವಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಒಂದು ವೇಳೆ ಉಲ್ಲಂಘಿಸಿದವರಿಗೆ ಹೊಸ ರೀತಿಯ ದಂಡ ಹಾಕುವುದು ಹಾಗೂ ಜೈಲು ಶಿಕ್ಷೆಯ ಮಾರ್ಗಸೂಚಿಗಳನ್ನು ಸಹ ತಯಾರಿಸಲಾಗುತ್ತಿದೆ. ಬೆಂಗಳೂರು ನಗರ ಪ್ರದೇಶಗಳಿಗೆ ಸಂಭಂಧಿಸಿದಂತೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಇನ್ನೂರು ರೂಪಾಯಿಗಳ ದಂಡ ಹಾಗೂ ದಂಡ ಪಾವತಿಸದೆ ಹೋದಲ್ಲಿ ಅವರ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಪೋಲಿಸ್ ಠಾಣೆಗಳಲ್ಲಿ ದೂರೂ ದಾಖಲಿಸಬೇಕೆಂಬ ನಿಯಮವನ್ನು ಕೂಡಾ ತರಲಾಗಿದೆ. ಹಾಗೆಯೆ ಅದಕ್ಕೆ ದಿನಕ್ಕೆ ಹತ್ತು ಮಂದಿ ಮಾಸ್ಕ್ ಧರಿಸದೆ ಇರುವವರಿಗೆ ದಂಡ ಹಾಕಬೇಕೆಂಬ ನಿಯಮ ಮಾಡಲಾಗಿದೆ. ಹಾಗೆಯೆ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಅಧಿಕಾರಿಗಳೆ ನೋಡಿಕೊಳ್ಳಬೇಕೆಂಬ ನಿಯಮವನ್ನು ಸಹ ಸಭೆಯಲ್ಲಿ ಚರ್ಚಿಸಿ ಜಾರಿಗೊಳಿಸಿದ್ದಾರೆ.

ಈ ತಿಂಗಳಿನಲ್ಲಿ ಸೊಂಕು ಕಡಿಮೆಯಾಗುವ ಲಕ್ಷಣ ಕಂಡು ಬಂದಿತ್ತು. ಆದರೆ ಬೆಂಗಳೂರಿನಲ್ಲಿ ಹೆಚ್ಚಾಗಿ ಹರಡುತ್ತಿರುವ ಕಾರಣ ನಿಯಮವನ್ನು ಬದಲಾವಣೆ ಮಾಡಲಾಗುತ್ತಿದೆ. ಒಂದು ವೇಳೆ ಮದುವೆಗಳು ಛತ್ರಗಳಲ್ಲಿ ನಡೆದರೆ, ಮೊದಲು ಮದುವೆ ಆಗುತ್ತಿರುವುದರ ಬಗ್ಗೆ ಆಯಾ ಕಲ್ಯಾಣ ಮಂಟಪದ ಅಧಿಕಾರಿಗಳು ಸರಕಾರದ ಒಪ್ಪಿಗೆ ಪಡೆಯಬೇಕು. ಐವತ್ತು ಮದುವೆಯ ಕಾರ್ಡ್ ಗಳಿಗಿಂತ ಹೆಚ್ಚಿನ ಕಾರ್ಡ್ ಪ್ರಿಂಟ್ ಮಾಡಿಸುವಂತಿಲ್ಲ. ಕಲ್ಯಾಣ ಮಂಟಪದವರು ಮದುವೆಗೆ ಬರುವ ಅತಿಥಿಗಳ ವಿವರ ದಾಖಲಿಸಿಕೊಳ್ಳಬೇಕು ಹಾಗೂ ಮೊಬೈಲ್ ನಂಬರ್ ಸಮೇತವಾಗಿ ವಿವರಗಳನ್ನು ನೀಡಿ ಎಂಬ ಈ ರೀತಿಯ ನಿಯಮವನ್ನು ಜಾರಿಗೆ ತರಲಾಗಿದೆ. ನಿಯಮ ಉಲ್ಲಂಘನೆ ಆಗದ ರೀತಿಯಲ್ಲಿ ನೋಡಿಕೊಳ್ಳಲು ಕೆಲವು ತಂಡಗಳನ್ನು ತಯಾರಿಸುವ ಅವಕಾಶವಿದೆ ಹಾಗೂ ದಂಡ ವಿಧಿಸುವ ಅವಕಾಶವಿದೆ. ಹಾಗೆಯೆ ಮದುವೆ ಸಮಾರಂಭಕ್ಕೆ ಬಂದವರು ಗುಂಪಾಗಿ ಮಾತನಾಡುವಂತಿಲ್ಲ, ಕುಳಿತುಕೊಳ್ಳುವ ಸಂದರ್ಭದಲ್ಲೂ ಒಂದು ಆಸನದ ಜಾಗ ಬಿಟ್ಟು ಮತ್ತೊಂದು ಆಸನದಲ್ಲಿ ಕುಳಿತುಕೊಳ್ಳಬೇಕು ಎಂಬೆಲ್ಲಾ ನಿಯಮ ಜಾರಿಯಲ್ಲಿದೆ. ಇವೆಲ್ಲಾ ನಿಯಮಗಳೂ ಸಧ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಮಾತ್ರ ಜಾರಿಯಾಗಿದ್ದು ಬೇರೆ ಕಡೆಗಳಲ್ಲಿ ಮದುವೆಗೆ ನೂರು ಜನ ಸೇರಬಹುದೆಂಬ ಕಾಯಿದೆ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಮಾತ್ರ ನಿಯಮ ಬದಲಾವಣೆಗೆ ಕಾರಣ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕರೋನಾ ಸೊಂಕಿಗೆ ಕಡಿವಾಣ ಹಾಕಲು ಸರಕಾರದ ಪ್ರಯತ್ನಗಳು ಇದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!