ಇತ್ತೀಚೆಗೆ ಹೊರಗಡೆ ಕೆಲಸ ಮಾಡುವವರಿಂದ ಹಿಡಿದು ಒಳಗೆ ಕೂತು ಕೆಲಸ ಮಾಡುವವರಿಗೂ ಕಾಡುವ ಸಮಸ್ಯೆ ಎಂದರೆ ಅದು ಸುಸ್ತು. ಏಳಲೂ ಬೇಡ ಕೆಲಸ ಮಾಡುವುದು ಬೇಡ ಎಂಬಷ್ಟರ ಮಟ್ಟಿಗೆ ಸುಸ್ತು ನಮ್ಮನ್ನು ಕಾಡುತ್ತದೆ. ಹಾಗಾದರೆ ಈ ಸುಸ್ತಿಗೆ ಏನು ಮಾಡಬೇಕು? ಹೇಗೆ ಕಡಿಮೆ ಮಾಡಿಕೊಳ್ಳಬೇಕು? ಎನ್ನುವುದಕ್ಕೆ ಇಲ್ಲೊಂದು ಪಾನೀಯ ಮಾಡುವ ವಿಧಾನವಿದೆ. ಈ ಲೇಖನದಲ್ಲಿ ನಾವು ಈ ಪಾನೀಯವನ್ನು ಹೇಗೆ ಮಾಡುವುದು ಮತ್ತು ಮಾಡಲು ಬೇಕಾದ ಸಾಮಗ್ರಿಗಳು ಎನು ಎನ್ನುವುದನ್ನು ತಿಳಿದುಕೊಳ್ಳೋಣ.
ಈ ಪಾನೀಯವನ್ನು ಮೂರು ವರ್ಷದ ಮೇಲಿನ ಮಕ್ಕಳು ಕುಡಿಯಬಹುದು. ಈ ಪಾನೀಯ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ರಕ್ತದ ಪ್ರಮಾಣವನ್ನೂ ವೃದ್ದಿಸುತ್ತದೆ. ಅಶಕ್ತಿ ತಲೆಸುತ್ತು ಇವೆಲ್ಲವೂ ಕಡಿಮೆ ಆಗುತ್ತದೆ. ಈ ಪಾನೀಯವನ್ನು ಮಾಡಲು ಬೇಕಾದ ಸಾಮಗ್ರಿಗಳು 250 ml ನೀರು, ಒಣದ್ರಾಕ್ಷಿ 25ಗ್ರಾಂ ಹಾಗೂ ಒಂದು ನಿಂಬೆಹಣ್ಣು. ಈ ಪಾನೀಯವನ್ನು ಮಾಡುವ ವಿಧಾನ ಹೇಗೆ ಅಂತಾ ನೋಡುವುದಾದರೆ, ರಾತ್ರಿಯಲ್ಲಿ ಒಂದು ಗ್ಲಾಸ್ ನೀರಿಗೆ ಒಂದು ಹಿಡಿಯಷ್ಟು ಅಂದರೆ 25 ಗ್ರಾಂ ಒಣ ದ್ರಾಕ್ಷಿ ಹಾಕಿ, ಆ ನೀರಿಗೆ ಒಂದು ಪೂರ್ತಿ ನಿಂಬೆಹಣ್ಣಿನ ರಸ ಹಾಕಿ ಮುಚ್ಚಿಟ್ಟುಕೊಳ್ಳಬೇಕು. ಬೆಳಿಗ್ಗೆ ಇದನ್ನು ಕುಡಿದರೆ ಅಶಕ್ತಿಯ ಸಮಸ್ಯೆ ಪರಿಹಾರವಾಗುತ್ತದೆ. ಸುಸ್ತು, ಜೋಮು ಹಿಡಿಯುವುದು, ತಲೆ ಸುತ್ತು, ಇದಕ್ಕೆಲ್ಲ ಮೂಲ ಕಾರಣ ದೇಹದಲ್ಲಿನ ರಕ್ತ ಕಡಿಮೆ ಆಗುವುದು. ರಕ್ತ ವೃದ್ದಿಸಿದರೆ ಇವೆಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಚಿಕ್ಕ ಮಕ್ಕಳಿಗೆ ಈ ನೀರು ಅತ್ಯುತ್ತಮ. ಅವರಲ್ಲಿ ರಕ್ತದಸಮಸ್ಯೆ ಕಂಡು ಬರುವುದಿಲ್ಲ.
ಇನ್ನೂ ಎರಡನೇ ಪಾನೀಯ ಮಾಡುವ ವಿಧಾನಕ್ಕೆ ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ. ನಾಲ್ಕು ಹಸಿ ಖರ್ಜೂರ ಹಾಗೂ 200ml ಹಾಲು ಈ ಎರಡು ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವುದು. ಮಾಡುವ ವಿಧಾನ ಈ ರೀತಿಯಲ್ಲಿದೆ. ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು. ಕುದಿಯುತ್ತಿರುವ ಹಾಲಿಗೆ ಬೀಜ ತೆಗೆದ ಖರ್ಜೂರವನ್ನು ಅದಕ್ಕೆ ಹಾಕಿ ಚೆನ್ನಾಗಿ ಕುದಿಸಿ, ನಂತರ ಸೋಸಿ ಮಕ್ಕಳಿಗೆ ಕುಡಿಸಬೇಕು. ಸಕ್ಕರೆ ಹಾಕುವ ಅವಶ್ಯಕತೆ ಇರುವುದಿಲ್ಲ. ಇದು ರಕ್ತ ವೃದ್ದಿಸಲು ಸಹಾಯ ಮಾಡುತ್ತದೆ. ಒಣ ಖರ್ಜೂರ ಇದೆ ಎನ್ನುವವರು ಖರ್ಜೂರವನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರಿನ ಜೊತೆಗೆ ಹಾಲು ಹಾಕಿ ಕುದಿಸಿ ಕುಡಿಯಬಹುದು. ಹಾಲು ಬೇಡ ಎನ್ನುವವರು ನೀರಿನಲ್ಲೆ ಮಾಡಿಕೊಳ್ಳಬಹುದು.
ಮೂರನೆಯ ಪಾನೀಯ ಮಾಡುವ ವಿಧಾನ. 250 ml ದಾಳಿಂಬೆ ಜ್ಯೂಸ್ ಗೆ ಒಂದು ಚಮಚ ಎಳ್ಳಿನ ಪುಡಿ ಸೇರಿಸಿ ಕುಡಿಯುವುದು. ಬಿಳಿ ಎಳ್ಳನ್ನಾದರೂ ಬಳಸಬಹುದು, ಕಪ್ಪು ಎಳ್ಳಾದರೂ ಬಳಸಬಹುದು. ಇವೆಲ್ಲವನ್ನೂ ತಿಂಡಿಗೆ ಒಂದು ಗಂಟೆ ಮುಂಚಿತವಾಗಿ ಕುಡಿಯಬೇಕು. ಪ್ರತಿ ದಿನವೂ ಇದನ್ನು ಬಳಸುವುದು ಉತ್ತಮ.
ಈ ಮೂರು ಪಾನೀಯಗಳನ್ನು ನಾವು ಪ್ರತೀ ದಿನ ಮಾಡಿಕೊಂಡು ಕುಡಿಯುವುದರಿಂದ ನಮ್ಮ ದೇಹದ ಸುಸ್ತು, ಮೈ ಕೈ ನೋವುಗಳು ಎಲ್ಲವೂ ಕಡಿಮೆಯಾಗುತ್ತದೆ.