ದೇಹಕ್ಕೆ ಬೇಕಾಗುವ ಪೋಷಕಾಂಶಗಳಲ್ಲಿ ಕೆಲವನ್ನು ತರಕಾರಿ, ಹಣ್ಣುಗಳು, ಸೊಪ್ಪುಗಳು ಕೊಟ್ಟರೆ ಕೆಲವೊಂದು ಒಣ ಹಣ್ಣುಗಳು ಕೊಡುತ್ತವೆ. ಉದಾಹರಣೆಗೆ ಉತ್ತುತ್ತೆ, ಗೊಡಂಬಿ, ಬಾದಾಮಿ, ಒಣ ದ್ರಾಕ್ಷಿ. ಇವುಗಳಲ್ಲಿ ಒಂದಾದ ಒಣ ದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಆಗುವ ಉಪಯೋಗಗಳ ಬಗೆಗೆ ಮಾಹಿತಿ ಇಲ್ಲಿದೆ. ಒಣ ದ್ರಾಕ್ಷಿ ದೇಹಕ್ಕೆ ಪುಷ್ಟಿ ನೀಡುವಂತಹ ಔಷಧೀಯ ವಸ್ತುವಾಗಿದೆ. ಒಣ ದ್ರಾಕ್ಷಿಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿಂದರೆ ದೇಹಕ್ಕೆ ಬೇಕಾದ ಹಲವು ಪೌಷ್ಟಿಕತೆಯನ್ನು ನೀಡುತ್ತದೆ. ಮಕ್ಕಳು ಹಾಗೂ ದೈಹಿಕ ಕ್ಷಮತೆ ಕಡಿಮೆ ಹೊಂದಿರುವವರು ಇದನ್ನು ತಿಂದರೆ ಇದರಲ್ಲಿರುವ ಆಂಟಿಒಕ್ಸಿಡೆಂಟ್ ಗುಣ ಹಾಗೂ ಶತಿ, ವಿಟಮಿನ್ ಹಾಗೂ ಖನಿಜದ ಹೇರಳ ಗುಣಗಳಿಂದ ಶಕ್ತಿ ದೊರೆಯುತ್ತದೆ. ಇವರು ಒಣ ದ್ರಾಕ್ಷಿಯನ್ನು ಹೆಚ್ಚಾಗಿ ಸೇವಿಸುವುದು ಉತ್ತಮ. ಒಣ ದ್ರಾಕ್ಷಿ ಕ್ಯಾನ್ಸರ್ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿ ಇದೆ. ಒಣ ದ್ರಾಕ್ಷಿ ಕೊಬ್ಬು ನಿಯಂತ್ರಿಸುತ್ತದೆ. ಫಂಗಸ್ ವೈರಸ್ ವಿರುದ್ದವು ಇದು ಹೋರಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಒಣ ದ್ರಾಕ್ಷಿ ಸೇವಿಸುವುದರಿಂದ ಪ್ರಚೋಧಿಸಲ್ಪಡುವ ರಕ್ತನಾಳಗಳು ಚಟುವಟಿಕೆಗಳಿಂದ ಕೂಡಿರುತ್ತದೆ.
ಜೊತೆಗೆ ರಕ್ತಹೀನತೆಯನ್ನು ತಡೆದು ರಕ್ತ ಹೆಚ್ಚಾಗಿ ಉತ್ಪತ್ತಿಗೊಳ್ಳಲು ಸಹಾಯ ಮಾಡುತ್ತದೆ. ಒಣ ದ್ರಾಕ್ಷಿಯನ್ನು ದಿನಕ್ಕೆ ಐದು ಆರು ತೆಗೆದುಕೊಳ್ಳುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಹಾಗೂ ಸಣ್ಣ ಕರುಳನಲ್ಲಿ ಶೇಖರಣೆಯಾದ ತ್ಯಾಜ್ಯ ದೇಹದಿಂದ ಹೊರ ಹೋಗುತ್ತದೆ. ಒಣ ದ್ರಾಕ್ಷಿಯಲ್ಲಿ ಶೀತ, ಕಫ, ಕೆಮ್ಮುಗಳನ್ನು ದೂರ ಮಾಡುವ ಶಕ್ತಿ ಇದೆ. ಇದರಿಂದ ಸೌಂದರ್ಯ ವೃದ್ದಿಸುತ್ತದೆ. ತುಂಬಾ ತೆಳುವಾದ ದೇಹ ಹೊಂದಿರುವವರು ಒಣ ದ್ರಾಕ್ಷಿ ತಿನ್ನುವುದರಿಂದ ದಪ್ಪ ಆಗಬಹುದು. ಒಣ ದ್ರಾಕ್ಷಿಯಲ್ಲಿರುವ ವಿಟಮಿನ್ ಗಳು ಕ್ರೀಡಾಪಟುಗಳಿಗೆ ಶಕ್ತಿ ವೃದ್ದಿಸಿಕೊಳ್ಳಲು ಸಹಾಯ ಮಾಡುತ್ತದೆ.
ಒಣ ದ್ರಾಕ್ಷಿ ಬಿಪಿ ನಿಯಂತ್ರಣದಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ. ಒಣ ದ್ರಾಕ್ಷಿಯಲ್ಲಿರುವ ಪೊಟ್ಯಾಸಿಯಮ್ ರಕ್ತದಲ್ಲಿನ ಒತ್ತಡವನ್ನು ನಿಯಂತ್ರಿಸುತ್ತದೆ. ಒಣ ದ್ರಾಕ್ಷಿಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ರಕ್ತ ಕಣಗಳ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹಕ್ಕೆ ಉತ್ತೇಜನ, ಚೈತನ್ಯ ನೀಡುತ್ತದೆ ಈ ಅಂದವಾದ ಒಣ ದ್ರಾಕ್ಷಿ