ಮನೆಯ ವಾಸ್ತು ಪ್ರಕಾರ ಕೆಲವು ವಸ್ತುಗಳು ಯಾವ ದಿಕ್ಕಿನಲ್ಲಿ ಇರಬೇಕು ಯಾವ ದಿಕ್ಕಿನಲ್ಲಿ ಇರಬಾರದು ಎಂಬ ನಿಯಮಗಳಿವೆ. ಒಂದು ವೇಳೆ ಮನೆಯ ವಾಸ್ತು ಸರಿಯಾಗಿರದೆ ಹೋದಲ್ಲಿ ಮನೆಯ ಯಜಮಾನನು ನಷ್ಟ ಅನುಭವಿಸುತ್ತಾನೆ, ಮನೆಯಲ್ಲಿ ತೊಂದರೆಗಳಾಗುತ್ತವೆ ಎಂಬೆಲ್ಲಾ ನಂಬಿಕೆಗಳಿವೆ ಹಾಗಾದರೆ ಮನೆಯಲ್ಲಿ ಜೇನು ಕಟ್ಟಿದರೆ ಏನಾಗುತ್ತದೆ. ಯಾವ ದಿಕ್ಕಿನಲ್ಲಿ ಜೇನು ಕಟ್ಟಿದರೆ ಒಳ್ಳೆಯದು ಯಾವ ದಿಕ್ಕಿನಲ್ಲಿ ಜೇನು ಕಟ್ಟಬಾರದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ. ಮನೆಯ ಕಿಟಕಿಯ ಸಜ್ಜೆಗಳ ಮೇಲೆ ಜೇನು ಕಟ್ಟುವುದು ಸಾಮಾನ್ಯ. ಮೊದಲೆಲ್ಲಾ ಈ ತರಹದ ಜೇನು ಕಟ್ಟುವುದು, ಹುತ್ತ ಕಟ್ಟುವುದು ಸರ್ವೆ ಸಾಮಾನ್ಯವಾಗಿತ್ತು. ಈಗ ಸಿಮೆಂಟ್ ಮನೆಗಳು ಬಂದಾಗಿನಿಂದ ಜೇನು ಹಾಗೂ ಹುತ್ತ ಕಟ್ಟುವುದರ ಸಂಖ್ಯೆ ಕಡಿಮೆಯಾಗಿದೆ.
ಜೇನು ಕಟ್ಟುವುದಕ್ಕೆ ಎಂಟು ದಿಕ್ಕುಗಳಲ್ಲಿ ಕೆಲವು ದಿಕ್ಕುಗಳು ಫಲಪ್ರದವಾಗಿದ್ದರೆ ಕೆಲವು ಅಶುಭ ಫಲ ನೀಡುತ್ತದೆ ಎಂದು ನಂಬಿಕೆ. ಜೇನು ಅಥವಾ ಹುತ್ತಗಳು ಪೂರ್ವ ದಿಕ್ಕಿನಲ್ಲಿ ಕಟ್ಟಿದರೆ ಅದು ಉತ್ತಮ ಫಲ ಕೊಡುತ್ತದೆ. ಆಗ್ನೇಯ ದಿಕ್ಕಿನಲ್ಲಿ ಜೇನು ಕಟ್ಟಿದರೆ ಯಾರಾದರೂ ಆಪ್ತರು ಬರುವ ಸೂಚನೆ ಕೊಡುತ್ತದೆ ಇಲ್ಲವೇ ಅವರಿಂದ ಏನಾದರೂ ಅನುಕೂಲಕರ ಸಂಗತಿ ಬರುತ್ತದೆಂದು ಸೂಚಿಸುತ್ತದೆ. ದಕ್ಷಿಣ ದಿಕ್ಕಿನಲ್ಲಿ ಜೇನು ಕಟ್ಟಿದರೆ ಉತ್ತಮವಾದ ಶುಭಫಲವನ್ನು ನೀಡುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತದೆ. ನೈರುತ್ಯ ಭಾಗದಲ್ಲಿ ಜೇನು ಕಟ್ಟಿದರೆ ದಾರಿದ್ರ್ಯಗಳು ಹಾಗೂ ಕಷ್ಟಗಳು ಬರುವ ಸೂಚನೆಯನ್ನು ನೀಡುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಜೇನು ಕಟ್ಟಿದರೆ ಬಂಧುಗಳಿಂದ ಶುಭಫಲ ಸಿಗುತ್ತದೆ ಬಂಧುಗಳಿಗೆ ಒಳ್ಳೆಯ ಅನುಕೂಲ ಮಾಡಿಕೊಡಬಹುದು ಇಲ್ಲವೇ ಬಂಧುಗಳೆ ಸಹಾಯ ಮಾಡಬಹುದಯ.
ವಾಯುವ್ಯ ಭಾಗದಲ್ಲಿ ಜೇನು ಅಥವಾ ಹುತ್ತ ಕಟ್ಟಿದರೆ ಕೈ ಹಾಕಿದ ಕೆಲಸಗಳು ಕೈಗೂಡುತ್ತವೆ ಎಂದು ಸೂಚಿಸುತ್ತದೆ. ಬೇಗ ಬೇಗ ಕೆಲಸಗಳು ಮುಗಿಯುವ ಶುಭ ಸೂಚನೆ ದೊರೆಯುತ್ತದೆ. ಉತ್ತರ ದಿಕ್ಕಿನಲ್ಲಿ ಜೇನು ಅಥವಾ ಹುತ್ತ ಕಟ್ಟಿದರೆ ವಿಶೇಷವಾಗಿ ದ್ರವ್ಯ ಪ್ರಾಪ್ತಿಯನ್ನು ತೋರಿಸುತ್ತದೆ. ಈಶಾನ್ಯ ಭಾಗದಲ್ಲಿ ಹುತ್ತವಾಗಲಿ ಜೇನಾಗಲಿ ಕಟ್ಟಿದಲ್ಲಿ ಶುಭ ಫಲ ದೊರಕುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಒಂದು ವೇಳೆ ಮನೆಯ ಮಧ್ಯ ಭಾಗದಲ್ಲಿ ಹುತ್ತವಾಗಲಿ ಜೇನಾಗಲಿ ಕಟ್ಟಿದಲ್ಲಿ ವಿಶೇಷವಾಗಿ ಸ್ತ್ರೀಯರಿಂದ ಅನುಕೂಲವಾಗುತ್ತದೆ ಇಲ್ಲವೇ ಸ್ತ್ರೀಯರಿಂದ ದ್ರವ್ಯ ಲಾಭವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಶುಭ ಫಲಗಳನ್ನು ನೀಡುವ ದಿಕ್ಕು ಕೇವಲ ನೈರುತ್ಯ ದಿಕ್ಕು ಒಂದೆ ಆಗಿದೆ. ನೈರುತ್ಯವನ್ನು ಬಿಟ್ಟು ಬೇರೆ ಯಾವ ದಿಕ್ಕಿನಲ್ಲಿ ಹುತ್ತು ಕಟ್ಟಿದರೆ ಶುಭಫಲ ದೊರೆಯುತ್ತದೆ.