ಮಹಾನಾಯಕ ಸೀರಿಯಲ್ ನಲ್ಲಿ ತಾಯಿ ಭೀಮಾಬಾಯಿ ಪಾತ್ರ ಮಾಡುತ್ತಿರುವವರು ಯಾರು? ಅಂಬೇಡ್ಕರ್ ಅವರ ತಾಯಿ ಪಾತ್ರಕ್ಕೆ ಇವರೇ ಆಯ್ಕೆಯಾಗಿದ್ದು ಯಾಕೆ? ಈ ಪಾತ್ರ ಮಾಡಲು ಇವರು ಹೇಗೆ ಸಜ್ಜಾದರು ಮಹಾನಾಯಕ ಧಾರವಾಹಿಯ ಭೀಮಾಬಾಯಿಯ ಸಂಕ್ಷಿಪ್ತ ವಿವರವನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಾನಾಯಕ ಭೀಮರಾವ್ ಅಂಬೇಡ್ಕರ್ ಈ ಧಾರವಾಹಿ ಕನ್ನಡ ಕಿರುತೆರೆಯಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಭಾರತ ರತ್ನ ಭೀಮರಾವ್ ಅಂಬೇಡ್ಕರ್ ಅವರ ಜೀವನವನ್ನು ಆಧರಿಸಿರುವ ಸೀರಿಯಲ್ ದಮನಿತರ ಧೈರ್ಯ ಅವತರಿಸಿದ್ದು ಹೇಗೆ ಎಂಬುದನ್ನು ತೋರಿಸುತ್ತಿದೆ. ಮೂಕ ಜನರಿಗಾಗಿ, ಕಪ್ಪು ಜನರಿಗಾಗಿ ನೊಂದು, ಬೆಂದು, ಬಸವಳಿದ ಧ್ವನಿ ಇಲ್ಲದ ಜನಕ್ಕಾಗಿ ನವಮಾಸಗಳ ಕಾಲ ತನ್ನ ಒಡಲಲ್ಲಿ ಭಾರತದ ದಿಕ್ಕನ್ನು ಬದಲಿಸುವ ಬಂಗಾರವನ್ನು ಹೊತ್ತು ತೇರಿನಂತೆ ಉತ್ಸವ ಮಾಡುತ್ತಾ ವರ್ಣಾಶ್ರಮದ ಸಂಕಷ್ಟ ಎಂತದ್ದು, ಅಸ್ಪೃಶ್ಯತೆಯ ಅಪಮಾನ, ಜಾತಿಯ ನೀಚತನ ಎಂತದ್ದು ಅನ್ನೋದನ್ನ ಭ್ರೂಣದಲ್ಲಿ ಭೀಮನಿಗೆ ತಾಕುವಂತೆ ಮಾಡಿದ್ದ ಮಹಾತಾಯಿ ಭೀಮಾಬಾಯಿ. ಇವತ್ತು ಭಾರತದ ಕೋಟ್ಯಂತರ ಮಂದಿ ಸಮಾನತೆಯಿಂದ, ಜವಾಬ್ದಾರಿಯಿಂದ, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣಿಕರ್ತೆ ಭೀಮಾಬಾಯಿ ಇಂಥ ಮಹಾತಾಯಿ ಪಾತ್ರವನ್ನು ಮಹಾನಾಯಕ ಸೀರಿಯಲ್ ನಲ್ಲಿ ಮಾಡುತ್ತಿರುವುದು ನೇಹಾ ಜೋಶಿ. ಅಪ್ಪಟ ಮರಾಠಿ ರಂಗಭೂಮಿ ಕಲಾವಿದೆ ಆಗಿರುವ ನೇಹಾ ಜೋಶಿ 33 ವರ್ಷದವರು ಇವರು ಮೂಲತಃ ಪುಣೆಯವರು ಕಾಲೇಜು ದಿನಗಳಲ್ಲಿ ಅಂತರ್ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡ ಜಾಣೆ. 14 ಮರಾಠಿ ಸಿನಿಮಾ 4 ಹಿಂದಿ ಸಿನಿಮಾಗಳಲ್ಲಿ ನೇಹಾ ಜೋಶಿ ನಟಿಸಿದ್ದಾರೆ. 2000 ನೇ ಇಸ್ವಿಯಲ್ಲಿ ಮೊದಲಸಲ ಕಿರುತೆರೆಯಲ್ಲಿ ಉಣಾ ಪಾವುಸ್ ಎಂಬ ಸಿರಿಯಲ್ಲಿನಲ್ಲಿ ಕಾಣಿಸಿಕೊಂಡರು.

20 ವರ್ಷಗಳ ವೃತ್ತಿ ಬದುಕಿನಲ್ಲಿ ನಿಜಕ್ಕೂ ಬ್ರೇಕ್ ಕೊಟ್ಟಿದ್ದು ಮಹಾನಾಯಕ ಭೀಮರಾವ್ ಅಂಬೇಡ್ಕರ್ ಸೀರಿಯಲ್ ಪಾತ್ರ. ನೇಹಾ ಜೋಶಿ ಎಲ್ಲೆ ಹೋದರೂ ಅವರನ್ನು ಭೀಮಾಬಾಯಿ ಎಂದು ಗುರುತಿಸುತ್ತಾರೆ. ಹಾಗೆ ಕರೆದರೆ ನೇಹಾ ಜೋಷಿ ಖುಷಿ ಪಡುತ್ತಿದ್ದಾರೆ ಮತ್ತು ಹೆಮ್ಮೆಪಡುತ್ತಿದ್ದಾರೆ. ಮಹಾನಾಯಕ ಧಾರವಾಹಿ ನಿರ್ದೇಶಕ ಸುಶೀಲ್ ಕುಮಾರ್ ಶಿಂಧೆ ಭೀಮಾಬಾಯಿ ಪಾತ್ರಕ್ಕೆ ನೇಹಾ ಅವರನ್ನೆ ಆಯ್ಕೆ ಮಾಡಿಕೊಳ್ಳಲು ಕಾರಣ ಅವರು ರಂಗಭೂಮಿ ಕಲಾವಿದೆಯೆಂದು. ಅವರು ನಾಟ್ಯಶಾಸ್ತ್ರದಲ್ಲಿ ಬಿ.ಎ ಪದವಿ ಗಳಿಸಿದ್ದಾರೆ. ಬಾಬಾ ಸಾಹೇಬ್ ಅವರ ತಾಯಿ ಪಾತ್ರ ಮಾಡುವ ಮುನ್ನ ನೇಹಾ ಸಾಕಷ್ಟು ಪುಸ್ತಕಗಳನ್ನು ಓದಿದ್ದಾರೆ. ಅಲ್ಲದೆ ನಿರ್ದೇಶಕರೊಂದಿಗೆ ಚರ್ಚಿಸಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಬಾಲ ಭೀಮರಾವ್ ಆಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಆಯುಧ ಪದ್ಮಶಾಲಿ ಜೊತೆ ಅಕ್ಕರೆಯಿಂದ ಇರುತ್ತಾರೆ ಅಲ್ಲದೆ ಶೂಟಿಂಗ್ ಗಿಂತ ಮೊದಲು ಕಣ್ಣಾಮುಚ್ಚಾಲೆ ಆಡುತ್ತಾರೆ. ತಮ್ಮ ಕಂದನನ್ನು ಸಂತೈಸುವಂತೆ ಆಯುಧನನ್ನು ಸಂತೈಸುತ್ತಾರೆ. ನೇಹಾ ಜೋಶಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಪುಲೆಯವರ ಪಾತ್ರವನ್ನು ಮಾಡಿದ್ದಾರೆ. ಆ ಸಿರಿಯಲ್ ಸಹ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!