ಈ ಲೇಖನದ ಮೂಲಕ ಹುಣಸೆ ಹಣ್ಣಿನ ಉಪ್ಪಿನಕಾಯಿ ಅಥವಾ ಹುಣಸೆಹಣ್ಣು ತೊಕ್ಕು ಹೇಗೆ ಮಾಡುವುದು ಎನ್ನುವುದನ್ನು ನೋಡೋಣ. ಇದನ್ನು ಮಾಡಿಟ್ಟುಕೊಂಡು ನೀವು ಅನ್ನ ಅಥವಾ ಚಪಾತಿ ಜೊತೆಗೆ ಕೂಡ ಬಳಸಬಹುದು ಹಾಗೂ ಇದನ್ನು ಹೊರಗೆ ಒಂದು ತಿಂಗಳವರೆಗೂ ಶೇಖರಿಸಿಡಬಹುದು ಹಾಗೇ ಫ್ರಿಡ್ಜ್ ನಲ್ಲಿ 2 ರಿಂದ 3 ತಿಂಗಳುಗಳವರೆಗೆ ಇಟ್ಟುಕೊಳ್ಳಬಹುದು. ಮೊದಲು ಹುಣಸೆಹಣ್ಣಿನ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು ಏನು ಅನ್ನೋದನ್ನು ನೋಡೋಣ.
ಹುಣಸೆಹಣ್ಣಿನ ಉಪ್ಪಿನಕಾಯಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:- ಹುಣಸೆ ಹಣ್ಣು ಅರ್ಧ ಕಪ್, ಬೆಲ್ಲ ಅರ್ಧ ಕಪ್, ನೀರು ಒಂದು ಕಾಲ್ ಕಪ್ ( ಬೆಲ್ಲ ಮತ್ತು ಹುಣಸೆ ಹಣ್ಣು ಎರಡಕ್ಕೂ ಸೇರಿ)ಮೆಂತೆ ೧ ಟೀ ಸ್ಪೂನ್, ಜೀರಿಗೆ ೧ ಟೀ ಸ್ಪೂನ್, ಅಜವಾನ ೧ ಟೀ ಸ್ಪೂನ್,ಕೆಂಪು ಮೆಣಸಿನ ಕಾಯಿ ೬ – 7 ಸಾಸಿವೆ ಕಾಳು ೧ ಟೀ ಸ್ಪೂನ್, ಎಣ್ಣೆ ೨ ಟೀ ಸ್ಪೂನ್, ಕರಿಬೇವಿನ ಎಲೆ ೧೦ – ೧೫, ಇಂಗು ಕಾಲು ಟೀ ಸ್ಪೂನ್, ಅರಿಶಿಣ ಕಾಲು ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.
ಹುಣಸೆ ಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ :- ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬೀಜ ತೆಗೆದುಕೊಂಡ ಹುಣಸೆಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಕಪ್ ನೀರು ಹಾಕಿ 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಹುಣಸೆಹಣ್ಣನ್ನು ಮನೆಯಲ್ಲಿ ಇಟ್ಟು ಇನ್ನೊಂದು ಕಡೆ ಸ್ಟೌ ಮೇಲೆ ಪ್ಯಾನ್ ಇಟ್ಟುಕೊಂಡು ಮೇಲೆ ಹೇಳಿದ ಅಳತೆಯಲ್ಲಿ ಮೆಂತೆ ಕಾಳು ಜೀರಿಗೆ ಹಾಗೂ ಅಜವಾನ ಮೂರನ್ನು ಸಣ್ಣ ಉರಿಯಲ್ಲಿ ಎರಡು ಮೂರು ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಹಾಗೆ ನಂತರ ಕೆಂಪು ಮೆಣಸಿನಕಾಯಿಯನ್ನು ಕೂಡ ಹೊಡೆದುಕೊಳ್ಳಬೇಕು ಆದರೆ ಇದ್ಯಾವುದಕ್ಕೂ ಎಣ್ಣೆಯನ್ನು ಸೇರಿಸಬಾರದು. ಹುರಿದುಕೊಂಡಿರುವ ಮಸಾಲೆ ಪದಾರ್ಥಗಳನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
ನಂತರ ಇನ್ನೊಂದು ಪ್ಯಾನಿನಲ್ಲಿ ಬೆಲ್ಲ ಹಾಗೂ ಬೆಲ್ಲ ಕರಗಲು ಕಾಲು ಕಪ್ ಅಷ್ಟು ನೀರು ಹಾಕಿ ಬೆಲ್ಲವನ್ನು ಕರಗಿಸಿ ಕೊಳ್ಳಬೇಕು. ಹಾಗೆ ಬೆಲ್ಲ ಕರಗಿದ ನಂತರ ಈ ಸಮಯದಲ್ಲಿ ಬೆಲ್ಲದಲ್ಲಿ ಏನಾದರೂ ಕಸ ಇದ್ದರೆ ಅದನ್ನು ಸೋಸಿಕೊಳ್ಳಬೇಕು. ನಂತರ ಇನ್ನೊಂದು ಪ್ಯಾನ್ ಇಟ್ಟುಕೊಂಡು ಅದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ ಎಣ್ಣೆ ಬಿಸಿ ಮಾಡಿ ನಂತರ ಸಾಸಿವೆ ಕಾಳು ಹಾಕಿ ಬಿಸಿಯಾದ ನಂತರ ಇಂಗು ಹಾಗೆ ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು, ನಂತರ ಇದಕ್ಕೆ ನೆನಸಿಟ್ಟುಕೊಂಡ ಹುಣಸೆಹಣ್ಣನ್ನು ಹಾಗೂ ಅದರ ನೀರನ್ನು ಕೂಡ ಸೇರಿಸಿ ಸ್ವಲ್ಪ ಬಿಸಿ ಮಾಡಬೇಕು. ನಂತರ ಅರಿಶಿನ ಹಾಗೂ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 2 ರಿಂದ 3 ನಿಮಿಷಗಳ ಕಾಲ ಕುದಿಸಬೇಕು. ನಂತರ ಇದಕ್ಕೆ ಮೊದಲೇ ಮಾಡಿಟ್ಟುಕೊಂಡ ಉಪ್ಪಿನಕಾಯಿ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಟ್ಟಿಯಾಗಿ ಬರುವವರೆಗೆ ಎಣ್ಣೆ ಬಿಡುವವರೆಗೂ ಕಾಯಿಸಬೇಕು. ನಂತರ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಟ್ಟು ಉಪ್ಪಿನಕಾಯಿ ಪೂರ್ತಿ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಶೇಖರಿಸಿಟ್ಟುಕೊಳ್ಳಬಹುದು. ಈ ರೀತಿಯಾಗಿ ಹುಣಸೆಹಣ್ಣಿನಿಂದ ಉಪ್ಪಿನಕಾಯಿ ಮಾಡಿಟ್ಟುಕೊಂಡು ಪ್ರತಿದಿನ ಅನ್ನ ಅಥವಾ ಚಪಾತಿ ಜೊತೆ ಬಳಸಬಹುದು ಹಾಗೂ ಇದನ್ನು 2 ತಿಂಗಳವರೆಗೂ ಇಟ್ಟುಕೊಳ್ಳಬಹುದು.