ಸಾಮಾನ್ಯವಾಗಿ ಸಬ್ಬಕ್ಕಿ ಎಲ್ಲರಿಗೂ ಗೊತ್ತಿರಲೇಬೇಕಾದ ಒಂದು ವಿಶಿಷ್ಟವಾದ ಧಾನ್ಯ ಹೌದು ಸಬ್ಬಕ್ಕಿಯನ್ನು ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಹಲವಾರು ರೀತಿಯಾಗಿ ಬಳಸಿಕೊಳ್ಳುತ್ತೇವೆ, ಸಬ್ಬಕ್ಕಿಯಿಂದ ಮಾಡಿದ ಅಡುಗೆ ಪದಾರ್ಥಗಳೂ ಸಹ ಸವಿಯಲು ಬಹಳ ರುಚಿಯಾಗಿರುತ್ತವೆ. ಸಾಮಾನ್ಯವಾಗಿ ಸಬ್ಬಕ್ಕಿಯನ್ನು ಹಾಲು ಕೀರು ಮಾಡಲು ಹಪ್ಪಳಗಳನ್ನು ತಯಾರಿಸಲು ದೋಸೆ ಹಾಗೂ ಇಡ್ಲಿಯನ್ನು ಮಾಡಲು ಅಲ್ಲದೆ ಇನ್ನೂ ಆನೇಕ ಸಿಹಿ ತಿನಿಸುಗಳನ್ನು ಮಾಡಲು ಬಳಸಲಾಗುತ್ತದೆ.
ಹೆಚ್ಚಿನದಾಗಿ ಮಾರುಕಟ್ಟೆಯಲ್ಲಿ ಸಬ್ಬಕ್ಕಿಯ ಬೆಲೆ ಅಷ್ಟೇನೂ ಹೆಚ್ಚಿರುವುದಿಲ್ಲ ಆದರೆ ಕಡಿಮೆ ಬೆಲೆಯಲ್ಲಿ ಸಿಗುವ ಈ ಸಬ್ಬಕ್ಕಿಯನ್ನು ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಮತ್ತು ಪ್ರತಿನಿತ್ಯ ನಾವುಗಳು ಅದನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಂಬಂದಿಸಿದಂತೆ ಹಲವಾರು ಲಾಭಗಳನ್ನು ನಾವು ಪಡೆಯಬಹುದಾಗಿದೆ ಯಾಕಂದ್ರೆ ಸಬ್ಬಕಿಯು ಹಲವಾರು ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ ಅಲ್ಲದೇ ಪ್ರೊಟೀನ್ ಕ್ಯಾಲ್ಸಿಯಮ್ ಹಾಗೂ ಕಬ್ಬಿಣದ ಅಂಶಗಳು ಹೆರಳವಾಗಿರುತವೆಯಾದ್ದರಿಂದ ದೇಹಕ್ಕೆ ಬೇಕಾದಂತಹ ಉತ್ತಮ ಪೋಷಕಾಂಶಳನ್ನು ಒದಗಿಸುವಲ್ಲಿ ಇವು ನೆರವಾಗುತ್ತವೆ ಹಾಗಾದ್ರೆ ಸಬ್ಬಕ್ಕಿಯಿಂದ ಮನುಷ್ಯನ ದೇಹಕ್ಕೆ ಸಿಗುವ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಸಬ್ಬಕ್ಕಿಯನ್ನು ದಿನನಿತ್ಯದ ಅಡುಗೆಗಳಲ್ಲಿ ಬಳಸುವುದರಿಂದ ಮತ್ತು ಸೇವಿಸುವುದರಿಂದ ನಮ್ಮ ಮುಖವೂ ಬಿಳುಪಾಗುವಂತೆ ಮತ್ತು ಕಾಂತಿಯುತವಾಗುವಂತೆ ಅಲ್ಲದೆ ನಮ್ಮ ಕೂದಲು ಕಪ್ಪಾಗುವಂತೆ ಮಾಡಲು ಇದು ಸಹಕಾರಿಯಾಗುತ್ತದೆ ಸಬ್ಬಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಅದರೊಂದಿಗೆ ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖವೂ ಬಿಳುಪಾಗುವುದಲ್ಲದೆ ಮುಖದ ಕಾಂತಿಯು ಕೂಡ ಹೆಚ್ಚಾಗುತ್ತದೆ ಸಬ್ಬಕ್ಕಿಯ ಪುಡಿಯನ್ನು ಜೇನು ಮತ್ತು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ
ಸಬ್ಬಕ್ಕಿಯ ಪುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖವನ್ನು ಕಾಂತಿಯುತವಾಗಿಡಲು ಇದು ಸಹಾಯ ಮಾಡುತ್ತದೆ ಸಬ್ಬಕ್ಕಿಯ ಪುಡಿಯನ್ನು ಆಲೀವ್ ಆಯಿಲ್ ನೊಂದಿಗೆ ಮಿಶ್ರಣ ಮಾಡಿ ಆ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಘಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಕೂದಲುಗಳ ಉದುರುವ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ
ಸಬ್ಬಕ್ಕಿಯ ಪುಡಿಯನ್ನು ಮೊಸರು ಜೇನು ಮತ್ತು ರೋಸ್ ವಾಟರ್ ನೊಂದಿಗೆ ಮಿಶ್ರಣ ಮಾಡಿ ಆ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ನಿಮ್ಮ ಕೂದಲುಗಳು ಹೊಳೆಯುವಂತೆ ಮಾಡುತ್ತದೆ ಈ ಪುಡಿಯನ್ನು ಹಾಲು ಮತ್ತು ಜೇನಿನೊಂದಿಗೆ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚುವುದರಿಂದ ನಮ್ಮ ಚರ್ಮದಲ್ಲಿರುವ ಮೇಲಾನಿನ್ ಅಂಶ ಕ್ರಮೇಣ ಕಡಿಮೆಯಾಗಿ ಮುಖವೂ ಬಿಳುಪಾಗುತ್ತದೆ ಮತ್ತು ಸೂರ್ಯನ ಕಿರಣಗಳಿಂದ ಇದು ನಮ್ಮ ಚರ್ಮವನ್ನು ರಕ್ಷಿಸುತ್ತದೆ ಸಬ್ಬಕ್ಕಿಯ ಪುಡಿಯನ್ನು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ ಮುಖ ಸುಕ್ಕುಗಟ್ಟುವಿಕೆ ಕಡಿಮೆಯಾಗುತ್ತದೆ