ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಎಲ್ಲಿ ನೋಡಿದ್ರೂ ಅದರದ್ದೇ ಮಾತು. ಹಲವಾರು ಜನರು ಉತ್ತಮ ಫಲಿತಾಂಶ ಪಡೆದು ತೇರ್ಗಡೆ ಆಗಿದ್ದರೆ ಅವರಲ್ಲಿ 637ನೆ ರ್ಯಾಂಕ್ ಪಡೆದ ಶ್ರುತಿ ಅವರೂ ಕೂಡಾ ಒಬ್ಬರು. ಶ್ರುತಿ ಅವರು ತಮ್ಮ ಅಭ್ಯಾಸ , ಫಲಿತಾಂಶ ಹಾಗೂ ಅವರ ಮುಂದಿನ ಜೀವನದ ಬಗ್ಗೆ ಏನು ಹೇಳಿದ್ದಾರೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
ಶ್ರುತಿ ಅವರು ಮೊದಲ ಅಟೆಂಪ್ಟ್ ಅಲ್ಲಿಯೇ 637 ನೇ ರ್ಯಾಂಕ್ ಅಲ್ಲಿ ಪಾಸ್ ಆದವರು. ಮೂಲತಃ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಜಪಾರ್ಪಲ್ಲಿ ಗ್ರಾಮದವರು. ತಂದೆ ತಾಯಿ ಇಬ್ಬರೂ ಕೃಷಿಕರು. ಶ್ರುತಿ ಮೊದಲು ತಾನು ಯುಪಿಎಸ್ಸಿ ಪರೀಕ್ಷೆ ಬರೆಯುವುದಾಗಿ ಮನೆಯಲ್ಲಿ ತಿಳಿಸಿದಾಗ ಮನೆಯಲ್ಲಿ ನಿನ್ನಿಂದ ಆಗತ್ತಾ? ಅಂತ ಭಯ ಪಟ್ಟಿದ್ದರಂತೆ. ಆದರೂ ಕೂಡಾ ಮುಂದುವರೆದು ಮೊದಲು KPSC ಪರೀಕ್ಷೆ ಬರೆದು ಅದರಲ್ಲೂ ಕೂಡಾ ಮೊದಲ ಅಟೆಂಪ್ಟ್ ನಲ್ಲೇ ಪಾಸ್ ಆಗಿ ಕೊನೆಗೆ ಯುಪಿಎಸ್ಸಿ ಪರೀಕ್ಷೆಯನ್ನ ಬರೆದರು. ಮನೆಯವರ ಬೆಂಬಲ, ಸ್ನೇಹಿತರ ಪ್ರೋತ್ಸಾಹ, ಸಹಾಯ ಇವೆಲ್ಲದರ ಪರಿಣಾಮವಾಗಿ ಶ್ರುತಿ 637 ನೇ ರ್ಯಾಂಕ್ ಅಲ್ಲಿ ಪಾಸ್ ಆದರು. ಇವರದ್ದು ವೇಟರನರಿ ವಿಭಾಗ. ಇವರ ಸೀನಿಯರ್ ಕೂಡಾ ಇವರಿಗೆ ಅಭ್ಯಾಸದಲ್ಲಿ ತುಂಬಾ ಸಹಾಯ ಮಾಡಿದ್ದಾರೆ ಅಂತ ಶ್ರುತಿ ಹೇಳ್ತಾರೆ. ಡಾಕ್ಟರ್ ರಾಜಕುಮಾರ್ ಅಕಾಡಮೆಯಲ್ಲಿ ಶ್ರುತಿ ಕೋಚಿಂಗ್ ಪಡೆದಿದ್ದು, ಅಲ್ಲಿ ಇವರಿಗೆ ಉತ್ತಮ ರೀತಿಯ ಕೋಚಿಂಗ್ ದೊರಕಿದೆ.
ಇವರು ರಾಜಕುಮಾರ್ ಕೋಚಿಂಗ್ ಸೆಂಟರ್ ನಲ್ಲಿಯೇ KPSC ಕೋಚಿಂಗ್ ಕೂಡಾ ತೆಗೆದುಕೊಂಡಿದ್ದರು. KPSC ಆದನಂತರವೇ UPSC ಪರೀಕ್ಷೆಯನ್ನ ಬರೆದ ನಂತರ ಹಿಂದೆ ಓದಿದ್ದೂ ಕೂಡ ಈ ಪರೀಕ್ಷೆಗೆ ಸಹಾಯ ಆಯಿತು ಅಂತ ಹೇಳ್ತಾರೆ. UPSC ಪರೀಕ್ಷೆಗೆ ಮುನ್ನ ಸತತ 5 / 6 ತಿಂಗಳು ಓದಲು ಸಮಯ ಸಿಕ್ಕಿತ್ತು ಅದನ್ನ ಸದುಪಯೋಗ ಪಡಿಸಿಕೊಂಡಿದ್ದಾರೆ. ಪ್ರತೀ ದಿನ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕುಳಿತು ಅಭ್ಯಾಸ ಮಾಡುತ್ತಾ ಇದ್ದರು. ಇವರಿಗೆ ಶಿಕ್ಷಣ ಕ್ಷೇತ್ರಕ್ಕೆ ಸೇವೆ ಮಾಡಬೇಕು ಎನ್ನುವ ಹಂಬಲ ಇದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮುಂದಕ್ಕೆ ತರುವ ಗುರಿಯನ್ನು ಹೊಂದಿದ್ದಾರೆ. 637 ನೆ ರ್ಯಾಂಕ್ ನಲ್ಲಿ ಉತ್ತೀರ್ಣರಾದ ಶ್ರುತಿ ಅವರು ಮುಂದೆ ಕೂಡಾ ತನಗೆ IAS ಗೆ ಕೂಡಾ ತಯಾರಿ ನಡೆಸುತೇನೆ ಎಂದು ಕೂಡ ಹೇಳಿದ್ದಾರೆ.