ಪ್ರಕೃತಿ ನಮಗೆ ನೀಡಿರುವ ಆಹಾರಗಳಲ್ಲಿ ಮೀನೂ ಕೂಡಾ ಒಂದು. ಮೀನು ಮಾಂಸ ಪ್ರಿಯರಿಗೆ ಬಹಳ ಇಷ್ಟ. ಅದ್ರಲ್ಲೂ ಕರಾವಳಿ ಜನರಿಗೆ ಪಂಚಪ್ರಾಣ. ಮೀನಿನಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಹಕವಾರು ಪೋಷಕಾಂಶಗಳು ಇವೆ. ಮೀನಿನಲ್ಲಿ ಪ್ರೊಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರಾಸ್ಪರಸ್ ಅಂಶಗಳು ಇವೆ. ಕಬ್ಬಿಣ, ಸತು, ಪೊಟ್ಯಾಶಿಯಂ, ಮ್ಯಾಗ್ನಿಶಿಯಂ ಅಂತಹ ಖನಿಜ ವಸ್ತುಗಳೂ ಸಹ ಇವೆ. ಇವೆಲ್ಲವೂ ನಮ್ಮ ದೇಹದ ಸಮತೋಲವನ್ನು ಕಾಪಾಡಲು ಸಹಾಯ ಮಾಡತ್ತೆ. ನಮ್ಮ ದೇಹದ ಬೊಜ್ಜನ್ನು ಕರಾಗಿಸಲೂ ಸಹ ಸಹಾಯ ಮಾಡುತ್ತದೆ. ಇದು ನಮ್ಮ ದೇಹದ ಯಕೃತ್ ಸರಿಯಾಗಿ ಕಾರ್ಯ ನಿರ್ವಹಿಸಲು ಕೂಡಾ ಸಹಾಯ ಮಾಡತ್ತೆ. ನಿದ್ರಾ ಹೀನತೆಯನ್ನು ಕೂಡಾ ದೂರ ಮಾಡತ್ತೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡಾ ದೂರ ಮಾಡತ್ತೆ. ಹಾಗಾದ್ರೆ ಮೀನಿನಿಂದ ಇನ್ನೂ ಏನೇನು ಉಪಯೋಗ ಇವೆ ಅನ್ನೋದನ್ನ ನೋಡೋಣ.
ಪ್ರತೀ ದಿನ ಮೀನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಓಮೆಗ 3 ಅಂಶ ಮೀನಿನಲ್ಲಿ ಇರತ್ತೆ. ಅಲ್ಪೇಮರ್ ಕಾಯಿಲೆಯನ್ನ ದೂರ ಮಾಡತ್ತೆ. ಮೆದುಳಿನ ಆರೋಗ್ಯಕ್ಕೂ ಕೂಡ ಮೀನು ಒಳ್ಳೆಯದು. ನಿಯಮಿತವಾಗಿ ಮೀನು ಸೇವಿಸುವುದರಿಂದ ಮೆದು ಕ್ಷೀಣಿಸುವುದನ್ನು ತಡೆಯುತ್ತದೆ. ಮೀನು ತಿನ್ನುವುದರಿಂದ ಮಾನಸಿಕ ಖಿನ್ನತೆ ಕಾಣಿಸಿಕೊಳ್ಳುವುದಿಲ್ಲ. ಮೀನು ಮತ್ತು ಮೀನಿನ ಎಣ್ಣೆ ಖಿನ್ನತೆಯನ್ನ ದೂರ ಮಾಡಲು ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲೂ ಸಹಾಯ ಮಾಡತ್ತೆ.
ಮೀನಿನಲ್ಲಿ ವಿಟಮಿನ್ ಡಿ ಹೇರಳವಾಗಿ ಇರತ್ತೆ ಮೂಳೆಗಳ ಅರಿಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯ ಅದನ್ನ ಹೀರಿಕೊಳ್ಳಲು ವಿಟಮಿನ್ ಡಿ ಅಗತ್ಯ. ಹಾಗಾಗಿ ವಿಟಮಿನ್ ಡಿ ಕೊರತೆಯ ನಿವಾರಣೆಗೆ ನಿಯಮಿತವಾಗಿ ಮೀನು ಸೇವನೆ ಒಳ್ಳೆಯದು. ಹಾಗೆಯೇ ಮೀನಿನಲ್ಲಿ ಇರುವ ಒಮೆಗ 3 ಕೊಬ್ಬಿನ ಅಂಶವು ಕಣ್ಣಿನ ದೃಷ್ಟಿಯನ್ನು ಸರಿ ಮಾಡತ್ತೆ. ನಿಯಮಿತವಾಗಿ ಮೀನನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯನ್ನು ಚುರುಕು ಮಾಡಿಕೊಳ್ಳಬಹುದು. ನಿದ್ರಾಹೀನತೆ…. ಸರಿಯಾಗಿ ನಿದ್ದೆ ಬರದೆ ಇದ್ದರೆ ಕೂಡಾ ಮೀನನ್ನು ತಿನ್ನುವುದರಿಂದ ನಿದ್ರಾಹೀನತೆ ನಿವಾರಣೆ ಆಗತ್ತೆ. ಹೆಚ್ಚಾಗಿ ಮೀನು ತಿನ್ನುವ ಜನರ ಮೇಲೆ ನಡೆಸಿದ ರಿಸರ್ಚ್ ಇಂದಾಗಿ ಅವರು ಆರಾಮವಾಗಿ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಮೀನಿನಲ್ಲಿ ಇರುವ ವಿಟಮಿನ್ ಡಿ ಸರಾಗವಾಗಿ ನಿದ್ದೆ ಬರಲು ಸಹಾಯ ಮಾಡತ್ತೆ.
ಸಂಧಿವಾತದಿಂದ ಬಳಲುತ್ತಾ ಇರುವವರೂ ಕೂಡಾ ನಿಯಮಿತವಾಗಿ ಮೀನು ಸೇವನೆ ಮಾಡಬೇಕು. ಇದು ಗಂಟುಗಳ ಉರು ವಾತ ಆಗಿದ್ದು ಪ್ರತಿ ದಿನ ನಿಯಮಿತವಾಗಿ ಮೀನು ಸೇವನೆ ಮಾಡುವುದರಿಂದ ಇದರಿಂದ ನೋವು ಮತ್ತು ಊತ ಕಡಿಮೆ ಆಗತ್ತೆ. ಹಾಗೆಯೇ… ದೇಹದಲ್ಲಿ ಇರುವ ಕೊಬ್ಬಿನ ಮಟ್ಟವನ್ನು ಇಳಿಸುವಲ್ಲಿ ಮೀನು ತುಂಬಾ ಸಹಾಯ ಮಾಡತ್ತೆ. ಮೀನಿನಲ್ಲಿ ಇರುವ ಒಮೆಗ 3 ಅಂಶವು ಮಾನವ ದೇಹದಲ್ಲಿ ಇರುವ ಕೆಟ್ಟ ಕೊಬ್ಬಿನ ಅಂಶವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹದ ನಿವಾರಣೆಗೆ ಮೀನು ಉತ್ತಮ ಔಷಧಿ. ಮೀನಿನಲ್ಲಿ ಇರುವ ಉನ್ನತ ಮಟ್ಟದ ವಿಟಮಿನ್ ಡಿ ಮನುಷ್ಯ ದೇಹದಲ್ಲಿ ಇರುವ ಗ್ಲುಕೋಸ್ ನ ಚಯಾಪಚಯ ಕ್ರಿಯೆಗೆ ಸಹಾಯ ಮಾಡತ್ತೆ. ಹಾಗೆಯೇ….. ಋತು ಚಕ್ರದ ಸಮಸ್ಯೆಗೆ… ಮೀನಿನಲ್ಲಿ ಇರುವಂತಹ ಅಂಶಗಳು ಮಹಿಳೆಯರಲ್ಲಿ ಕಾಣುವಂತಹ ಋತುಚಕ್ರದ ಸಮಸ್ಯೆಗಳನ್ನು ದೂರ ಮಾಡತ್ತೆ. ಋತು ಚಕ್ರದ ಮೊದಲ ಸಮಸ್ಯೆ ಕಾಣುವಂತಹ ಮಹಿಳೆಯರು ನಿಯಮಿತವಾಗಿ ಮೀನು ಸೇವನೆ ಮಾಡುವುದು ಒಳ್ಳೆಯದು. ಮೀನಿನಲ್ಲಿ ಇರುವ ಒಮೆಗ 3 ಕೊಬ್ಬಿನ ಅಂಶವು ಇಂತಹ ಸಮಸ್ಯೆಗಳು ಮತ್ತೆ ಬರದಂತೆ ನೋಡಿಕೊಳ್ಳುತ್ತೇ. ಪ್ರತಿನಿತ್ಯ ಅಲ್ಲದೆ ಹೋದರು ವಾರಕ್ಕೆ ಎರಡು ಬಾರಿ ಆದರೂ ನಿಯಮಿತವಾಗಿ ಮೀನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಇಷ್ಟೆಲ್ಲ ಲಾಭಗಳು ಇವೆ.