ನಾವು ಹುಟ್ಟುವಾಗ ಒಬ್ಬರಾಗಿ ಭೂಮಿಗೆ ಬರುತ್ತೇವೆ. ಹಾಗೆಯೇ ನಾವು ಸಾಯುವಾಗ ಒಬ್ಬರೇ ಮೇಲೆ ಹೋಗುತ್ತೇವೆ. ನಮ್ಮ ಸಾವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ನೋವನ್ನು ಯಾರೂ ಮರೆಸಲು ಸಾಧ್ಯವಿಲ್ಲ. ಒಂದು ಹಂತದಲ್ಲಿ ಕಷ್ಟದ ವರೆಗೆ ನಮಗೆ ನಮ್ಮವರು ಸಹಾಯ ಮಾಡಲು ಸಾಧ್ಯ. ಆದರೆ ಮುಂದಿನ ದಾರಿಯನ್ನು ನಾವೇ ಹುದುಕಿಕೊಳ್ಳಬೇಕು. ನಾವೇ ಹೋರಾಡಬೇಕು. ಏಕೆಂದರೆ ಜೀವನ ಎನ್ನುವುದೇ ಪ್ರತಿಕ್ಷಣದ ಹೋರಾಟವಾಗಿದೆ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ ಸ್ವಂತ ದಾರಿಯನ್ನು ಹುಡುಕಿಕೊಂಡು ಎಷ್ಟೋ ಜನರಿಗೆ ದಾರಿದೀಪವಾದ ಒಂದು ಮಹಿಳೆಯ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಉತ್ತರಪ್ರದೇಶದ ಮಹಿಳೆ ಕೃಷ್ಣಯಾದವ್ ಗೆ ಇಬ್ಬರು ಮಕ್ಕಳು.ಜೀವನೋಪಾಯಕ್ಕಾಗಿ ಮನೆಯಲ್ಲಿ ಉಪ್ಪಿನಕಾಯಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಏನೂ ಲಾಭ ಸಿಗಲಿಲ್ಲ.ಇದರಿಂದ ಉದ್ಯೋಗವನ್ನು ಹುಡುಕಿಕೊಂಡು ಇವರ ಗಂಡ ತನ್ನ ಕುಟುಂಬವನ್ನು ಕರೆದುಕೊಂಡು ದೆಹಲಿಗೆ ಬಂದು ನೆಲೆಸಿದರು.
ಕೃಷ್ಣಯಾದವ್ ಒಂದು ಸಂಸ್ಥೆಯಲ್ಲಿ ಅಡುಗೆ ತಯಾರಿ ಬಗ್ಗೆ ತರಬೇತಿ ಪಡೆದರು. ಆದರೆ ಯಾವುದೇ ಕೆಲಸ ಸಿಗಲಿಲ್ಲ.ಇದರಿಂದ ಮತ್ತೆ ಉಪ್ಪಿನಕಾಯಿ ಮಾಡಿ ಮಾರಾಟ ಮಾಡೋಣ ಎಂದು ಶುರು ಮಾಡಿದರು.ಆದರೆ100 ರೂಪಾಯಿಗಳು ಕೂಡ ಇರಲಿಲ್ಲ. ಸ್ನೇಹಿತರ ಬಳಿ ೫೦೦ ರೂಪಾಯಿ ಸಾಲ ಪಡೆದರು.
ಅದು ಸಾಲದ್ದಕ್ಕೆ ಮತ್ತೆ ೩೦೦೦ ರೂಪಾಯಿಗಳ ಸಾಲ ಪಡೆದು ಉಪ್ಪಿನಕಾಯಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಂಡು ಬಂದರು.ಅದರಿಂದ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲು ಶುರು ಮಾಡಿದರು. ಅಲ್ಲೇ ಮನೆಯ ಪಕ್ಕದಲ್ಲೇ ಸುತ್ತಮುತ್ತ ಮಾರಾಟ ಮಾಡಲು ಶುರು ಮಾಡಿದರು.
ಇದರಿಂದ 5250ರೂಪಾಯಿಗಳು ಲಾಭ ಬಂತು. ಆ ಲಾಭವನ್ನು ಬಂಡವಾಳ ಮಾಡಿಕೊಂಡು ಇವರು ಅದರಿಂದ ಉಪ್ಪಿನಕಾಯಿ ಸಾಮಗ್ರಿಗಳನ್ನು ತಂದು ಮತ್ತೆ ಪ್ಯಾಕ್ ಮಾಡಿ ಮಾರಾಟ ಮಾಡಿದರು.ಹಂತ ಹಂತವಾಗಿ ಬೆಳೆದ ಇವರು ಮತ್ತೆ ತಿರುಗಿ ನೋಡಲಿಲ್ಲ.
ಅದನ್ನೇ ಮುಂದುವರೆಸಿ ಮಾರುಕಟ್ಟೆಗೆ ಬಿಟ್ಟರು.ಒಳ್ಳೆಯ ಲಾಭ ಬರತೊಡಗಿತು.ದಿನೇ ದಿನೇ ಇದಕ್ಕೆ ಬೇಡಿಕೆ ಹೆಚ್ಚಾಯಿತು. “ಶ್ರೀಕೃಷ್ಣ ಪಿಕ್ಕಲ್ಸ್”ಎಂಬ ಕಂಪನಿ ತೆರೆದ ಇವರು ಸುಮಾರು 400 ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದಾರೆ.ಈಗಲೂ ಉಪ್ಪಿನಕಾಯಿ ಮಾರಾಟ ಮಾಡುತ್ತಾ ದೆಹಲಿಯಲ್ಲಿ ದೊಡ್ಡ ಉದ್ಯಮಿಯಾಗಿ ನಿಂತಿದ್ದಾರೆ ಆಕೆ ಮತ್ತು ಅವಳ ಗಂಡ.
ಈಕೆಯ ಪ್ರತಿಭೆಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಬಂದಿವೆ. ಸ್ವಲ್ಪ ಮಟ್ಟಿಗೆ ಓದಿರುವ ಇವರು ಈಗ ಕೋಟಿ ಕೋಟಿ ಹಣ ಪಡೆದು ಇತರ ಮಹಿಳೆಯರಿಗೆ ಮಾದರಿ ಆಗಿದ್ದಾರೆ. ಕಷ್ಟ ಎಂದು ಎದೆಗುಂದದೆ ತನಗೆ ಗೊತ್ತಿರುವ ವಿಚಾರದಿಂದಲೇ ಬೆಳೆದು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ.ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ.