ಕೇಂದ್ರ ಸರ್ಕಾರ ಬಡವರಿಗೆ ಅಂದರೆ, ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಒಂದು ಒಳ್ಳೆಯ ಸುದ್ದಿಯನ್ನ ನೀಡಿದೆ. ಅದು ಏನು ಅಂತ ನೋಡೋಣ. ಇಡೀ ದೇಶವೇ ಈಗ ಲಾಕ್ ಡೌನ್ ಆಗಿರುವುದು ಎಲ್ಲರಿಗೂ ತಿಳಿದಿದೆ. ಇದೆ ಕಾರಣದಿಂದಾಗಿ ಬಡವರು ಮತ್ತು ದಿನಗೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಆದಾಯ ಇಲ್ಲದೆ ಹಸಿವಿನಿಂದ ಕಂಗಾಲಾಗಿದ್ದಾರೆ. ಹಾಗಾಗಿ ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಸರ್ಕಾರ ಮೂರು ತಿಂಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಅನ್ನು ತುಂಬಿಸಿಕೊಡುತ್ತಾ ಇದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ಗ್ಯಾಸ್ ಅನ್ನು ವಿತರಣೆ ಮಾಡಲಾಗಿತ್ತು. ಬಡವರಿಗೆ ಉಪಯೋಗ ಆಗುವ ದೃಷ್ಟಿಯಿಂದ ಕೇಂದ್ರ ಸರ್ಕಾರದಿಂದ ಏಪ್ರಿಲ್ ಒಂದರಿಂದ ಜೂನ್ ಮೂವತ್ತರವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ.
ಉಚಿತವಾಗಿ ಸಿಲಿಂಡರ್ ಪಡೆದುಕೊಳ್ಳಲು, ಓಎಂಸಿ ಸಾಫ್ಟ್ವೇರ್ ಬಳಸಿ ಪಡೆಯಬಹುದು. ತುಂಬಾ ಸುಲಭವಾಗಿ ಹೇಳುವುದಾದರೆ ನೀವು ಇಷ್ಟು ದಿನಗಳವರೆಗೆ ಹೇಗೆ ಸಿಲಿಂಡರ್ ಬುಕ್ ಮಾಡಿ ಪಡೆಯುತ್ತಿದ್ದರೋ ಹಾಗೆ ಬುಕ್ ಮಾಡಿ ಪಡೆಯುವುದು. ಆದರೆ ಈ ಮೊದಲಿಂತೆಯೇ ಗ್ಯಾಸ್ ಸಿಲಿಂಡರ್ ಅನ್ನು ಬ್ಯಾಂಕ್ ಲಿಂಕ್ ಇರುವ ಮೊಬೈಲ್ ಮೂಲಕ ಎಸ್ಎಮ್ಎಸ್ ಮಾಡಿ ಬುಕ್ ಮಾಡುವ ಮೂಲಕ ಎಲ್ಪಿಜಿ ಗ್ಯಾಸ್ ಸೇವೆಯನ್ನು ಪಡೆಯಬಹುದು. ಗ್ರಾಹಕರಿಗೆ ಸಿಲಿಂಡರ್ ತಲುಪಿದ ಕೂಡಲೇ ವಿತರಕರಿಗೆ ಒಂದು ಮೆಸೇಜ್ ತಲುಪುತ್ತದೆ. ಇದಾದ ನಂತರ ಏಳು ದಿನಗಳ ನಂತರ ಸಿಲಿಂಡರ್ ಅನ್ನು ಪಡೆಯಬಹುದು.
ಆದರೆ ಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ, ನೀವು ಗ್ಯಾಸ್ ಬುಕ್ ಮಾಡಿ ಸಿಲಿಂಡರ್ ಪಡೆದ ನಂತರ ವಿತರಕರಿಗೆ ಅದರ ಹಣವನ್ನು ನೀಡಬೇಕು. ಹಣ ಕೊಡ್ಬೇಕು ಅಂದ್ರೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹೇಗೆ ಸಿಗತ್ತೆ ಅಂತ ಪ್ರಶ್ನೆ ಬರಬಹುದು. ಹೇಗೆ ಅಂದರೆ, ನೀವು ಸಿಲಿಂಡರ್ ಪಡೆಯುವಾಗ ವಿತರಕರಿಗೆ ಹಣ ಪಾವತಿ ಮಾಡಬೇಕು ನಂತರ ಹದಿನೈದು ದಿನಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಅವರು ನೀವು ನೀಡಿದ ಹಣವನ್ನ ಮರು ಪಾವತಿ ಮಾಡುತ್ತಾರೆ. ನಿಮ್ಮ ಹಣ ನಿಮಗೆ ಹಿಂದಿರುಗಿ ಬ್ಯಾಂಕ್ ಖಾತೆಗೆ ಬಂದು ತಲುಪುವುದರ ಮೂಲಕ ನಿಮಗೆ ಸಿಗತ್ತೆ. ಇದು ಹೇಗೆ ನಡೆಯುತ್ತೆ ಅಂದರೆ, ನೀವು ಗ್ಯಾಸ್ ಸಿಲಿಂಡರ್ ಪಡೆಯುವಾಗ ವಿತರಕರಿಗೆ ಹಣವನ್ನ ನೀಡಿರುತ್ತೀರ ಅದನ್ನ ಅವರು ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ. ಅದಾದ ನಂತರ ನೀವು ಎಷ್ಟು ಹಣವನ್ನ ನೀಡಿರುತ್ತಿರೋ ಅಷ್ಟೇ ಹಣವನ್ನ ಸರ್ಕಾರ ತನ್ನ ಖಾತೆಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನ ವರ್ಗಾವಣೆ ಮಾಡುತ್ತದೆ. ಹೀಗೆ ಈ ರೀತಿಯಾಗಿ ಮೂರು ತಿಂಗಳುಗಳ ಕಾಲ ನಿಮಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ.