ಓದು ಮುಗಿಸಿ ಏನಾದರೂ ಸಾಧಿಸಬೇಕು ಎನ್ನುವುದರ ಬದಲು ಓದುವಾಗಲೇ ಸಾಧಿಸಬೇಕು ಎನ್ನುವ ಛಲಕ್ಕೆ ಬಿದ್ದು ನಮ್ಮ ದೇಶದ ಜನ ಅಲ್ಲದೇ ಬೇರೆ ದೇಶದವರು ಮೆಚ್ಚುವಂತಹ ಕೆಲಸ ಮಾಡಿದ 16ವರ್ಷದ ಹುಡುಗಿಯ ಕಥೆ ಇದು. ಒಂದು ಎ.ಸಿ ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರು 25,000 ರೂಪಾಯಿಗಳು ಬೇಕು. ಆದರೆ ಈ ಹುಡುಗಿ 1800ರೂಪಾಯಿ ಖರ್ಚು ಮಾಡಿ ಎ.ಸಿಯನ್ನು ಕಂಡುಹಿಡಿದಿದ್ದಾಳೆ. ಅದು ಹೇಗೆ ಎಂದು ನೋಡೋಣ ಬನ್ನಿ.

ಉತ್ತರ ಪ್ರದೇಶದ ಝಾನ್ಸಿ ಎಂಬ ಊರಿನ 16ವರ್ಷದ ಕಲ್ಯಾಣಿ ಹತ್ತಿರದ ಲೋಕಮಾನ್ಯ ತಿಲಕ್ಕಾ ಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದಾಳೆ. ಈಕೆಯ ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರು. ಯಾವಾಗಲೂ ವಿಭಿನ್ನವಾಗಿ ಆಲೋಚಿಸುತ್ತಿದ್ದ ಕಲ್ಯಾಣಿ ಕಡಿಮೆ ಬೆಲೆಯಲ್ಲಿ ಎ.ಸಿ ತಯಾರಿಸಬೇಕು ಎಂದು ಪ್ಲಾನ್ ಮಾಡಿದಳು. ಅದರಂತೆ 12ವೋಲ್ಟ್ ಡಿಸಿ ಫಾನ್, ಐಸ್ ಬಾಕ್ಸ್ ಸಿಸ್ಟಮ್ ಹಾಗೂ ಥರ್ಮಕೋಲ್ ಬಳಸಿ ಕೇವಲ 1800 ರೂಪಾಯಿಗಳಿಗೆ ಎ.ಸಿ ತಯಾರಿಸಿದ್ದಾಳೆ ಕಲ್ಯಾಣಿ.ಅಷ್ಟೇ ಅಲ್ಲದೆ ಇದಕ್ಕೆ ಕರೆಂಟ್ ಬೇಕಾಗಿಲ್ಲ. ಸೂರ್ಯನ ಶಾಖದಿಂದಲೇ ಎಸಿ ಚಾರ್ಜ್ ಆಗುತ್ತದೆ.

ಸೂರ್ಯನ ಶಕ್ತಿಯಿಂದ ಎಸಿ ರನ್ ಆಗುತ್ತದೆ. ರೂಮಿನಲ್ಲಿ ಕುಳಿತುಕೊಂಡು ಅರ್ಧಗಂಟೆಯ ಕಾಲ ಒನ್ ಮಾಡಿದರೆ ಸಾಕು 5ಡಿಗ್ರಿ ಟೆಂಪರೇಚರ್ ಇಳಿದುತಂಪಾಗುತ್ತದೆ. ಕಲ್ಯಾಣಿ ತಯಾರಿಸಿರುವ ಈ ಎಸಿಯನ್ನು ಅಭಿವೃದ್ಧಿ ಮಾಡಿದರೆ ಬೇಸಿಗೆಯಲ್ಲಿ ಸೆಕೆ ಆದಾಗ ಬೆವರು ಸುರಿಸುವ ಬದಲು ಇದನ್ನು ಬಳಸಬಹುದಾಗಿದೆ.

ಈ ಹುಡುಗಿಯ ಚಾತುರ್ಯ ನೋಡಿ ಜಪಾನ್ ಹಾಗೂ ಬೇರೇ ದೇಶಗಳು ಆ ದೇಶಗಳ ಸೆಮಿನಾರ್ ನೀಡುವಂತೆ ಆಹ್ವಾನ ನೀಡಿವೆ. ಅಷ್ಟೇ ಅಲ್ಲದೇ ಕಲ್ಯಾಣಿಯ ಐಡಿಯಾ ಬಗ್ಗೆ ವಿದೇಶಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿವೆ. ಒಂದು ವಸ್ತುವನ್ನು ತಯಾರಿಸಿದ ಮೇಲೆ ಇಷ್ಟೇನಾ ಎಂದು ಜನ ಮಾತನಾಡುತ್ತಾರೆ. ಆದರೆ ಅವರ್ಯಾರೂ ತಯಾರಿಸುವ ಉಸಾಬರಿಗೆ ಹೋಗುವುದಿಲ್ಲ. ಕಲ್ಯಾಣಿಕಂಡು ಹಿಡಿದ ಎಸಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿದ್ದು ಈ ವಿನೂತನ ಆಲೋಚನೆಗೆ 50 ಬಹುಮಾನಗಳು ಕಲ್ಯಾಣಿ ಕ್ಯೆ ಸೇರಿವೆ. ಈ ಹುಡುಗಿ ಒಳ್ಳೆಯ ಸಿಂಗರ್ ಕೂಡ ಆಗಿದ್ದು ಇಂತಹ ಪ್ರತಿಭೆಗಳಿಗೆ ಬಹುಮಾನಕ್ಕಿಂತಲೂ ಹೆಚ್ಚಾಗಿ ನಮ್ಮೆಲ್ಲರ ಪ್ರೋತ್ಸಾಹ ಬೇಕಿದೆ. ನಾವೆಲ್ಲರೂ ಇಂತಹಪ್ರತಿಭೆಗಳಿಗೆ ಪ್ರೋತ್ಸಾಹ ನೀಡೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!