ಚೇಳಿನ ವಿಷ ನಿವಾರಣೆ ಅಥವಾ ಕೇವಿಯಲ್ಲಿ ಹುಣ್ಣು ಸಮಸ್ಯೆ ಇದ್ರೆ ಉದ್ದಕ್ಕೆ ತುಳಸಿ ಗಿಡ ಹೇಗೆ ಸಹಕಾರಿ ಅನ್ನೋದನ್ನ ಇಲ್ಲೊಮ್ಮೆ ತಿಳಿಯೋಣ. ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತಗೆದು, ಚೇಳು ಕುಟುಕಿದ ಜಾಗಕ್ಕೆ ಲೇಪಿಸುವುದರಿಂದ ಚೇಳಿನ ವಿಷ ನಿವಾರಣೆಯಾಗುವದು. ಇನ್ನು ಕಿವಿಯೊಳಗೆ ಹುಣ್ಣು ಆಗಿದ್ದರೆ ತುಳಸಿ ಎಲೆಯ ರಸವನ್ನು ತಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದರಿಂದ ಶೀಘ್ರವೇ ಶಮನವಾಗುವುದು.
ಜ್ವರಕ್ಕೆ ತುಳಸಿ: ಮಲೇರಿಯಾ ಜ್ವರಕ್ಕೆ ಕೃಷ್ಣಾ ತುಳಸಿ ಸೊಪ್ಪಿನ ರಸವನ್ನು ತಗೆದು ಮೈಗೆ ತಿಕ್ಕಿ ಮಾಲೀಶು ಮಾಡುವುದರಿಂದ ಚಳಿ ನಿಲ್ಲುವುದು, ಹಾಗು ತುಳಸಿ ರಸವನ್ನು ಕಾಳು ಮೆಣಸಿನ ಚೂರ್ಣ ಸೇರಿಸಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.
ಕೆಮ್ಮು: ಜ್ವರದಿಂದ ಕೊಡಿದ ಕೆಮ್ಮಿಗೆ ತುಳಸಿ ರಸವನ್ನು ಕಾಳು ಮೆಣಸಿನ ಚೂರ್ಣವನ್ನು ಸೇರಿಸುವುದರಿಂದ ಕೆಮ್ಮು ಗುಣವಾಗುವುದು. ಮೈ ಕೈ ನೋವು ನಿವಾರಣೆಗೆ ಒಂದು ಲೋಟ ನೀರಿನಲ್ಲಿ ಹತ್ತು ತುಳಸಿ ಎಲೆಗಳನ್ನು ಹಾಕಿ ಚನ್ನಾಗಿ ಕುದಿಸಿ, ಆ ನೀರು ಛಂನ್ನಾಗಿ ಕುದಿದು ಅರ್ಧ ಲೋಟ ಆದ ಮೇಲೆ ಸೋಸಿಕೊಳ್ಳುವದು, ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವದು. ಮೈ ಕೈ ನೋವು ನಿಲ್ಲುವವರೆಗೆ ಪ್ರತಿದಿನ ಈ ಕಷಾಯವನ್ನು ಬಳಸುವುದು.
ಕಫ ನಿವಾರಣೆಗೆ ತುಳಸಿ: ಕಫ ಸಮಸ್ಯೆಗಳಿಗೆ ತುಳಸಿ ಹೂವುಗಳನ್ನು ಈರುಳ್ಳಿ ರಸ ಶುಂಠಿರಸ ಮತ್ತು ಜೇನುತುಪ್ಪದೊಂದಿಗೆ ಬೆರಸಿ ಸೇವಿಸಿದರೆ ಶಮನವಾಗುವುದು. ಹೀಗೆ ಹತ್ತಾರು ಲಾಭಗಳನ್ನು ತುಳಸಿ ಗಿಡದಿಂದ ಪಡೆಯಬಹುದಾಗಿದೆ.