ಹಿತ್ತಲಗಿಡ ಮದ್ದಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಂದು ಗಿಡ ಇದೆ. ಅದು ಸಾಕಷ್ಟು ರೋಗಗಳಿಗೆ ಸಂಜೀವಿನಿ.ಅದನ್ನ ಮ್ಯಾಜಿಕ್ ಗಿಡ ಅಂತನೂ ಕರಿತಾರೆ. ಅಗಿಡ ಯಾವುದು ಅಂದ್ರೆ ಮುಟ್ಟಿದರೆ ಮುನಿ ಎನ್ನುವ ಗಿಡ.
ನೋಡೊದಕ್ಕೆ ಹುಣಸೆ ಎಲೆ ಸಸ್ಯದಂತೆ ಕಾಣುವ ಎಲೆಗಳು ಮುಟ್ಟಿದರೆ ಮುಚ್ಚಿಕೊಂಡು ಬಿಡುತ್ತದೆ.ಇದು ಈ ಗಿಡದ ಸಂವೇದನಾಶೀಲತೆಗೆ ಸಾಕ್ಷಿ. ನಿಮಗೆ ಗೊತ್ತಿರಲಿ. ಮುಟ್ಟಿದ್ರೆ ಮುನಿ ಸಸ್ಯವು ಹಲವಾರು ಔಷಧಿಯ ಗುಣಹೊಂದಿದೆ. ಇದರ ಎಲೆ, ಕಾಂಡ, ಬೇರು ಪ್ರತಿಯೊಂದು ಔಷಧವೇ.
ಗಂಟಲಬಾವು, ಇನ್ನಿತರ ಊತದ ಸಮಸ್ಯೆಗಳಿದ್ದಾಗ ಮುಟ್ಟಿದ್ರೆ ಮುನಿ ಸಸ್ಯದ ಕಾಂಡ, ಎಲೆ ,ಬೇರು, ಮುಳ್ಳಿನ ಸಮೇತ ಅರೆದು ಬಾವು ಬಂದಿರುವ ಜಾಗಕ್ಕೆ ಪಟ್ಟು ಹಾಕಿದ್ರೆ.ಮೂರು ನಾಲ್ಕು ಗಂಟೆಗಳಲ್ಲಿ ಊತ ಬಾವು ಇಳಿದು ಹೋಗುತ್ತದೆ.
ಇದರ ಎಲೆ ಮತ್ತು ಬೇರುಗಳನ್ನ ಚೆನ್ನಾಗಿ ಅರೆದು ಕುಡಿಯುವುದರಿಂದ ಮಲಬದ್ಧತೆ, ಮೂತ್ರಪಿಂಡ, ಕರುಳಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ಮಂಡಿಯಲ್ಲಿ ತೀವ್ರ ನೋವು ಅಥವಾ ಬಾವು ಕಾಣಿಸಿಕೊಂಡರೆ ಮುಟ್ಟಿದರೆ ಮುನಿ ಗಿಡದ ಸೊಪ್ಪನ್ನು ಅರೆದು ಹಚ್ಚಿ ನೋಡಿ ಬಾವು ಮಾಯವಾಗುತ್ತದೆ.
ರಕ್ತದ ಗಾಯಗಳಾಗಿದ್ದರೆ ಈ ಸಸ್ಯದ ರಸವನ್ನು ಲೇಪನ ಮಾಡಿ , ಅಲ್ಲದೆ ಸಾಮಾನ್ಯವಾದ ಶೀತಕ್ಕೆ ಈ ಗಿಡದ ಎಲೆಗಳ ಕಶಾಯ ಮಾಡಿ ಕುಡಿದರೆ ಸಮಸ್ಯೆಗಳು ನಿವಾರಣೆ ಯಾಗುತ್ತದೆ.
ಮುಟ್ಟಿದರೆ ಮುನಿ ಗಿಡದ ಈ ಅಂಶಗಳು ದೇಹಕ್ಕೆ ಸಂಜೀವಿನಿ ಯಂತೆ ಕೆಲಸ ಮಾಡುತ್ತದೆ.