ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಿರ ವರೆಗೂ ಆಯಸ ವಿಲ್ಲದೆ ತಿನ್ನಬಹುದಾದಂತಹ ಒಂದು ಹಣ್ಣು ಎಂದರೆ ಅದು ಬಾಳೆ ಹಣ್ಣು. ಹೌದು ಬಾಳೆ ಹಣ್ಣನ್ನು ತಿನ್ನಲೂ ಕೂಡ ಯಾವುದೇ ಶ್ರಮ ಬೇಕಾಗಿಲ್ಲ ಮತ್ತು ಅದು ಜೀರ್ಣವಾಗಲೂ ಸಹ ಯಾವುದೇ ಶ್ರಮವಿಲ್ಲ, ಇದು ತಿಂದಂತಹ ಆಹಾರವನ್ನು ಬಹಳ ಬೇಗ ಜೀರ್ಣವಾಗಿಸಿಕೊಳ್ಳಲು ಮನುಷ್ಯನ ಜೀರ್ಣ ಕ್ರಿಯೆಗೆ ಸಹಾಯಕವಾಗಿರುತ್ತದೆ. ಇನ್ನೂ ಬಾಳೆಹಣ್ಣಿನಲ್ಲಿ ಸುಕ್ರೋಸ್ ಫೃಕ್ಟೊಸ್ ಗ್ಲುಕೋಸ್ ಎಂಬ ಮೂರು ನೈಸರ್ಗಿಕ ಸಕ್ಕರೆ ಅಂಶದಿಂದ ಕೂಡಿದ ಫೈಬರ್ ಗಳು ಇರುತ್ತವೆ.
ಬಾಳೆ ಹಣ್ಣಿಗೆ ಆರೋಗ್ಯಕಾರಿಯಾಗಿಯೂ ಅಲ್ಲದೆ ಧಾರ್ಮಿಕವಾಗಿಯೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ ಆದ್ದರಿಂದಲೇ ಎಲ್ಲರೂ ಬಾಳೆ ಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತಾರೆ, ಬಾಳೆ ಹಣ್ಣು ಎಷ್ಟು ಮುಖ್ಯವೋ ಬಾಳೆಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದೂ ಸಹ ಆರೋಗ್ಯಕ್ಕೆ ಅಷ್ಟೇ ಉಪಯೋಗಕಾರಿಯಾದದ್ದು. ಆದ್ದರಿಂದಲೇ ಕೆಲವರು ಬಾಳೆಹಣ್ಣನ್ನು ಸಿಪ್ಪೆ ಸಮೇತ ತಿನ್ನುತ್ತಾರೆ ಹಾಗಾದ್ರೆ ಸಿಪ್ಪೆ ಸಮೇತ ಬಾಳೆ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯಕಾರಿ ಲಾಭಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಬಾಳೆ ಹಣ್ಣನ್ನು ತಿನ್ನುವುದರಿಂದ ಎದೆ ಉರಿಯು ಶಮನವಾಗುತ್ತದೆ ಅಲ್ಲದೇ ಅಜೀರ್ಣತೆಯನ್ನು ಕಡಿಮೆ ಮಾಡಲು ಮತ್ತು ವಿರುದ್ಧ ದಿಕ್ಕಿನತ್ತ ತಿರುಗಿಸಲು ಬಾಳೆ ಹಣ್ಣು ಒಂದು ಉತ್ತಮ ಮನೆ ಮದ್ದು ಕೂಡ ಹೌದು ಇನ್ನೂ ಎಲ್ಲಕ್ಕೂ ಹೆಚ್ಚಾಗಿ ಚುಕ್ಕೆ ಬಿದ್ದ ಸಿಪ್ಪೆಯ ಬಾಳೆಹಣ್ಣನ್ನು ತಿನ್ನುವುದರಿಂದ ಅದರಲ್ಲಿರುವ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ ಎಂಬ ಪೋಷಕಾಂಶವಿದ್ದು, ಇದು ಕಕ್ತದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ಮತ್ತು ದೇಹದಲ್ಲಿನ ಕ್ಯಾನ್ಸರ್ ಗಡ್ಡೆ ಗಳನ್ನು ನಾಶಪಡಿಸುತ್ತವೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ.
ಅಲ್ಲದೇ ಹೆಣ್ಣು ಮಕ್ಕಳಲ್ಲಿ ಉಂಟಾಗುವ ಋತುಚಕ್ರ ಕ್ರಿಯೆಯ ಮಾಸಿಕ ನೋವಿನಿಂದ ಹೊರಬರಲು ಇದು ನೆರವಾಗುತ್ತದೆ ಇನ್ನೂ ಸ್ನಾಯುಗಳ ಸೆಳೆತದಿಂದ ಮುಕ್ತಿ ಹೊಂದಲು ಇದರಲ್ಲಿರುವ ಪೊಟ್ಯಾಸಿಯಮ್ ನೆರವಾಗುತ್ತದೆ ಮತ್ತು ಇದರಲ್ಲಿರುವ ವಿಟಮಿನ್ ಬಿ6 ಹೊಟ್ಟೆ ಉಬ್ಬರಿಕೆಯಾಗದಂತೆ ಕೆಳಹೊಟ್ಟೆಯಲ್ಲಿ ನೀರು ತುಂಬಿಕೊಳ್ಳದಂತೆ ನೋಡಿಕೊಳ್ಳುತ್ತದೆ, ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ ಅಲ್ಲದೇ ಚುಕ್ಕೆ ಬಿದ್ದ ಸಿಪ್ಪೆಯ ಬಾಳೆಹಣ್ಣಿನಲ್ಲಿರುವ ಅಧಿಕ ಪೊಟ್ಯಾಸಿಯಮ್ ಅಂಶವೂ ದೇಹದಲ್ಲಿನ ರಕ್ತದ ಒತ್ತಡವನ್ನು ನಿಯಂತ್ರಿಸುವುದಲ್ಲದೆ ಹೃದಯ ಸಂಬಂದಿ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ.
ಇನ್ನು ಮನುಷ್ಯರಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಮಾನಸಿಕ ಖಿನ್ನತೆಯನ್ನು ಈ ಬಾಳೆ ಹಣ್ಣು ನಿಯಂತ್ರಿಸುತ್ತದೆಯಲ್ಲದೇ ಮೆದುಳಿಗೆ ಸಂಬಂದಿಸಿದ ಸಮಸ್ಯೆಗಳನ್ನು ತಡೆಯಲು ಇದು ಸಹಾಯಕವಾಗಿದೆ, ಅಲ್ಲದೇ ಬಾಳೆಹಣ್ಣು ಮೂರು ನೈಸರ್ಗಿಕ ಸಕ್ಕರೆ ಅಂಶಗಳನ್ನು ಒಳಗೊಂಡಿರುವುದರಿಂದ ಇದು ದೇಹದ ಸಹಿಷ್ಣುತೆಯನ್ನು ಒಂದು ಗಂಟೆಗಳ ವರೆಗೆ ನಿಯಂತ್ರಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ ಹಾಗೂ ಹೊಟ್ಟೆಯಲ್ಲಿ ಮತ್ತು ಕರುಳಿನಲ್ಲಿ ಉಂಟಾಗುವ ಹುಣ್ಣುಗಳನ್ನು ಶಮನ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.