ಇತ್ತೀಚಿನ ದಿನಗಳಲ್ಲಿ ರೋಗಿಗಳಿಲ್ಲದ ಮನೆ ಸಿಗುವುದಿಲ್ಲ ಯಾವುದಾದರೊಂದು ಖಾಯಿಲೆಗೆ ಒಳಗಾಗುತ್ತಾರೆ ಅವರು ವೈದ್ಯರ ಬಳಿ ಹೋದಾಗ ಟ್ಯಾಬ್ಲೆಟ್ ಕೊಡುತ್ತಾರೆ ಅದರೊಂದಿಗೆ ನೈಸರ್ಗಿಕವಾಗಿ ಒಳ್ಳೆಯ ಆಹಾರವನ್ನು ಸೇವಿಸಿ ಆರೋಗ್ಯವನ್ನು ನೋಡಿಕೊಳ್ಳಬೇಕು. ನೈಸರ್ಗಿಕವಾದ ಅಂಜೂರ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಲಾಭವಿದೆ. ಹಾಗಾದರೆ ಅಂಜೂರ ಹಣ್ಣಿನ ಲಾಭ ಹಾಗೂ ಅದರ ಸೇವನೆಯನ್ನು ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಅಂಜೂರ ಇದು ಒಂದು ಉತ್ತಮವಾದ ಹಣ್ಣು. ಇದು ತಿನ್ನಲು ರುಚಿಯಾಗಿರುತ್ತದೆ. ಇದನ್ನು ಅತ್ತಿ ಹಣ್ಣು ಎನ್ನುತ್ತಾರೆ, ಮಲೆನಾಡಿನ ಹಳ್ಳಿಗಳಲ್ಲಿ ಇದು ಕಂಡುಬರುತ್ತದೆ. ಇದು ಹಣ್ಣಾದ ನಂತರ ಒಣಗಿಸಿ ಇಟ್ಟು ಬಳಸಿದರೆ ಒಳ್ಳೆಯದು ಹಾಗೂ ರುಚಿಯಾಗಿರುತ್ತದೆ. ಈ ಹಣ್ಣು ಬೇಸಿಗೆಯಲ್ಲಿ ಸಿಗುತ್ತದೆ. ಈ ಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹುದು ಆದರೆ ಊಟದ ಮುನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ ಆದ್ದರಿಂದ ಬ್ಯಾಡ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಸಾಮಾನ್ಯವಾಗಿ ಎಲ್ಲರನ್ನು ಬಾಧಿಸುವ ರಕ್ತ ಹೀನತೆ, ರಕ್ತದೊತ್ತಡ, ಜೀರ್ಣಕ್ರಿಯೆ ಸಮಸ್ಯೆಗೆ ದಿವ್ಯ ಔಷಧ ಅಂಜೂರ. ಹೆಚ್ಚು ಮಹಿಳೆಯರು ರಕ್ತಹೀನತೆ, ರಕ್ತದೊತ್ತಡ, ಜೀರ್ಣಕ್ರಿಯೆ ಸಮಸ್ಯೆಯನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಿಪಿ, ಮಧುಮೇಹ ಸಮಸ್ಯೆಯನ್ನು ಅನುಭವಿಸುತ್ತಾರೆ. ಬಹಳ ಕಡಿಮೆ ಬೆಲೆಗೆ ಅಂಜೂರ ಸಿಗುತ್ತದೆ 2-3 ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರಕ್ತದೊತ್ತಡ, ರಕ್ತಹೀನತೆ, ಮಧುಮೇಹ, ಜೀರ್ಣಕ್ರಿಯೆ ಈ ಎಲ್ಲ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅಂಜೂರದಂತೆ ಅದರ ಎಲೆಯು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ.
3-4 ಅಂಜೂರದ ಎಲೆಯ ಕಷಾಯವನ್ನು ಕುಡಿಯುವುದರಿಂದ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗುತ್ತದೆ. ಅಂಜೂರದ ಬೀಜವು ಸಹ ಆರೋಗ್ಯಕ್ಕೆ ಒಳ್ಳೆಯದು. ಒಂದು ಚಮಚ ಅಂಜೂರದ ಪುಡಿಗೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಕ್ಕೆ ಅಂಜೂರ ಒಳ್ಳೆಯದು ಎಂದು ಸಂಶೋಧನೆಗಳು ತಿಳಿಸಿವೆ. 4 ಅಂಜೂರದ ಎಲೆಗಳನ್ನು ಕಲ್ಲು ಸಕ್ಕರೆ ಮತ್ತು ನೀರಿನ ಜೊತೆ ಸೇವಿಸುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ. ಹೀಟಿನಿಂದ ಆಗುವ ಬಾಯಿಹುಣ್ಣಿಗೂ ಅಂಜೂರ ಉತ್ತಮ, ಒಂದು ಚಮಚ ಅಂಜೂರದ ತೊಗಟೆಯ ಪುಡಿಯನ್ನು ಒಂದು ಲೋಟ ಹಾಲಿಗೆ ಸೇರಿಸಿ ಕುಡಿದರೆ ಬಾಯಿಯಲ್ಲಿನ ಹುಣ್ಣು ವಾಸಿಯಾಗುತ್ತದೆ.
ಅಂಜೂರ ಹಣ್ಣಿನಲ್ಲಿ ನಾರಿನ ಪದಾರ್ಥವಿದ್ದು ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂಳೆಯ ಆರೋಗ್ಯಕ್ಕೂ ಅಂಜೂರ ಉತ್ತಮ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಈ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಶಿಯಂ ಅಪಾರ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೆ ಹಣ್ಣುಗಳನ್ನು ತಿನ್ನಬೇಕು ಅದರಲ್ಲೂ ಅಂಜೂರ ಹಣ್ಣನ್ನು ಪ್ರತಿದಿನ ತಿನ್ನುವುದು ಒಳ್ಳೆಯ ಅಭ್ಯಾಸ ಆದ್ದರಿಂದ ಎಲ್ಲರೂ ಈ ಅಭ್ಯಾಸವನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.