ಬೆಳಗ್ಗೆ ಎದ್ದ ತಕ್ಷಣ ಟಿ, ಕಾಫಿ, ಹಾರ್ಲಿಕ್ಸ್, ಬೋರ್ನ್ ವಿಟಾ ಹೀಗೆ ಏನಾದರೂ ಒಂದು ಕುಡಿಯುವ ಹವ್ಯಾಸ ಎಲ್ಲರಿಗೂ ಇರುತ್ತದೆ. ಕಾಫಿ, ಹಾರ್ಲಿಕ್ಸ್ ಇವುಗಳನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಅಷ್ಟೇ ಏನೂ ಪ್ರಯೋಜನವಾಗುವುದಿಲ್ಲ ಆದರೆ ಆರೋಗ್ಯಕ್ಕೆ ಉತ್ತಮವಾಗಿರುವ ಶುಂಠಿ ಚಹಾವನ್ನು ಪ್ರತಿ ದಿನ ಕುಡಿಯುವುದರಿಂದ ನಮ್ಮಲ್ಲಿನ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಶುಂಠಿ ಟೀಯನ್ನು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳುವುದು ಹೇಗೆ ಹಾಗೂ ಶುಂಠಿ ಟೀಯನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನವನ್ನು ಈ ಲೇಖನದ ಮೂಲಕ ತಿಳಿಯೋಣ.
ಬಹಳಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಟಿ ಕುಡಿಯುವ ಅಭ್ಯಾಸ ಇರುತ್ತದೆ. ಟಿ ಕುಡಿಯಲಿಲ್ಲ ಎಂದರೆ ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಆದರೆ ಟಿ ಕುಡಿಯುವ ಬದಲು ಆರೋಗ್ಯಕ್ಕೆ ಉತ್ತಮವಾದ ಶುಂಠಿ ಟಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಶುಂಠಿ ಟಿ ಮಾಡಲು ಬೇಕಾಗುವ ಸಾಮಗ್ರಿಗಳೆಂದರೆ ಶುಂಠಿ, ನೀರು, ತುಳಸಿ. ಮೊದಲು ಒಂದು ಕಪ್ ನೀರನ್ನು ಕುದಿಸಬೇಕು ಅದಕ್ಕೆ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಅದಕ್ಕೆ 6-8 ತುಳಸಿ ಎಲೆಯನ್ನು ಹಾಕಿ 5 ನಿಮಿಷ ಕುದಿಸಿ ನಂತರ ಸ್ವಲ್ಪ ಚಹಾ ಪುಡಿ ಸೇರಿಸಿ ಹಾಲು, ಸಕ್ಕರೆ ಹಾಕಿ ಸೋಸಿ ಸ್ವಲ್ಪ ಬಿಸಿಯಾಗಿರುವಾಗಲೇ ಕುಡಿಯಬೇಕು. 1-2 ಕರಿಮೆಣಸು, 2 ಏಲಕ್ಕಿ, ಸೋಂಪು, ದಾಲ್ಚಿನಿ ಇವುಗಳನ್ನು ಸೇರಿಸಿ ಕುಡಿಯುವುದರಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆ ಬದಲು ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಮತ್ತಷ್ಟು ಲಾಭವಿದೆ.
ಈ ಚಹಾ ಕುಡಿಯಲು ಗರಂ ಎನಿಸುತ್ತದೆ ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯ ಚಹಾ ಕುಡಿದು ರೂಢಿ ಇರುವವರಿಗೆ ಚಹಾವನ್ನು ಹೀಗೆ ಮಾಡಿ ಕುಡಿಯುವುದರಿಂದ ರುಚಿಯ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಣ್ಣ ಪ್ರಮಾಣದ ಕೋಲ್ಡ್, ಜ್ವರ ಇದ್ದಾಗಲೂ ಶುಂಠಿ ಟೀಯನ್ನು ಮಾಡಿ ಕುಡಿಯುವುದರಿಂದ ವಾಸಿಯಾಗುತ್ತದೆ.
ಶುಂಠಿ ಟಿ ಕುಡಿಯುವುದರಿಂದ ಅಜೀರ್ಣ, ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ಶುಂಠಿಯಲ್ಲಿ ವಿಟಮಿನ್-ಸಿ, ಮೆಗ್ನೀಷಿಯಂ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತದೆ. ಕೆಲವರಿಗೆ ಜರ್ನಿ ಮಾಡಿದರೆ ಒಮಿಟ್ ಆಗುತ್ತದೆ ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಶುಂಠಿ ಟೀಯನ್ನು ಕುಡಿದುಕೊಂಡು ಹೋದರೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಶುಂಠಿ ಟಿ ಕುಡಿಯುವುದರಿಂದ ಮಂಡಿನೋವು, ಕಾಲು ನೋವು ಇಂಥ ನೋವುಗಳನ್ನು ಕೂಡ ಪರಿಹರಿಸಿಕೊಳ್ಳಬಹುದು.
ಶುಂಠಿ ಟಿ ಕುಡಿಯುವುದರಿಂದ ರಕ್ತ ಸಂಚಾರ ಆಗುವಲ್ಲಿ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಶುಂಠಿ ಟಿ ಚರ್ಮದ ಆರೋಗ್ಯಕ್ಕೆ ಕೂಡ ಉತ್ತಮವಾಗಿದೆ. ಇಷ್ಟೊಂದು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಶುಂಠಿ ಟೀಯನ್ನು ಪ್ರತಿಯೊಬ್ಬರು ಪ್ರತಿನಿತ್ಯ ಕುಡಿಯುವುದು ಒಳ್ಳೆಯ ಅಭ್ಯಾಸವಾಗಿದೆ. ಶುಂಠಿ ಟಿ ಕುಡಿದರೆ ಕೊರೋನ ಬರದಂತೆ ತಡೆಯುತ್ತದೆ ಆದ್ದರಿಂದ ಈ ಸಮಯದಲ್ಲಿ ಶುಂಠಿಯನ್ನು ಹೆಚ್ಚು ಸೇವಿಸಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಶುಂಠಿಯ ಮಹತ್ವದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ.