ಇನ್ನು ಚಳಿಗಾಲ ಶುರುವಾಯಿತು. ವಾತಾವರಣವೇ ಬಹಳ ತಂಪಾಗಿರುತ್ತದೆ. ಹಾಗಾಗಿ ನೆಗಡಿ, ಕೆಮ್ಮು, ಶೀತ ಹಲವರಲ್ಲಿ ಆಗುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಮಾತ್ರೆಗಳನ್ನು ತಿನ್ನಬಾರದು. ಏಕೆಂದರೆ ಇಂಗ್ಲೀಷ್ ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ಇಲ್ಲಿ ನೆಗಡಿ, ಕೆಮ್ಮು ಮತ್ತು ಶೀತಕ್ಕೆ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇದಕ್ಕೆ ಮೊದಲು ಒಂದು ಚಮಚದಷ್ಟು ಜೀರಿಗೆಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಹಸಿಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅದರ ಸಿಪ್ಪೆಯನ್ನು ತೆಗೆದುಕೊಂಡು ಸುಮಾರು ಒಂದು ಇಂಚಿನಷ್ಟು ತೆಗೆದುಕೊಳ್ಳಬೇಕು. ಹಾಗೆಯೇ ತುಳಸಿಯ ಎಲೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಸುಮಾರು ನಾಲ್ಕರಿಂದ ಐದು ತುಳಸಿ ಎಲೆಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಇದಕ್ಕೆ ಎರಡು ಲೋಟ ನೀರು ಮತ್ತು ಜೇನುತುಪ್ಪ ತೆಗೆದುಕೊಳ್ಳಬೇಕು.
ಮೊದಲು ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ ಕುದಿಯಲು ಇಡಬೇಕು. ಹಾಗೆಯೇ ಕುಟ್ಟಾಣಿಯಲ್ಲಿ ಜೀರಿಗೆಯನ್ನು ಹಾಕಿ ಕುಟ್ಟಿಕೊಳ್ಳಬೇಕು. ಜೀರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ರೀತಿಯ ಸೋಂಕು ಇದ್ದರೂ ಕಡಿಮೆ ಮಾಡುತ್ತದೆ. ಇದನ್ನು ಚೆನ್ನಾಗಿ ಕುಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ಜೀರಿಗೆಯ ಪುಡಿ ಬೇಕಾದರೂ ಹಾಕಬಹುದು. ನಂತರದಲ್ಲಿ ಕುದಿಯುವ ನೀರಿಗೆ ಜೀರಿಗೆಯನ್ನು ಹಾಕಬೇಕು.
ಹಾಗೆಯೇ ಶುಂಠಿ ಮತ್ತು ತುಳಸೀ ಎಲೆಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು. ಈ ಮಿಶ್ರಣವನ್ನು ಕುದಿಯುವ ನೀರಿಗೆ ಹಾಕಬೇಕು. ಎರಡು ಲೋಟ ನೀರು ಒಂದು ಲೋಟ ಆಗುವಷ್ಟು ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಬೇಕಾದಲ್ಲಿ ಸೋಸಿಕೊಂಡು ಕುಡಿಯಬೇಕು. ಲೋಟಕ್ಕೆ ಹಾಕಿಕೊಂಡ ಮೇಲೆ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಬೇಕು. ಹಾಗೆಯೇ ಸೋಸದೇ ಕುಡಿದರೂ ಓಳ್ಳೆಯದು. ಇದನ್ನು ಬಿಸಿ ಇರುವಾಗಲೇ ಕುಡಿಯಬೇಕು. ಇದನ್ನು ಕುಡಿದ ಅರ್ಧಗಂಟೆ ಏನನ್ನೂ ಸೇವನೆ ಮಾಡಬಾರದು. ದಿನಕ್ಕೆ ಎರಡು ಬಾರಿ ಇದನ್ನು ಕುಡಿಯಬೇಕು.