ಅಡುಗೆ ಮನೆಯಿಂದ ಕಾಫಿ ಘಮಲು ಬರುತ್ತಿದ್ದರೆ ಅದನ್ನು ಒಂದು ಗುಟುಕು ಕುಡಿಯಬೇಕು ಎಂದು ಅನಿಸುತ್ತದೆ. ಕಾಫಿ ರುಚಿಯೇ ಅಂಥದ್ದು. ಕಾಫಿಯನ್ನು ಕೇವಲ ಕುಡಿಯಲು ಮಾತ್ರವಲ್ಲದೆ ಇದ್ದನು ಸೌಂದರ್ಯ ವರ್ಧಕವಾಗಿಯು ಬಳಸಬಹುದು. ಹೌದು ಕಾಫಿ ಪುಡಿ ಫೇಸ್ ಪ್ಯಾಕ್ ನಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅಷ್ಟೇಅಲ್ಲ ನಾವು ಇದನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು ಹಾಗಾದರೆ ಇದರ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಅನೇಕ ಯುವತಿಯರು ತಾವು ಸೌಂದರ್ಯವಾಗಿ ಕಾಣಲು ಪಾರ್ಲರ್ ಗೆ ಹೋಗುತ್ತಾರೆ ಆದರೆ ನಾವು ಮನೆಯಲ್ಲಿಯೇ ಈ ಫೇಸ್ ಪ್ಯಾಕ್ ಅನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾಫಿ ಜೊತೆ ಜೇನೂ ತುಪ್ಪವನ್ನು ಬೆರೆಸಿ ಸ್ಕ್ರಬ್ ರೂಪದಲ್ಲಿ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುವುದು. ಇದು ಚರ್ಮ ಶುಷ್ಕವಾಗುವುದನ್ನು ತಪ್ಪಿಸುತ್ತದೆ. ಬಿಳಿ ಹಾಗೂ ಶುಷ್ಕ ಕೂದಲು ಸಮಸ್ಯೆಯನ್ನು ಕಾಫಿ ಬಗೆಹರಿಸುತದೆ ಕಾಫಿ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ಮಿಶ್ರಣ ಮಾಡಿ ತಲೆಕೂದಲಿಗೆ ಹಚ್ಚಿಕೊಳ್ಳಿ ಬಳಿಕ ಸುಮಾರು ಇಪ್ಪತ್ತು ನಿಮಿಷಗಳ ನಂತರ ತಲೆಯನ್ನು ತೊಳೆದುಕೊಳ್ಳಿ ಹೀಗೆ ಮಾಡಿದರೆ ಹೊಟ್ಟು ಮತ್ತು ಕಲ್ಮಶ ನಿವಾರಣೆ ಆಗುತ್ತದೆ ಮೆಹಂದಿಗೆ ಕಾಫಿ ಮಿಕ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಬೇಕು ಕೂದಲು ಉದುರುವುದು ಕಡಿಮೆಯಾಗಿ ಕೂದಲು ಹೊಳಪನ್ನು ಪಡೆಯುತ್ತದೆ
ಕಾಫಿ ಪುಡಿ ಜೊತೆ ಟಿ-ಟ್ರೀ ಪುಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುರಿಂದ ಚರ್ಮ ವಯಸ್ಸದಂತೆ ಕಾಣುವದಿಲ್ಲ ಹಾಗೂ ನಮ್ಮ ಚರ್ಮದ ಆರೈಕೆ ಮಾಡುತ್ತದೆ. ಕಾಫಿ ಯಲ್ಲಿ ಇರುವಂತಹ ಕೆಫಿನ್ ಚರ್ಮದ ವಿನ್ಯಾಸ ಉತ್ತಮಪಡಿಸಲು ಸಹಾಯ ಮಾಡುತ್ತದೆ ಕಪ್ಪು ಕಲೆ. ಮೊಡವೆ. ಚುಕ್ಕಿ.ಗುಳ್ಳೆ. ಎಲ್ಲ ನಿವಾರಣೆಯಾಗುತ್ತದೆ
ಕಣ್ಣಿನ ಸುತ್ತ ಕಾಣುವ ಕಪ್ಪು ಕಲೆಯನ್ನು ಕಾಫಿ ತೊಡೆದು ಹಾಕುತ್ತದೆ ಜೊತೆಗೆ ಕಣ್ಣಿನ ಉರಿಯು ಕಡಿಮೆ ಆಗುತ್ತದೆ ಮತ್ತು ಕಣ್ಣಿನ ಕೇಳಭಾಗ ಉಬ್ಬಿಕೊಂಡಿದ್ದರೆ ಇದಕ್ಕೆ ಕೆಫೀನ್ ಉತ್ತಮ ಪರಿಹಾರ ನೀಡುತ್ತದೆ ಕಣ್ಣಿನ ಆರೈಕೆ ಮಾಡುವುದರ ಜೊತೆಗೆ ಶೀಘ್ರವೇ ಉಬ್ಬಿರುವುದು ಕಡಿಮೆ ಆಗುತ್ತದೆ
ಹೀಗೆ ಕಾಫಿಪುಡಿ ಹಲವು ಬಗೆಯಲ್ಲಿ ನಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿಗೆ ಪೋಷಣೆಯನ್ನು ನೀಡಿ ಕೂದಲು ಉದರುವುದನ್ನು ಮಾಡುತ್ತದೆ. ಕಾಫಿ ಪೇಸ್ಟ್ ಹಚ್ಚಿಕೊಂಡಲ್ಲಿ ಮುಖ ಹೊಳಪು ಪಡೆಯುತ್ತದೆ.