ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸಹಜವಾಗಿ ಕಾಡುವಂತ ಹಲವು ಸಮಸ್ಯೆಗಳಲ್ಲಿ ಈ ಕೂದಲು ಉದುರುವ ಸಮಸ್ಯೆಯು ಸಹ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಹೌದು ಸ್ನೇಹಿತರೆ ಇಂದಿನ ನಮ್ಮ ಜೀವನ ಶೈಲಿಯಲ್ಲಿ ನಾವು ತಲೆ ಕೂದಲಿಗೆ ಎಣ್ಣೆಯನ್ನ ಸರಿಯಾಗಿ ಹಚ್ಚಡ ಕಾರಣ ಹಾಗು ಕೂದಲನ್ನ ಚದುರಿಕೊಳ್ಳುವ ಕಾರಣದಿಂದಾಗಿ ಕೂದಲಿನಲ್ಲಿ ಪೋಷಕಾಂಶಗಳು ಕಡಿಮೆಯಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ.
ಕೂದಲು ಉದುರುವಿಕೆ ತಲೆ ಹೊಟ್ಟು ಬಲ ನೆರೆ ಅಂದರೆ ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲು ಆಗುವಿಕೆ ಹಾಗೂ ಇನ್ನು ಹಲವು ಕೂದಲ ಸಮಸ್ಯೆಗಳಿಗೆ ಪರಿಹಾರ ಕೊಡುವ ಮನೆಮದ್ದು ಬಗ್ಗೆ ತಿಳಿಯೋಣ. ಕೂದಲಿಗೆ ಬಳಸುವ ಎಣ್ಣೆಯನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು, ಒಂದು ಹಿಡಿಯಷ್ಟು ಕರಬೇವು ಹಾಗೂ ಒಂದು ಬಟ್ಟಲು ಕೊಬ್ಬರಿ ಎಣ್ಣೆ ಇದರ ಜೊತೆಗೆ ಕಾಲ್ ಬಟ್ಟಲು ಹರಳೆಣ್ಣೆ ಮತ್ತು ಎರಡು ಚಮಚ ಮೆಂತೆ ಕಾಳು ಇಷ್ಟು ತಲೆಕೂದಲು ಉದುರುವಂತ ಸಮಸ್ಯೆಗೆ ಪರಿಹಾರ ನೀಡುವ ಮನೆಮದ್ದು.
ಇದನ್ನು ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಮೆಂತ್ಯೆಯನ್ನ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ, ನಂತರ ಅದಕ್ಕೆ ಕರಿಬೇವಿನ ಎಲೆಗಳನ್ನ ಸೇರಿಸಿ ಚನ್ನಾಗಿ ಹುರಿದುಕೊಳ್ಳಿ. ಇದಾದ ಮೇಲೆ ಅದನ್ನ ತಣ್ಣಗಾಗಲು ಬಿಡಿ, ತಣ್ಣಗಾದ ಬಳಿಕ ಕರಿಬೇವು ಹಾಗೂ ಮೆಂತ್ಯೆಯನ್ನು ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ. ನಮ್ಮ ತಲೆಕೂದಲ ಹಲವು ಸಮಸ್ಯೆಗಳಿಗೆ ಮೆಂತ್ಯೆ ಮತ್ತು ಕರಿಬೇವು ಬಹಳ ಪರಿಣಾಮಕಾರಿ. ಒಂದು ಬಾಣಲೆಯನ್ನ ಬಿಸಿಗಿಟ್ಟು ಅದಕ್ಕೆ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಹಾಗೂ ತಯಾರಿಸಿಟ್ಟುಕೊಂಡಿದ್ದ ಪುಡಿಯನ್ನ ಹಾಕಿ ಐದು ನಿಮಿಷಗಳ ಕಾಲ ಚನ್ನಾಗಿ ಕುದಿಸಿ. ಎಣ್ಣೆ ತಣ್ಣಗಾದ ಬಳಿಕ ಅದನ್ನ ಶೋಧಿಸಿ ಒಂದು ಗಾಜಿನ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ, ಇದನ್ನ ವಾರದಲ್ಲಿ ಮೂರೂ ಬಾರಿಯಂತೆ ಕೂದಲಿಗೆ ಹಚ್ಚುತ್ತಾ ಬಂದರೆ ನಿಮ್ಮ ಹಲವು ಕೂದಲ ಸಮಸ್ಯೆಗಳು ನಿವಾರಣೆಯಾಗುತ್ತವೆ