ಲಕ್ಷ್ಮಿ ದೇವಿ ನೆಲೆಸುವ ಸ್ಥಳ ಯಾವುದು ಗೊತ್ತೇ?

0 2

ಹಣ ಇದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ಹಣ ಎಂದರೆ ಲಕ್ಷ್ಮಿದೇವಿ ಎಂದು ಅರ್ಥ. ಲಕ್ಷ್ಮಿದೇವಿ ಸದಾ ನಮ್ಮ ಜೊತೆ ಇರಬೇಕು ಎಂದಾದರೆ ನಾವು ಅದರ ಪೂಜೆ ಮಾಡಬೇಕು. ಅದನ್ನು ಕೀಳಾಗಿ ನೋಡಬಾರದು. ಹಣ ಎಷ್ಟೇ ಇದ್ದರೂ ಅದರ ಮೇಲೆ ಮಲಗಿಕೊಳ್ಳುವುದು ಇಂತಹವುಗಳನ್ನು ಮಾಡಬಾರದು. ಹಾಗೆಯೇ ಹಣವನ್ನು ಮೆಟ್ಟಬಾರದು. ನಾವು ಇಲ್ಲಿ ಲಕ್ಷ್ಮಿದೇವಿ ಎಲ್ಲಿ ನೆಲೆಸುತ್ತಾಳೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದೇವಿ ಲಕ್ಷ್ಮಿಯು ಹಾಗೆ ಸುಮ್ಮನೆ ಎಲ್ಲರ ಮನೆಯಲ್ಲೂ ನೆಲೆಸುವುದಿಲ್ಲ. ಏಕೆಂದರೆ ಇದಕ್ಕೆ ಹಲವಾರು ಕಾರಣಗಳು ಇವೆ. ಇವಳು ಸ್ವಚ್ಛವಾಗಿ ಇರುವ ಮನೆಯಲ್ಲಿ ನೆನೆಸುತ್ತಾಳೆ. ಯಾವ ಮನೆಯು ಶುದ್ಧವಾಗಿ ಇರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುತ್ತಾಳೆ. ಯಾವ ಹೆಣ್ಣು ತನ್ನ ಮನೆಯನ್ನು ದಿನಾಲೂ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾಳೋ ಅಂತಹ ಮನೆಯಲ್ಲಿ ದೇವಿ ನೆಲೆಸುತ್ತಾಳೆ. ಹಾಗೆಯೇ ಮನೆಯಲ್ಲಿ ಯಾವಾಗಲೂ ಒಳ್ಳೊಳ್ಳೆಯ ಮಾತುಗಳನ್ನು ಆಡುತ್ತಿರಬೇಕು.

ಮನೆಯಲ್ಲಿ ಅಶುಭ ಮಾತುಗಳನ್ನು ಆಡುತ್ತಿರಬಾರದು. ಏಕೆಂದರೆ ಯಾವಾಗ ಸಮಯ ಸರಿ ಇರುತ್ತದೆ ಮತ್ತು ಸರಿ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಯು ಸಹ ಒಳ್ಳೆಯ ನಡವಳಿಕೆಯನ್ನು ಹೊಂದಿರಬೇಕು. ಮನೆಗೆ ಬಂದವರನ್ನು ಚೆನ್ನಾಗಿ ಉಪಚರಿಸಬೇಕು. ಅವರನ್ನು ಒಳ್ಳೆಯ ಭಾವದಿಂದ ಮಾತನಾಡಿಸಿ ಚೆನ್ನಾಗಿ ನೋಡಿಕೊಳ್ಳಬೇಕು. ಏಕೆಂದರೆ ಅತಿಥಿ ದೇವೋ ಭವ ಎನ್ನುವ ಮಾತಿದೆ. ಅತಿಥಿ ದೇವರು ಇದ್ದಂತೆ. ಹಾಗೆಯೇ ಹಳೆಯ ಕಾಲದಿಂದ ದೇವರು ಅತಿಥಿಯ ರೂಪದಲ್ಲಿ ಬರುತ್ತಾನೆ ಎಂಬ ನಂಬಿಕೆ ಇದೆ.

ಮನುಷ್ಯ ಹಾಕಿಕೊಳ್ಳುವ ಬಟ್ಟೆ ಸ್ವಚ್ಛವಾಗಿ ಇರಬೇಕು. ಹಾಗೆಯೇ ದಿನನಿತ್ಯ ಸ್ನಾನ ಮಾಡಬೇಕು. ಏಕೆಂದರೆ ಲಕ್ಷ್ಮೀ ದೇವಿಗೆ ಸ್ವಚ್ಛತೆ ಮುಖ್ಯವಾಗಿದೆ. ಹಾಗೆಯೇ ಬಟ್ಟೆಯನ್ನು ದಿನಾಲೂ ಸ್ನಾನ ಮಾಡುವಾಗ ತೊಳೆಯಬೇಕು. ಅದನ್ನು ವಾರಗಟ್ಟಲೆ ಹಾಗೆಯೇ ಬಿಡಬಾರದು. ಏಕೆಂದರೆ ಲಕ್ಷ್ಮಿ ದೇವಿಯು ಶುಭ್ರತೆಗೆ ಪ್ರಾಶಸ್ತ್ಯ ನೀಡುತ್ತಾಳೆ. ಹಾಗಾಗಿ ಕೊನೆಯದಾಗಿ ಹೇಳುವುದೇನೆಂದರೆ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು. ಬೆಳಿಗ್ಗೆ ಬೇಗನೆ ಎದ್ದು ಕಸವನ್ನು ಗುಡಿಸಿ ಮನೆಯನ್ನು ಸಾರಿಸಬೇಕು. ಮನೆಯಲ್ಲಿ ಯಾವಾಗಲೂ ಕಸ ಇರಲು ಬಿಡಬಾರದು.

Leave A Reply

Your email address will not be published.