ವೀಳ್ಯದೆಲೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಾರ್ಯಕ್ರಮಗಳಲ್ಲಿ ವೀಳ್ಯದೆಲೆಯನ್ನು ತುಂಬಾ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಇದು ಆರೋಗ್ಯಕ್ಕೂ ಸಹ ಬಹಳ ಉಪಯೋಗಿ ಆಗಿದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಪ್ರಯೋಜನಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವೀಳ್ಯದೆಲೆಯನ್ನು ಹನುಮಂತನಿಗೆ ಅರ್ಪಿಸಿದರೆ ಬಹಳ ಒಳ್ಳೆಯದು. ಇದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಾಗೆಯೇ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಗ್ಯಾಸ್ಟ್ರಿಕ್ ನೋವನ್ನು ಕಡಿಮೆ ಮಾಡುತ್ತದೆ. ಇದನ್ನು ತಿನ್ನುವುದರಿಂದ ಬಾಯಿಯ ದೂರ್ವಾಸನೆಯನ್ನು ದೂರ ಮಾಡಿಕೊಳ್ಳಬಹುದು. ಇದರ ಜೊತೆಗೆ ಸ್ವಲ್ಪ ಜೇನುತುಪ್ಪ ಮತ್ತು ಕರಿಬೇವನ್ನು ಸೇರಿಸಿ ತಿನ್ನುವುದರಿಂದ ಕಫ ಮತ್ತು ನೆಗಡಿ ದೂರವಾಗುತ್ತದೆ. ಇದರ ರಸವನ್ನು ತೆಗೆದು ಗಾಯಕ್ಕೆ ಹಚ್ಚಿದರೆ ಗಾಯಕ್ಕೆ ಉಪಶಮನವಾಗುತ್ತದೆ.
ಇದು ದೇಹದ ವಾಸನೆಯನ್ನು ತಡೆಯುತ್ತದೆ. ಹಾಗೆಯೇ ತಲೆಯ ನೋವನ್ನು ಕಡಿಮೆ ಮಾಡುತ್ತದೆ. ಹಳ್ಳಿಯ ಕಡೆ ಹೆಚ್ಚಾಗಿ ಎಲ್ಲರಿಗೂ ಕವಳ ಹಾಕುವ ಅಭ್ಯಾಸ ಇರುತ್ತದೆ. ಕೆಲವೊಬ್ಬರು ಊಟಾದ ನಂತರ ಹಾಕುತ್ತಾರೆ. ಹಾಗೆಯೇ ಹೋಟೆಲ್ ಗಳಲ್ಲಿ ಊಟಾದ ನಂತರ ಪಾನ್ ಗಳನ್ನು ತಯಾರಿ ಮಾಡಿ ಇಟ್ಟಿರುತ್ತಾರೆ. ಇದೂ ಸಹ ಹೋಟೆಲ್ ನವರಿಗೆ ಒಂದು ಸಣ್ಣ ಆದಾಯವಾಗಿದೆ.
ಹಳ್ಳಿಯ ಜನರಿಗೆ ವೀಳ್ಯದೆಲೆ ತೋಟದಲ್ಲಿ ದೊರೆಯುತ್ತದೆ. ಅದನ್ನು ತಂದು ಪೇಟೆಯ ಕಡೆ ಮಾರಾಟ ಮಾಡುತ್ತಾರೆ. ಹಳ್ಳಿಯ ಜನರು ವೀಳ್ಯದೆಲೆಯನ್ನು ಒಂದು ಸಣ್ಣ ಉಪಬೆಳೆಯಾಗಿ ಬೆಳೆಯುತ್ತಾರೆ. ಇದು ಸಹ ಒಂದು ಸಣ್ಣ ಅದಾಯವಾಗಿದೆ. ಏಕೆಂದರೆ ಪೇಟೆಗಳಲ್ಲಿ ವೀಳ್ಯದೆಲೆಗೆ ಒಳ್ಳೆಯ ಬೆಲೆಯಿದೆ. ಪಟ್ಟಣಗಳಲ್ಲಿ ಕಾರ್ಯಕ್ರಮ ನಡೆಸುವವರು ಇದನ್ನು ಖರೀದಿ ಮಾಡುತ್ತಾರೆ.