ನಿದ್ರೆ ಮನುಷ್ಯನ ದಿನದ 8 ತಾಸನ್ನು ಕಳೆಯುವ ಒಂದು ಸ್ಥಿತಿಯಾಗಿದೆ. ನಿದ್ರೆ ಬರದಿದ್ದರೆ ತಲೆಯಲ್ಲಿ ಒಂದಷ್ಟು ಸಕಾರಾತ್ಮಕ ಹಾಗೂ ನಕಾರಾತ್ಮಕ ಆಲೋಚನೆಗಳು ಓಡುತ್ತಿರುತ್ತವೆ. ಕೆಲವರಿಗೆ ರಾತ್ರಿ ನಿದ್ರೆ ಬರುವುದೇ ಇಲ್ಲ. ಆದ್ದರಿಂದ ಚೆನ್ನಾಗಿ ನಿದ್ರಿಸಲು ಟಿಪ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಊಟಕ್ಕೆ ಮಾಂಸ ಸೇವನೆ ರೂಢಿಯಲ್ಲಿ ಇದ್ದರೆ ಅದನ್ನು ಮಲಗುವ 3 ರಿಂದ 4 ತಾಸುಗಳ ಒಳಗೆ ಮಾಡಿದರೆ ಒಳ್ಳೆಯದು. ಮಲಗುವ ಮುನ್ನ ಚೆನ್ನಾಗಿ ನೀರು ಕುಡಿದು ಮಲಗಬೇಕು. ಹಾಗೆಯೇ ಮಲಗುವ ಮುನ್ನ ಸ್ನಾನ ಮಾಡಬೇಕು. ರಾತ್ರಿ ಹೊತ್ತಿನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಸ್ನಾನ ಮಾಡುವುದರಿಂದ ನಿದ್ರೆ ಬರುವುದಿಲ್ಲ ಅನಿಸುತ್ತದೆ. ಆದರೆ ಕಾಲುಗಂಟೆ ತಡೆದರೆ ಬಹಳ ಚೆನ್ನಾಗಿ ನಿದ್ರೆ ಬರುತ್ತದೆ. ಏಕೆಂದರೆ ಅದು ಮನಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ದೇಹದಲ್ಲಿ ಶೇಕಡಾ70ಕ್ಕೂ ಹೆಚ್ಚು ನೀರು ಇರುತ್ತದೆ. ದೇಹದ ಮೇಲೆ ನೀರು ಬಿದ್ದಾಗ ದೇಹ ಮತ್ತು ಮನಸ್ಸು ಎರಡೂ ಶುದ್ಧೀಕರಣ ಆಗುತ್ತದೆ. ಹಾಗೆಯೇ ರಾತ್ರಿ ಮಲಗುವ ಮುನ್ನ ಸಾವಯವ ಬೀಜದ ಎಣ್ಣೆ ಹಾಕಿ ಹತ್ತಿಯನ್ನು ಹಚ್ಚಿ ಮಲಗಬೇಕು. ಹತ್ತಿಯ ಬತ್ತಿಯ ಜೊತೆ ಯಾವುದಾದರೂ ನೈಸರ್ಗಿಕ ಎಣ್ಣೆಯನ್ನು ಹಾಕಬಹುದು. ಮಲಗುವ ಕೋಣೆಯಲ್ಲಿ ಹಚ್ಚಬೇಕು. ಹಾಗೆಯೇ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದೇಹ, ಮನಸ್ಸಿನ ವಿಷಯಗಳು, ವಸ್ತುಗಳು, ಸಂಬಂಧಗಳು ಇವೆಲ್ಲವನ್ನೂ ಪಕ್ಕಕ್ಕಿಟ್ಟು ಅಂದರೆ ಮನಸ್ಸಿನಿಂದ ಹೊರಹಾಕಿ ಮಲಗಬೇಕು.
ಹಾಗೆಯೇ ಬೆಳಿಗ್ಗೆ ಏಳುವಾಗ ಧಡಕ್ ಎಂದು ಎದ್ದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ನಮ್ಮ ದೇಹದಲ್ಲಿ ಅತಿ ಮುಖ್ಯ ಅಂಗ ಎಂದರೆ ಹೃದಯ. ಬೆಳಿಗ್ಗೆ ಏಳುವಾಗ ಬಲಬದಿಗೆ ಏಳಬೇಕು. ಹಾಗೆಯೇ ಕೈಗಳನ್ನು ಚೆನ್ನಾಗಿ ಉಜ್ಜಿ ಕಣ್ಣಿಗೆ ವರೆಸಿಕೊಳ್ಳಬೇಕು. ಇದರಿಂದ ದೇಹದ ಎಲ್ಲಾ ನರಗಳು ಎಚ್ಚರಗೊಳ್ಳುತ್ತವೆ. ಸಣ್ಣ ಮುಗುಳ್ನಗೆಯೊಂದಿಗೆ ಎದ್ದೇಳಬೇಕು.