ಕಣ್ಣಿನ ಆರೋಗ್ಯ ಮುಖ್ಯ. ಕಣ್ಣಿನ ನರಗಳ ಆರೋಗ್ಯವನ್ನು ಹೆಚ್ಚಿಸುವ ಆಹಾರ ಯಾವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ನಿಂದ ಕಣ್ಣಿಗೆ ತೊಂದರೆಯಾಗುತ್ತಿದೆ. ಕಣ್ಣಿನ ನರಗಳ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳೆಂದರೆ ಬೆಟ್ಟದ ನೆಲ್ಲಿಕಾಯಿ ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಒಳ್ಳೆಯದು. ಈ ನೆಲ್ಲಿಕಾಯಿಯನ್ನು ಹಸಿಯಾಗಿ ಅಥವಾ ಜ್ಯೂಸ್ ಮಾಡಿಕೊಂಡು ಸೇವಿಸಬಹುದು. ಏಲಕ್ಕಿ ಕಣ್ಣಿಗೆ ತಂಪು ಕೊಡುತ್ತದೆ ಹಾಗೂ ಕಣ್ಣಿನ ನರಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಏಲಕ್ಕಿ ಮತ್ತು ಸೋಂಪಿನ ಕಾಳನ್ನು ಹಾಲು ಅಥವಾ ನೀರಿನೊಂದಿಗೆ ಸೇರಿಸಿ ಸೇವಿಸುವುದು ಒಳ್ಳೆಯದು. ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಅದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಪಾಲಕ್ ಸೊಪ್ಪು ಸೇವಿಸುವುದರಿಂದ ಕಣ್ಣಿಗಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ.
ಸಾಲ್ಮೋನ್ ಎಂಬ ಮೀನು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಆಗಾಗ ಸೇವಿಸುವುದರಿಂದ ಕಣ್ಣಿನ ರೆಟಿನಾವನ್ನು ರಕ್ಷಿಸುತ್ತದೆ ಅಲ್ಲದೇ ಕುರುಡುತನ ಬರದಂತೆ ರಕ್ಷಿಸುತ್ತದೆ. ಕ್ಯಾರೆಟ್ ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್ ನೈಟ್ ಬ್ಲೈಂಡನೆಸ್ ನ್ನು ಕಡಿಮೆ ಮಾಡುತ್ತದೆ. ಬಾದಾಮಿಯನ್ನು ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಬಾದಾಮಿಯಲ್ಲಿರುವ ನ್ಯೂಟ್ರಿಷಿಯನ್ಸ್ ಹೃದಯ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ವಾಲ್ ನಟ್ ಅಥವಾ ಅಕ್ರೋಟ್ ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಿಹಿ ಗೆಣಸನ್ನು ಸೇವಿಸುವುದರಿಂದ ಕಣ್ಣಿನ ನರದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸೇವಿಸುವ ಆಹಾರದಲ್ಲಿ ಕಾಳು ಮೆಣಸನ್ನು ಸೇರಿಸಿ ತಿನ್ನುವುದರಿಂದ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.