ಬ್ರಹ್ಮಾಂಡ ಸೃಷ್ಟಿಕರ್ತನಾದ ಬ್ರಹ್ಮದೇವನು ತನ್ನ ಸ್ವಂತ ಮಗಳಾದ ಸರಸ್ವತಿಯನ್ನು ವಿವಾಹವಾಗುತ್ತಾನೆ. ಸಾಕ್ಷಾತ್ ಬ್ರಹ್ಮದೇವನು ತನ್ನ ಸ್ವಂತ ಮಗಳನ್ನು ವಿವಾಹವಾದನು ಎಂಬ ವಿಷಯವನ್ನು ಕೇಳಿ ಎಲ್ಲರೂ ಆಶ್ಚರ್ಯ ಪಡುವುದು ಸಹಜವೇ. ಹಿಂದೂ ಧರ್ಮವು ಅನೇಕ ಪುರಾಣ ಕಥೆಗಳ ಮೂಲಕ ಬದುಕಿನ ತತ್ವವನ್ನು ಜಗತ್ತಿಗೆ ಸಾರುತ್ತಿದೆ. ಆದರೆ ಕೆಲವು ಕಥೆಗಳನ್ನು ನಾವು ಯಥಾವತ್ತಾಗಿ ಸ್ವೀಕರಿಸದೆ ಗೊಂದಲಕ್ಕೊಳಗಾಗುತ್ತ ಇದ್ದೇವೆ. ಯಾವುದೇ ಕಥೆಯಾಗಲೀ ಅದನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಅದರಲ್ಲಿನ ನಿಜಾಂಶ ನಮಗೆ ತಿಳಿಯುತ್ತದೆ. ಜನರಿಗೆ ಕಥೆಗಳ ಮೂಲಕ , ಚಿಂತನೆಗಳ ಮೂಲಕ ಬದುಕಿನ ಸತ್ಯವನ್ನು ಹೇಳುವ ಧರ್ಮವೇ ಹಿಂದೂ ಧರ್ಮವಾಗಿದೆ. ಈ ಲೇಖನದ ಮೂಲಕ ನಾವು ಸನಾತನ ಧರ್ಮದಲ್ಲಿ ಬರುವ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನ ಬಗ್ಗೆ ತೆಗೆದುಕೊಳ್ಳೋಣ.
ಬ್ರಹ್ಮ ಮತ್ತು ಸರಸ್ವತಿ ಇವರ ಕುರಿತಾಗಿ ಅನೇಕ ಕಥೆಗಳು ಮತ್ತು ಊಹಾಪೋಹಗಳು ಇವೆ. ಒಂದು ಕಥೆ ಸರಸ್ವತಿಯು ಬ್ರಹ್ಮನ ಬಾಯಿಂದ ಜನಿಸಿದಳು ಎಂದು ಹೇಳಿದರೆ ಇನ್ನೊಂದು ಕಥೆಯೂ ಆಕೆಯು ಬ್ರಹ್ಮನ ವಿರ್ಯದಿಂದ ಜನಿಸಿದಳು ಎಂದು ಹೇಳುತ್ತದೆ. ಒಟ್ಟಿನಲ್ಲಿ ಸರಸ್ವತಿಯು ಬ್ರಹ್ಮನ ಮೂಲಕ ಜನಿಸಿದ ಕಾರಣಕ್ಕೆ ಆಕೆಯನ್ನು ಬ್ರಹ್ಮನ ಮಗಳು ಎಂದು ಕರೆಯಲಾಗುತ್ತದೆ. ಈಗಿರುವ ಪ್ರಶ್ನೆ ಎಂದರೆ , ಅತ್ಯಂತ ಸಂಸ್ಕಾರವಂತ ಧರ್ಮದಲ್ಲಿ ಮಗಳನ್ನು ಮದುವೆಯಾಗುವ ಕಲ್ಪನೆ ಬ್ರಹ್ಮನಿಗೆ ಹೇಗೆ ಬಂತು? ಎಂದು. ಮಾನವರಲ್ಲಿ ಇಂತಹ ಸಂಬಂಧಗಳನ್ನು ಒಪ್ಪಲು ಕಲ್ಪನೆ ಮಾಡಿಕೊಳ್ಳದೆ ಇರುವಾಗ ದೇವರಲ್ಲಿ ಹೇಗೆ ಸಾಧ್ಯ? ಶಿವನು ಬ್ರಹ್ಮನ ಒಂದು ತಲೆಯನ್ನು ಏಕೆ ಚಿವುಟಿ ಎಸೆಯುತ್ತಾನೆ? ಸರಸ್ವತಿಯು ಸಹ ನಂತರದಲ್ಲಿ ಬ್ರಹ್ಮನನ್ನು ವಿವಾಹ ಆಗಲು ಒಪ್ಪುವುದಾದರೂ ಯಾತಕ್ಕಾಗಿ? ಈ ಎಲ್ಲಾ ಪ್ರಶ್ನೆಗಳಿಗೆ ನಾವಿಲ್ಲಿ ಉತ್ತರವನ್ನು ಕಂಡುಕೊಳ್ಳೋಣ.
ಹಿಂದೂ ಪುರಾಣದಲ್ಲಿ ಸರಸ್ವತಿ ದೇವಿಯ ಜನನದ ಕುರಿತಾಗಿ ಎರಡು ಕಥೆಗಳಿವೆ. ಪುರಾಣಗಳ ಪ್ರಕಾರ , ಬ್ರಹ್ಮ ದೇವನ ವರಪುತ್ರಿ ಸರಸ್ವತಿಯೇ ಹಿಂದೂ ವಿದ್ಯಾ ದೇವತೆ ಆಗಿದ್ದಾಳೆ. ಬ್ರಹ್ಮನಿಗೆ ಸರಸ್ವತಿ ದೇವಿಯ ಸೌಂದರ್ಯವನ್ನು ಕಂಡಾಗ ಆತನಿಗೆ ಸರಸ್ವತಿ ದೇವಿಯ ಜೊತೆಗೆ ರತಿಕ್ರೀಡೆಯಲ್ಲಿ ತೊಡಗುವ ಮನಸ್ಸುಂಟಾಗುತ್ತದೇ.
ಸರಸ್ವತಿಯ ರೂಪಕ್ಕೆ ಮನಸೋತ ಬ್ರಹ್ಮನು ಒಂದೇ ದೃಷ್ಟಿಯಿಂದ ಆಕೆಯನ್ನು ನೋಡಲು ಆರಂಭಿಸುತ್ತಾನೆ. ಇದರಿಂದ ಕೋಪಗೊಂಡ ಸರಸ್ವತಿ ಬ್ರಹ್ಮನ ನೋಟದಿಂದ ತಪ್ಪಿಸಿಕೊಳ್ಳುವುದಕ್ಕೆ ದಿಕ್ಕು ದಿಕ್ಕಿಗೆ ಓಡಾಡುತ್ತಾಳೆ. ಆದರೆ ಬ್ರಹ್ಮದೇವ ಆಕೆ ಹೋದ ಕಡೆಯಲ್ಲಾ ಆಕೆಯನ್ನು ನೋಡುವುದರ ಸಲುವಾಗಿ ನಾಲ್ಕು ದಿಕ್ಕಿಗೂ ತನ್ನ ತಲೆಯನ್ನು ಸೃಷ್ಟಿಸುತ್ತಾನೆ. ಆ ನಾಲ್ಕು ತಲೆಗಳ ನೋಟವನ್ನು ತಪ್ಪಿಸಿಕೊಳ್ಳಲು ಸರಸ್ವತಿಯ ಮೇಲಕ್ಕೆ ಹಾರುತ್ತಾಳೆ ಆಗಲು ಸಹ ಬ್ರಹ್ಮ ತನ್ನ ಐದನೇ ತಲೆಯನ್ನು ಸೃಷ್ಟಿಸಿಕೊಳ್ಳುತ್ತಾನೆ. ಈಗ ಸಂಕಷ್ಟಕ್ಕೆ ಸಿಲುಕಿಸ ಸರಸ್ವತಿ ದೇವಿ ಶಿವನ ಮೊರೆ ಹೋಗುತ್ತಾಳೆ. ಕೋಪಗೊಂಡ ಶಿವನು ಬ್ರಹ್ಮ ನ ಐದನೇ ತಲೆಯನ್ನು ಚಿವುಟಿ ಹಾಕುತ್ತಾನೆ. ತದನಂತರ ಸರಸ್ವತಿ ದೇವಿಯ ಮನವೊಲಿಸಿದ ಬ್ರಹ್ಮ ಆಕೆಯನ್ನು ವಿವಾಹ ಆಗುತ್ತಾನೆ. ಹಾಗೂ ನಂತರ ಸೃಷ್ಟಿ ಕಾರ್ಯವನ್ನು ನಿರ್ವಹಿಸಲು ಬೇಡಿಕೊಳ್ಳುತ್ತಾನೆ. ಇದರಿಂದಲೇ ಮುಂದೆ ಭೂಮಿಯ ಸೃಷ್ಟಿ ಆಗುತ್ತದೆ. ಮುಂದೆ ಬ್ರಹ್ಮ ಸರಸ್ವತಿ ಇಬ್ಬರೂ ಪತಿ ಪತ್ನಿಯರಾಗಿ ಸ್ವಯಂ ಭ್ರುಮರು ಎಂಬ ಪುತ್ರನಿಗೆ ಜನ್ಮ ಕೂಡಾ ನೀಡುತ್ತಾರೆ.
ಈ ಕಥೆಗಳನ್ನು ಕೇಳಿದಾಗ ಪುರಾಣಗಳಲ್ಲಿ ಯಾವುದು ಸತ್ಯ ಯಾವುದು ಸರಿ ಎನ್ನುವ ಪ್ರಶ್ನೆ ನಮಗೆ ಮೂಡುತ್ತದೆ. ಬ್ರಹ್ಮನ ನೋಟದಿಂದ ತಪ್ಪಿಸಿಕೊಳ್ಳಲು ಸರಸ್ವತಿ ದಿಕ್ಕು ದಿಕ್ಕಿಗೆ ಹೋದಾಗ ಸೃಷ್ಟಿಯಾದ ಬ್ರಹ್ಮನ ನಾಲ್ಕು ತಲೆಗಳು ನಾಲ್ಕು ವೆದಾಗಳನ್ನು ಪ್ರತಿನಿಧಿಸುತ್ತವೆ. ಬ್ರಹ್ಮನ ತಲೆ ಎಂದರೆ ಜ್ಞಾನ , ಜ್ಞಾನ ಅಂದರೆ ವೇದ , ವೇದ ಎಂದರೆ ಬ್ರಹ್ಮ ಹೀಗೆ ಬ್ರಹ್ಮನ ಬಾಯಿಂದ ವೇದಗಳು ಹೊಮ್ಮಿದವು ಎಂದು ಹೇಳಲಾಗುತ್ತದೆ. ಸಹಜವಾಗಿ ಬ್ರಹ್ಮನ 4 ತಲೆಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ. ಬ್ರಹ್ಮನ 5ನೇ ತಲೆಯು ಮೃತ್ಯುವಿನ ನಂತರ ನಮಗೆ ಸತ್ಯವನ್ನು ತಿಳಿಸುತ್ತದೆ. ಇದು ನಿಗೂಢವಾಗಿರುವ ಸತ್ಯ. ಸಾವಿನ ನಂತರದ ಸತ್ಯ ರಹಸ್ಯವಾಗಿರುತ್ತದೆ. ಶಿವನೇ ಕಾಲನೂ ಆಗಿದ್ದು ಎಲ್ಲ ಜೀವಗಳ ಲಯಕಾರ ಶಿವ ಆಗಿದ್ದಾನೆ.
ಇನ್ನು ಈಗಿನ ಕಾಲದಲ್ಲಿ ವಿದ್ಯೆ ವಿಜ್ಞಾನದ ಸಂಯೋಗದಿಂದ ಮಾತ್ರ ಸಾಧ್ಯ. ಉದಾಹರಣೆಗೆ ಈಗಿನ ಕಾಲದಲ್ಲಿ ಸಾಕಷ್ಟು ಜನರು ವಿದ್ಯೆಯನ್ನು ಪಡೆದಿದ್ದಾರೆ ಆದರೆ ಅದನ್ನು ಸರಿಯಾಗಿ ಉಪಯೋಗಿಸುವ ಜ್ಞಾನವನ್ನು ಪಡೆದುಕೊಂಡಿಲ್ಲ. ವಿಜ್ಞಾನ ಇರುವವರಿಗೂ ಕೂಡ ಆ ವಿಷಯದ ಕುರಿತಾಗಿ ವಿಧ್ಯೆಯು ಅಷ್ಟೇ ಅವಶ್ಯಕವಾಗಿರುತ್ತದೆ. ಈ ಕಾರಣಕ್ಕಾಗಿ ಜ್ಞಾನ ಎಂದರೆ ಬ್ರಹ್ಮ ಮತ್ತು ವಿದ್ಯೆಯೆಂದರೆ ಸರಸ್ವತಿ ಒಬ್ಬರನ್ನೊಬ್ಬರು ಅರಿತುಕೊಂಡಾಗ ಮಾತ್ರ ನಾವು ಹೆಚ್ಚು ಸಮರ್ಥವಾಗಿ , ಆಳವಾಗಿ ಅಧ್ಯಯನ ನಡೆಸಲು ಸಾಧ್ಯ. ಈ ಮೂಲಕ ಸರಸ್ವತಿ ತನ್ನ ತಂದೆಯನ್ನು ಯಾತಕ್ಕಾಗಿ ವಿವಾಹವಾಗಿದ್ದಳು ಎನ್ನುವುದಕ್ಕೆ ಪುರಾಣಕಥೆಗಳು ಸಾಕ್ಷಿಯಾಗಿವೆ.