ತಲೆ ಕೂದಲು ಉದುರುವುದು, ಡ್ರೈ ಆಗುವುದು ಮುಂತಾದ ಸಮಸ್ಯೆಗಳನ್ನು ಬಹಳಷ್ಟು ಜನರು ಎದುರಿಸುತ್ತಾರೆ. ತಲೆ ಕೂದಲು ಬೆಳೆಯಲು, ನೈಸ್ ಆಗಲು ರೈಸ್ ವಾಟರ್ ಬಳಸಬೇಕು ಮನೆಯಲ್ಲಿಯೇ ರೈಸ್ ವಾಟರ್ ತಯಾರಿಸುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಒಂದು ಕಪ್ ಬಾಸುಮತಿ ರೈಸ್ ನ್ನು ಎರಡು ಸಲ ತೊಳೆದು ನೀರಿನಲ್ಲಿ ಒಂದು ರಾತ್ರಿ ಅಥವಾ 2-3 ಗಂಟೆ ನೆನೆಸಿಡಬೇಕು. ನಂತರ ಅಕ್ಕಿ ಮತ್ತು ನೀರನ್ನು ಸರಿಯಾಗಿ ಮಿಕ್ಸ್ ಮಾಡಿಕೊಳ್ಳಬೇಕು ಆ ನೀರನ್ನು ಬೇರೆ ಪಾತ್ರೆಗೆ ಸೋಸಿಕೊಳ್ಳಬೇಕು. ನಂತರ ಆ ನೀರನ್ನು ಬಿಸಿ ಮಾಡಲು ಇಡಬೇಕು ಇದಕ್ಕೆ ದಾಸವಾಳದ ಹೂವು ಮತ್ತು ಎಲೆಯನ್ನು ತೊಳೆದು ಹಾಕಬೇಕು ಸಣ್ಣ ಉರಿಯಲ್ಲಿ ಕುದಿಸಿದಾಗ ಕಲರ್ ಬಿಡುತ್ತದೆ ಕಲರ್ ಬಿಡುತ್ತಿದ್ದಾಗ ಒಂದು ಸ್ಪೂನ್ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆಯನ್ನು ಹಾಕಬೇಕು ನಂತರ ಮಿಕ್ಸ್ ಮಾಡಿ ಎರಡು ನಿಮಿಷ ಕುದಿಸಬೇಕು.
ಒಂದು ಪಾತ್ರೆಯಲ್ಲಿ ಆಲೋವೆರಾ ಲೋಳೆಯನ್ನು ತೆಗೆದಿಟ್ಟುಕೊಳ್ಳಬೇಕು ಅದನ್ನು ದಾಸವಾಳದ ನೀರನ್ನು ಸ್ವಲ್ಪ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಬೇಕು ಇದನ್ನು ಸೋಸಿ ದಾಸವಾಳದ ನೀರಿಗೆ ಹಾಕಿ ಮಿಕ್ಸ್ ಮಾಡಿದರೆ ರೈಸ್ ವಾಟರ್ ಸಿದ್ಧವಾಯಿತು.
ಈ ವಾಟರ್ ನ್ನು ತಲೆಗೆ ಚೆನ್ನಾಗಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಮೈಲ್ಡ್ ಶಾಂಪೂ ಹಾಕಿ ತಲೆ ಸ್ನಾನ ಮಾಡಬೇಕು ಅಥವಾ ರೈಸ್ ವಾಟರ್ ನ್ನು ರಾತ್ರಿ ಮಲಗುವಾಗ ತಲೆಗೆ ಹಚ್ಚಿ ಬೆಳಗ್ಗೆ ತಲೆ ಸ್ನಾನ ಮಾಡಬಹುದು. ರೈಸ್ ವಾಟರನಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೇರಳವಾಗಿರುವುದರಿಂದ ತಲೆ ಕೂದಲು ಚೆನ್ನಾಗಿ ಬೆಳೆಯುತ್ತದೆ, ತಲೆಕೂದಲು ಶೈನ್ ಆಗಲೂ ಸಹಾಯಕಾರಿಯಾಗಿದೆ.
ಇದರಲ್ಲಿ ದಾಸವಾಳ, ಆಲೋವೆರಾ ಇರುವುದರಿಂದ ತಲೆ ಕೂದಲು ಉದ್ದವಾಗಿ ಬೆಳೆಯುವುದರೊಂದಿಗೆ ನೈಸ್ ಆಗುತ್ತದೆ. ಆಲೋವೆರಾ ಆಗದೆ ಇದ್ದವರು ಅದನ್ನು ಹಾಕದೆ ಇರಬಹುದು. ಇದಕ್ಕೆ ಯಾವುದೇ ಕೆಮಿಕಲ್ ಹಾಕದೆ ಇರುವುದರಿಂದ ಉತ್ತಮವಾಗಿರುತ್ತದೆ.