ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೋನ್ ಬನೆಗಾ ಕರೊಡ್ಪತಿ ಕಾರ್ಯಕ್ರಮ ಈಗಾಗಲೇ ಯಶಸ್ವಿ ೧೨ ಸೀಸನ್ ಗಳನ್ನು ಮುಗಿಸಿದೆ. ಈಗ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋಹಿತಾ ಶರ್ಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸುಲಭವಾಗಿ ಉತ್ತರಿಸಿ ನಂತರ ಏಳು ಕೋಟಿ ಹಣವನ್ನು ಗೆಲ್ಲದಂತೆ ಮಾಡಿದ ಪ್ರಶ್ನೆ ಇದು. ಈ ಸೀಸನ್ ನ ಕೋಟಿ ಗೆದ್ದ ಎರಡನೇ ವ್ಯಕ್ತಿ ಮೊಹಿತಾ ಶರ್ಮಾ ಆಗಿದ್ದರೆ. ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
2000 ದಲ್ಲಿ ಪ್ರಾರಂಭವಾಗಿ ಈ ವರೆಗೆ 12 ಸೀಸನ್ ಪ್ರಸಾರವಾಗಿರುವ ಕೋನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ ಹಾಗೂ ಅದರ ಬದಲಿಗೆ ಅದರ ವೀಕ್ಷಕರು ಸಹ ಇನ್ನೂ ಹೆಚ್ಚಾಗುತ್ತಲೇ ಇದ್ದಾರೆ. ಅಮಿತಾಬ್ ಬಚ್ಚನ್ ನಡೆಸಿಕೊಡುವ ಈ ಶೋ ಹಲವಾರು ಮಂದಿಯನ್ನು ಕೋಟ್ಯಧೀಶ್ವರರನ್ನಾಗಿಸಿದೆ. ಸಾವಿರಾರು ಮಂದಿಗೆ ಲಕ್ಷಾಂತರ ಹಣ ಮಾಡಿಕೊಟ್ಟಿದೆ. ಈಗಲೂ ಮಾಡಿಕೊಡುತ್ತಿದೆ. ಈ ಮೂಲಕ ಎಷ್ಟೋ ಜನರು ತಮ್ಮ ತಮ್ಮ ಕನಸುಗಳನ್ನು ನನಸು ಮಾಡಿಕೊಂಡಿದ್ದಾರೆ ಹಾಗೂ ಇನ್ನೂ ಎಷ್ಟೋ ಜನರು ಅವರವರ ಕಷ್ಟದ ಸಮಯಕ್ಕೆ ಉಪಯೋಗ ಮಾಡಿಕೊಂಡಿದ್ದಾರೆ. ಎಂದಿನ ಹಾಗೇ ಈ ಬಾರಿ ಕೆಬಿಸಿಯ 12ನೇ ಸೀಸನ್ ನಡೆಯುತ್ತಿದ್ದು, ಈವರೆಗೆ ಇಬ್ಬರು ಕೋಟ್ಯಧಿಪತಿಗಳಾಗಿದ್ದಾರೆ. ಆದರೆ ಇದರಲ್ಲಿ ವಿಶೇಷವೆಂದರೆ ಕೋಟಿ ಗೆದ್ದ ಇಬ್ಬರೂ ಸಹ ಮಹಿಳೆಯರೆ ಆಗಿದ್ದು ಹೆಣ್ಣುಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದಂತಿದೆ. ಮೊದಲಿಗೆ ದೆಹಲಿಯ ನಾಜಿಯಾ ನಸಿಮ್ ಕೋಟ್ಯಧಿಪತಿ ಆದರೆ, ನವೆಂಬರ್ 17 ರ ರಾತ್ರಿ ಪ್ರಸಾರವಾದ ಶೋನಲ್ಲಿ ಮೋಹಿತಾ ಶರ್ಮಾ ಕೋಟ್ಯಧಿಪತಿ ಆದರು.
ಮೋಹಿತಾ ಶರ್ಮಾ ಮೂಲತಃ ವೃತ್ತಿಯಲ್ಲಿ ಐಪಿಎಸ್ ಅಧಿಕಾರಿ. ಇವರು ಮೊದಲ ದಿನದಲ್ಲಿ 9 ಪ್ರಶ್ನೆಗಳಿಗೆ ಉತ್ತರಿಸಿದ್ದರು. ನವೆಂಬರ್ 16 ರಂದು ನಡೆದ ಎಪಿಸೋಡ್ ನಲ್ಲಿ ಹಾಟ್ಸೀಟ್ ಗೆ ಆಯ್ಕೆ ಆಗಿ ಬಂದು ಮೊದಲ ದಿನವೇ 9 ಪ್ರಶ್ನೆಗಳಿಗೆ ಉತ್ತರಿಸಿ ಕೋಟಿ ಗೆಲ್ಲುವತ್ತ ಮುಖ ಮಾಡಿದ್ದರು.
ನಂತರ ನವೆಂಬರ್ 17 ರಂದು ಅದ್ಭುತವಾಗಿ ಆಡಿದ ಮೋಹಿತಾ ಶರ್ಮಾ ಒಂದು ಕೋಟಿ ಪ್ರಶ್ನೆಗೆ ಆರಾಮಾಗಿ ಉತ್ತರಿಸಿ, ಈ ಸೀಸನ್ನ ಎರಡನೇ ಕೋಟ್ಯಧಿಪತಿ ಎನಿಸಿಕೊಂಡರು. ಕೋಟಿ ಪ್ರಶ್ನೆಗೆ ಉತ್ತರಿಸುವ ವೇಳೆಗೆ ಅವರು ಎಲ್ಲಾ ಲೈಫ್ಲೈನ್ ಗಳನ್ನು ಬಳಸಿಕೊಂಡಿದ್ದರು. ಆಟವನ್ನು ಕ್ವಿಟ್ ಮಾಡಿ ಒಂದು ಕೋಟಿ ಹಣದೊಂದಿಗೆ ಶೋ ದಿಂದ ಹೊರನಡೆದರು. ನನ್ನ ಪತಿ 20 ವರ್ಷದಿಂದ ಆ ಶೋಗೆ ಬರಲು ಯತ್ನಿಸುತ್ತಿದ್ದರು ಆಗಿರಲಿಲ್ಲ ನಾನು ಅವರ ಆಸೆ ಪೂರೈಸಿದೆ ಎಂದು ಮೋಹಿತಾ ಹೇಳಿದ್ದಾರೆ.
ಇನ್ನು ಏಳು ಕೋಟಿ ರೂಪಾಯಿ ಗೆಲ್ಲುವ ಅವಕಾಶವಿದ್ದ ಮೋಹಿತಾ ಶಾರ್ಮಾ ಅವರಿಗೆ ಅಷ್ಟು ಹಣವನ್ನು ಗೆಲ್ಲಲು ಆಗದೇ ಅವರು ಉತ್ತರಿಸಲು ಆಗದೇ ಇರುವ ಪ್ರಶ್ನೆ ಹಾಗೂ ಅದರ ಉತ್ತರ ಈ ರೀತಿಯಾಗಿವೆ.
‘ಬಾಂಬೆಯ ವಾಡಿಯ ಗ್ರೂಫ್ನಿಂದ ನಿರ್ಮಾಣವಾಗಿ 1817 ರಲ್ಲಿ ಉದ್ಘಾಟನೆಗೊಂಡು, ಈಗಲೂ ಕೆಲಸ ಮಾಡುತ್ತಿರುವ ಹಳೆಯ ಯುದ್ಧನೌಕೆಯ ಹೆಸರೇನು?’ ಇದು 7 ಕೋಟಿಯ ಪ್ರಶ್ನೆ. ಇದರ ಆಯ್ಕೆಗಳು ಈ ರೀತಿಯಾಗಿದ್ದವು. a) ಎಚ್ಎಂಎಸ್ ಮಿಂಡೇನ್, b) ಎಚ್ಎಂಎಸ್ ಕಾರ್ನ್ವಾಲೀಸ್, c) ಎಚ್ಎಂಎಸ್ ಟ್ರಿಂಕೊಮಾಲಿ, d) ಎಚ್ಎಂಎಸ್ ಮೀನೆ. ಇದರ ಸರಿ ಉತ್ತರ b) ಎಚ್ಎಂಎಸ್ ಟ್ರಿಂಕೊಮಾಲಿ.